Shilpa Shetty: ಉಗ್ರಾವತಾರ ತಾಳಿದ ಶಿಲ್ಪಾ ಶೆಟ್ಟಿ! ಫೇಮಸ್​ ಡೈರೆಕ್ಟರ್​ಗೆ ಬಾಟಲಿಯಿಂದ ಹೊಡೆದ ನಟಿ

ಈ ರಿಯಾಲಿಟಿ ಶೋ ಶೂಟಿಂಗ್​ ವೇಳೆ ನಟಿ ಶಿಲ್ಪಾ ಶಿಟ್ಟಿ ಉಗ್ರಾವತಾರ ತಾಳಿದ್ದಾರೆ. ಕೋಪಗೊಂಡ ನಟಿ ಶಿಲ್ಪಾ ಶೆಟ್ಟಿ ಮಾಡಿದ್ದನ್ನು ನೀವು ನೋಡಿದರೆ, ಶಾಕ್​ ಆಗ್ತಿರ. ಅರೇ ಅಂಥಾದ್ದು ಏನ್​ ಮಾಡಿದ್ದಾರೆ ಅಂತ ಕುತೂಹಲ ಜಾಸ್ತಿಯಾಗುತ್ತಿದೆಯಾ? ಮುಂದೆ ನೋಡಿ

ನಿರ್ದೇಶಕನಿಗೆ ಬಾಟಲಿಯಿಂದ ಹೊಡೆದ ನಟಿ

ನಿರ್ದೇಶಕನಿಗೆ ಬಾಟಲಿಯಿಂದ ಹೊಡೆದ ನಟಿ

  • Share this:
ಗಂಡನ ಸೆಕ್ಸ್​ ರಾಕೆಟ್​ ಕೇಸ್​(Sex Rocket Case)ನಿಂದ ನೆಮ್ಮದಿ ಹಾಳು ಮಾಡಿಕೊಂಡಿದ್ದ ಶಿಲ್ಪಾ ಶೆಟ್ಟಿ(Shilpa Shetty), ರಾಜ್​ ಕುಂದ್ರಾ(Raj Kundra) ಜೈಲಿನಿಂದ ಹೊರ ಬಂದ ನಂತರ ಆರಾಮಾಗಿದ್ದಾರೆ. ಸಿನಿಮಾ ಶೂಟಿಂಗ್​(Shooting), ರಿಯಾಲಿಟಿ ಶೋ(Reality Show)ಗಳಲ್ಲಿ ಜಡ್ಜ್(Judge) ಆಗಿ ಭಾಗಿಯಾಗುತ್ತಿದ್ದಾರೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಸಖತ್ ಬ್ಯುಸಿ ಅಂತಾನೆ ಹೇಳಬಹುದು. ರಾಜ್​ ಕುಂದ್ರಾ ಕೇಸ್​ನಿಂದಾಗಿ ಮಂಕಾಗಿದ್ದ ಶಿಲ್ಪಾ ಶೆಟ್ಟಿ ಈಗ ಫುಲ್ ಆ್ಯಕ್ಟೀವ್​(Active) ಆಗಿದ್ದಾರೆ. ಫುಲ್​ ಜೋಶ್​ನಲ್ಲಿ ಎಲ್ಲ ಕಾರ್ಯಕ್ರಮಗಳಲ್ಲು ಭಾಗಿಯಾಗುತ್ತಿದ್ದಾರೆ. ಎಲ್ಲರೂ ನಾವು ಮೊದಲಿನ ಶಿಲ್ಪಾ ಶೆಟ್ಟಿಯವರನ್ನು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಿರುತೆರೆ(Small Screen)ಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ (India’s Got Talent) ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಉಗ್ರಾವಾತಾರ ತಾಳಿದ ನಟಿ ಶಿಲ್ಪಾ ಶೆಟ್ಟಿ!

ಈ ರಿಯಾಲಿಟಿ ಶೋ ಶೂಟಿಂಗ್​ ವೇಳೆ ನಟಿ ಶಿಲ್ಪಾ ಶಿಟ್ಟಿ ಉಗ್ರಾವತಾರ ತಾಳಿದ್ದಾರೆ. ಕೋಪಗೊಂಡ ನಟಿ ಶಿಲ್ಪಾ ಶೆಟ್ಟಿ ಮಾಡಿದ್ದನ್ನು ನೀವು ನೋಡಿದರೆ, ಶಾಕ್​ ಆಗ್ತಿರ. ಅರೇ ಅಂಥಾದ್ದು ಏನ್​ ಮಾಡಿದ್ದಾರೆ ಅಂತ ಕುತೂಹಲ ಜಾಸ್ತಿಯಾಗುತ್ತಿದೆಯಾ? ಮುಂದೆ ನೋಡಿ. ಶೂಟಿಂಗ್ ವೇಳೆ ನೋಡ ನೋಡುತ್ತಿದ್ದಂತೆ ಫೇಮಸ್ ಡೈರೆಕ್ಟರ್​ ರೋಹಿತ್​ ಶೆಟ್ಟಿ ಅವರಿಗೆ ಶಿಲ್ಪಾ ಶೆಟ್ಟಿ ಗಾಜಿನ  ಬಾಟಲಿಯಿಂದ ಹೊಡೆದಿದ್ದಾರೆ. ಇದಕ್ಕಿದ್ದ ಹಾಗೇ ಶಿಲ್ಪಾ ಶೆಟ್ಟಿ ಬಾಟಲಿಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಬಾಟಲಿಯಿಂದ ಹೊಡೆದು ನಾನು ಪಾಗಲ್​ ಎಂದ ನಟಿ!

ಮೊನ್ನೆಯಷ್ಟೇ ಗಂಡನ ಕೈಯಲ್ಲಿ ಪಾತ್ರೆ ತೊಳೆಸಿ ರೀಲ್ಸ್​ ಮಾಡಿದ್ದರು ಶಿಲ್ಪಾ ಶೆಟ್ಟಿ. ಕಳೆದ ಕೆಲವು ದಿನಗಳಿಂದ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಸಖತ್​ ಆ್ಯಕ್ಟೀವ್ ಆಗಿದ್ದಾರೆ. ಜನರನ್ನು ರಂಜಿಸುವ ರೀಲ್ಸ್​ ಗಳನ್ನು ಮಾಡುತ್ತಲೇ ಇರುತ್ತಾರೆ. ಶಿಲ್ಪಾ ಶೆಟ್ಟಿಯವರನ್ನು ಬರೋಬ್ಬರಿ 2.4 ಕೋಟಿ ಜನರು ಫಾಲೋ ಮಾಡುತ್ತಾರೆ. ಹೀಗೆ ರೋಹಿತ್​ ಶೆಟ್ಟಿಗೂ ಬಾಟಲಿಯಿಂದ ಹೊಡೆದಿದ್ದು ತಮಾಷೆಗಾಗಿ. ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವ ಸಲುವಾಗಿ ರೋಹಿತ್​ ಶೆಟ್ಟಿಯವರಿಗೆ ಬಾಟಲಿಯಿಂದ ಹೊಡೆದಿದ್ದಾರೆ ಶಿಲ್ಪಾ ಶೆಟ್ಟಿ.ಇದನ್ನೂ ಓದಿ: ಟ್ರೋಲ್ ಮಾಡುವವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ ಖ್ಯಾತ ನಟನ ಮಾಜಿ ಪತ್ನಿ!

8 ಬಾದಾಮಿಗೆ ಜಗಳ ಮಾಡಿದ್ದ ಶಿಲ್ಪಾ ಶೆಟ್ಟಿ!

ಈ ಹಿಂದೆ ಇದೇ ಶೋ ಶೂಟಿಂಗ್​ ವೇಳೆ ಅವರು ಕೇವಲ 8 ಬಾದಾಮಿಗಾಗಿ ಜಗಳ ಮಾಡಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಕಾರ್ಯಕ್ರಮದ ಸೆಟ್​ಗೆ ಬರುವಾಗ ಶಿಲ್ಪಾ ಶೆಟ್ಟಿ ಅವರು ಬಾದಾಮಿ ಬೀಜಗಳನ್ನು ತರುತ್ತಾರೆ. ಶಿಲ್ಪಾ ಶೆಟ್ಟಿ ತಂದ ಬಾದಾಮಿಯನ್ನು ಬೇರೆಯವರು ತಿಂದಿದ್ದರು. ಇದಕ್ಕಾಗಿ ಶಿಲ್ಪಾ ಶೆಟ್ಟಿ ಜಗಳ ಮಾಡಿದ್ದರು. ಈ ವೇಳೆ ಮತ್ತೋರ್ವ ಜಡ್ಜ್​, ಹಿರಿಯ ನಟಿ ಕಿರಣ್​ ಖೇರ್​ ಅವರು ಖಡಕ್​ ಉತ್ತರ ನೀಡಿದ್ದರು. ‘ನೀನು ಎಷ್ಟೊಂದು ಕಂಜೂಸ್. ಇಲ್ಲಿ ನಾವು ತುಂಬ ಜನ ಇದ್ದೇವೆ. ​ನೀನು ಕೇವಲ 6-8 ಬಾದಾಮಿ ತರುತ್ತೀದ್ದೀಯ’ ಎಂದು ಹೇಳಿದ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಇದನ್ನೂ  ಓದಿ: ಹೆಂಡ್ತಿ ಮುಂದೆ ಮಲ್ಟಿ ಮಿಲೇನಿಯರೂ ಆಗ್ಬೇಕು ಬೆಂಡು! ರಾಜ್​ ಕುಂದ್ರಾ ಅವಸ್ಥೆ ನೋಡಿ..

ಗಂಡನ ಕೈಲಿ ಪಾತ್ರೆ ತೊಳಿಸಿದ್ದ ಶಿಲ್ಪಾಶೆಟ್ಟಿ!

ಗಂಡ ರಾಜ್ ಕುಂದ್ರಾ ಅವರನ್ನು ಅಣುಕಿಸಿ ಪಾತ್ರೆ ತೊಳೆಯುವಂತೆ ಪ್ರೇರೇಪಿಸುವ ದೃಶ್ಯಕ್ಕೆ ಇಬ್ಬರು ಲಿಪ್ ಸಿಂಕ್ ಮಾಡಿದ್ದಾರೆ. ಈ ಲಿಂಪ್ ಸಿಂಕ್ ಮಾಡುವ ರೀಲ್ಸ್ ವಿಡಿಯೋಗಳು ಜನ ಸಾಮಾನ್ಯರಿಂದ ಹಿಡಿದು ಸೆಲಿಬ್ರಿಟಿಗಳವರೆಗೂ ಹೆಚ್ಚು ಜನಪ್ರಿಯ. ಸಿನಿಮಾ ನಟ, ನಟಿಯರು ಸಹ ತಮ್ಮಷ್ಟಿದ ಅನೇಕ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ಜೋಡಿ ಶಿಲ್ಪಾ ಮತ್ತು ಕುಂದ್ರಾ ಇದಕ್ಕೆ ಹೊರತಾಗಿಲ್ಲ. ಇವರಿಬ್ಬರ ಪಾತ್ರೆ ತೊಳೆಯುವ ವಿಡಿಯೋ ಸದ್ಯ ಸದ್ದು ಮಾಡ್ತಿದೆ.
Published by:Vasudeva M
First published: