Shilpa Shetty Fitness Story: ಗಾಯವಾದ್ರೂ ಲೆಕ್ಕಿಸದೇ ಗಾಲಿಕುರ್ಚಿಯ ಮೇಲೆ ಕುಳಿತು ಯೋಗ ಹೇಳಿಕೊಟ್ಟ ನಟಿ ಶಿಲ್ಪಾ ಶೆಟ್ಟಿ

ನಟಿ ಮತ್ತು ಫಿಟ್ನೆಸ್ ಪ್ರೇಮಿ ಶಿಲ್ಪಾ ಶೆಟ್ಟಿ ಅವರಿಗೆ ಕಾಲಿಗೆ ಗಾಯವಾಗಿದೆ. ಆದರೂ ಸಹ ಅವರು ವರ್ಕೌಟ್ ಯೋಗ ಮಾಡುವುದನ್ನು ನಿಲ್ಲಿಸಿಲ್ಲ. ತಾವು ಗಾಲಿ ಕುರ್ಚಿಯ ಮೇಲೆ ಕುಳಿತು ಮೊಣಕಾಲು ಮತ್ತು ಬೆನ್ನುನೋವಿಗೆ ಕೆಲವು ಯೋಗ ಆಸನಗಳನ್ನು ಹೇಳಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

 • Share this:
  ಆರೋಗ್ಯದ (Health) ಬಗ್ಗೆ ಗಂಭೀರತೆ (Serious) ಹಾಗೂ ಹೆಚ್ಚು ಕಾಳಜಿ (Care) ಉಳ್ಳವರು ಒಂದು ದಿನವೂ ಚೀಟಿಂಗ್ (Cheat) ಮಾಡುವುದಿಲ್ಲ. ಅಂದ್ರೆ ಅವರ ಡಯಟ್ ಪ್ಲಾನ್ (Diet Plan), ಲೈಫ್ ಸ್ಟೈಲ್, ವ್ಯಾಯಾಮ (Exercise) ಮಾಡುವುದು ಇದ್ಯಾವುದನ್ನೂ ಒಂದು ದಿನಕ್ಕೂ ಬಿಡಲ್ಲ. ಏನೇ ಆಗಲಿ, ಎಷ್ಟೇ ಬ್ಯುಸಿ ಆಗಿದ್ರೂ ಸಹ ತಮ್ಮ ವರ್ಕೌಟ್, ಡಯಟ್ ಬಿಡಲ್ಲ. ಇಷ್ಟು ಕಠಿಣವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ರೀತಿಯ ತಪಸ್ಸು ಮಾಡಿದಂತೆಯೇ. ಪ್ರತಿಕೂಲ ಸಂದರ್ಭಗಳಲ್ಲಿಯೂ ಕೆಲವರು ಫಿಟ್‌ನೆಸ್ ವರ್ಕೌಟ್‌ಗಳನ್ನು ಬಿಡಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದ್ರೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕುಂದ್ರಾ.

  ಗಾಲಿಕುರ್ಚಿಯ ಮೇಲೆ ಕುಳಿತುಕೊಂಡೇ ಯೋಗಾಸನ ಹೇಳಿದ ನಟಿ ಶಿಲ್ಪಾ ಶೆಟ್ಟಿ

  ನಟಿ ಮತ್ತು ಫಿಟ್ನೆಸ್ ಪ್ರೇಮಿ ಶಿಲ್ಪಾ ಶೆಟ್ಟಿ ಅವರಿಗೆ ಕಾಲಿಗೆ ಗಾಯವಾಗಿದೆ. ಆದರೂ ಸಹ ಅವರು ವರ್ಕೌಟ್, ಯೋಗ ಮಾಡುವುದನ್ನು ನಿಲ್ಲಿಸಿಲ್ಲ. ತಮ್ಮ ಕಾಲಿಗೆ ಆಗಿರುವ ಗಾಯದ ನಡುವೆಯೂ ಶಿಲ್ಪಾ ವರ್ಕೌಟ್ ಮುಂದುವರೆಸಿದ್ದಾರೆ. ಗಾಲಿಕುರ್ಚಿಯ ಮೇಲೆ ಕುಳಿತುಕೊಂಡೇ, ಜನರಿಗೆ ಮೊಣಕಾಲು ಮತ್ತು ಬೆನ್ನುನೋವಿಗೆ ಕೆಲವು ಯೋಗ ಆಸನಗಳನ್ನು ಹೇಳಿ ಕೊಟ್ಟಿದ್ದಾರೆ.

  ತಾವು ಗಾಲಿ ಕುರ್ಚಿಯ ಮೇಲೆ ಕುಳಿತು ಮೊಣಕಾಲು ಮತ್ತು ಬೆನ್ನುನೋವಿಗೆ ಕೆಲವು ಯೋಗ ಆಸನಗಳನ್ನು ಹೇಳಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.  ಶಿಲ್ಪಾ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಯೋಗ ಮತ್ತು ಫಿಟ್‌ನೆಸ್‌ಗೆ ಪ್ರೇರೇಪಿಸಿದ್ದಾರೆ.

  ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

  ಕಳೆದ 10 ದಿನಗಳಿಂದ ನಟಿ ಶಿಲ್ಪಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಹೆಚ್ಚು ಹೊತ್ತು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಎಂದಿದ್ದಾರೆ.

  ದೇಹಕ್ಕೆ ಯೋಗ, ವ್ಯಾಯಾಮ ಮಾಡುವುದು ಅತ್ಯವಶ್ಯಕ

  ಶಿಲ್ಪಾ ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಗಾಲಿಕುರ್ಚಿಯ ಮೇಲೆ ಕುಳಿತು ಯೋಗಾಸನ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ದೇಹವನ್ನು ಚಲಿಸುತ್ತಿರಬೇಕು. ಇದನ್ನು ನಿಲ್ಲಿಸಲು ಯಾವುದೋ ಒಂದು ಕಾರಣ ಸಾಕು. ಗಾಯದಿಂದಾಗಿ ನಾನು ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ.

  ಆದರೂ ಸಹ ನಿಷ್ಕ್ರಿಯತೆ ಬೇಸರ ತರಿಸುತ್ತದೆ. ನೀವು ಮನಸ್ಸು ಮಾಡಿದರೆ ನಿಮ್ಮ ದಿನಚರಿಯಲ್ಲಿ ಬದಲಾವಣೆ ತರಬಹುದು. ಯಾವುದೇ ಅಡೆತಡೆ ಬಂದರೂ ನಿವಾರಿಸಬಹುದು ಎಂದಿದ್ದಾರೆ.

  ನಿಮಗೆ ಮೊಣಕಾಲು ಅಥವಾ ಬೆನ್ನು ನೋವು ಇದ್ದರೆ, ನೀವು 3 ಯೋಗಾಸನಗಳನ್ನು ನಿತ್ಯವೂ ಮಾಡುವುದು ಮುಖ್ಯವಾಗುತ್ತದೆ. ಶಿಲ್ಪಾ ಅವರ ಆರೋಗ್ಯ ದಿನಚರಿಯಲ್ಲಿ ಬೆನ್ನುಮೂಳೆ ಮತ್ತು ಬೆನ್ನಿನ ಸ್ನಾಯುಗಳ ನಮ್ಯತೆ ಬಲಪಡಿಸಲು ಮತ್ತು ಸುಧಾರಿಸಲು ಮಾಡುವ ಯೋಗಾಸನಗಳು ಸೇರಿವೆ. ಈ ಯೋಗಾಸನಗಳು ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿ ಎಂದು ಹೇಳಿದ್ದಾರೆ.

  ಪರ್ವತಾಸನ

  ಪರ್ವತಾಸನವು ಬೆನ್ನುಮೂಳೆಯನ್ನು ಮೇಲಕ್ಕೆ ಚಾಚುವ ಆಸನ ಆಗಿದೆ. ಇದನ್ನು ಪರ್ವತ ಭಂಗಿ ಎಂದೂ ಕರೆಯುತ್ತಾರೆ. ಇದು ಬೆನ್ನಿನ ಮೂಳೆಗೆ ಸ್ಥಿರತೆ ಮತ್ತು ಶಕ್ತಿ ನೀಡುತ್ತದೆ.

  ಪರ್ವತಾಸನ ಮಾಡುವ ವಿಧಾನ ಯಾವುದು?

  ತಲೆಯನ್ನು ತೋಳುಗಳ ನಡುವೆ ಇರಿಸಿ, ಉಸಿರಾಡುತ್ತ ಬಲಕ್ಕೆ ಬಾಗಿ. ನಂತರ ಬೆನ್ನುಮೂಳೆಯನ್ನು ಸೊಂಟದ ಕೆಳಗೆ ಬಗ್ಗಿಸದೆ ಒಂದು ಬದಿಗೆ ತಿರುಗಿಸಿ. ಉಸಿರಾಡುತ್ತ ತಕ್ಷಣವೇ 3 ಸೆಕೆಂಡುಗಳಲ್ಲಿ ಕೇಂದ್ರ ಸ್ಥಾನಕ್ಕೆ ಹಿಂತಿರುಗಿ. ಒಂದು ಬಾರಿ ಪೂರ್ಣಗೊಳಿಸಿದ ನಂತರ ಮೂರು ಸೆಕೆಂಡುಗಳ ಕಾಲ ಉಸಿರಾಡಿ, ತದನಂತರ ಮತ್ತೆ ಇನ್ನೊಂದು ಬದಿಗೆ ಅದೇ ರೀತಿ ಪುನರಾವರ್ತಿಸಿ.

  ಉತ್ತಿತ ಪಾರ್ಶ್ವಕೋನಾಸನ

  ವಿಸ್ತೃತ ಸೈಡ್ ಆಂಗಲ್ ಭಂಗಿ ಅಥವಾ ಉತ್ತಿತ ಪಾರ್ಶ್ವಕೋನಾಸನವು ಯೋಗ ವ್ಯಾಯಾಮದ ಸಮಯದಲ್ಲಿ ಮಾಡುವ ಆಸನಗಳಲ್ಲಿ ಒಂದಾಗಿದೆ. ಈ ಭಂಗಿಯು ಸೊಂಟ, ಬೆನ್ನುಮೂಳೆ, ಸೊಂಟ ಮತ್ತು ಭುಜಗಳನ್ನು ಸಮರ್ಪಕವಾಗಿ ಹಿಗ್ಗಿಸಲು ಅನುವು ಮಾಡಿ ಕೊಡುತ್ತದೆ. ಇದು ಎದೆ ಮತ್ತು ಶ್ವಾಸಕೋಶವನ್ನು ವಿಸ್ತರಿಸುತ್ತದೆ.

  ಮತ್ತು ಕಿಬ್ಬೊಟ್ಟೆಯ ಅಂಗಗಳಿಗೆ ಉತ್ತೇಜನ ನೀಡುತ್ತದೆ. ಇದು ಕಾಲು, ಮೊಣಕಾಲು ಮತ್ತು ಕಣಕಾಲುಗಳನ್ನು ಬಲಪಡಿಸುತ್ತದೆ. ಜೊತೆಗೆ ವಿಸ್ತರಿಸುತ್ತದೆ. ನಿಮ್ಮ ದೇಹವನ್ನು ಹಿಗ್ಗಿಸಲು ಮತ್ತು ಬಲಪಡಿಸಲು ಈ ಯೋಗ ಆಸನ ಮಾಡಿ.

  ಭಾರದ್ವಾಜಾಸನ

  ಭಾರದ್ವಾಜಾಸನ ಆಧುನಿಕ ಯೋಗದ ಭಂಗಿಯಾಗಿದೆ. ಇದು ತಿರುಚುವಿಕೆ ಹೊಂದಿದೆ. ಗರ್ಭಿಣಿಯರು ಈ ಆಸನ  ಮಾಡುವುದನ್ನು ತಪ್ಪಿಸಿ.

  ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

  ಭಾರದ್ವಾಜಾಸನ ಮಾಡುವುದು ಹೇಗೆ?

  ಬಲಗೈಯನ್ನು ಹಿಂಭಾಗದಲ್ಲಿ ಮತ್ತು ಎಡಗೈಯನ್ನು ಬಲ ಮೊಣಕಾಲಿನ ಕೆಳಗೆ ಇರಿಸಿ. ಮತ್ತು ನಿಮ್ಮ ಮೊಣಕಾಲಿನ ಕಡೆಗೆ ಬೆರಳು ತೋರಿಸಿ. ಮುಂಡವನ್ನು ಬಗ್ಗಿಸುವಾಗ ಮತ್ತು ನಿಮ್ಮ ಎಡ ಮೂಳೆಯನ್ನು ಸ್ವಲ್ಪ ಭಾರವಾಗಿಸಿ ಉಸಿರನ್ನು ಬಿಡಿ. ಬೆನ್ನುಮೂಳೆಯನ್ನು ಹಿಗ್ಗಿಸುವಾಗ ಉಸಿರಾಡಿ. ಮತ್ತೊಮ್ಮೆ ನಿಮ್ಮ ಮುಂಡದ ಬದಿಗೆ ತಿರುಗಿ, ನಿಮ್ಮ ನೋಟವನ್ನು ಬಲಕ್ಕೆ ತಿರುಗಿಸಿ.
  Published by:renukadariyannavar
  First published: