• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Salman Khan: ಬಿಗ್‌ಬಾಸ್ ಸೆಟ್ ನಲ್ಲಿ ಹೇಗಿರ್ತಾರೋ, ಫಿಲ್ಮ್ ಸೆಟ್ ನಲ್ಲೂ ಹಾಗೆ ಇರ್ತಾರಂತೆ ನಟ ಸಲ್ಮಾನ್!

Salman Khan: ಬಿಗ್‌ಬಾಸ್ ಸೆಟ್ ನಲ್ಲಿ ಹೇಗಿರ್ತಾರೋ, ಫಿಲ್ಮ್ ಸೆಟ್ ನಲ್ಲೂ ಹಾಗೆ ಇರ್ತಾರಂತೆ ನಟ ಸಲ್ಮಾನ್!

ಸಲ್ಮಾನ್ ಖಾನ್​ ಮತ್ತು ಶೆಹನಾಜ್ ಗಿಲ್

ಸಲ್ಮಾನ್ ಖಾನ್​ ಮತ್ತು ಶೆಹನಾಜ್ ಗಿಲ್

ಶೆಹನಾಜ್ ಗಿಲ್ ಅವರ ಮೊದಲ ಬಾಲಿವುಡ್ ಸಿನಿಮಾ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ, ಸಲ್ಮಾನ್​ ಖಾನ್ ಬಗ್ಗೆ ಕೆಲವೊಂದು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

  • Share this:

ಬಾಲಿವುಡ್​​ನಲ್ಲಿ (Bollywood) ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎಂದರೆ ಬಹುತೇಕರ ಬಾಯಲ್ಲಿ ಬರುವ ಒಬ್ಬ ನಟನ ಹೆಸರು ಅಂದ್ರೆ ಅದು ಸಲ್ಮಾನ್ ಖಾನ್ (Salman Khan). ಇವರ ಬಗ್ಗೆ ಇಲ್ಲೊಬ್ಬ ಬಾಲಿವುಡ್ ನಟಿ ಹೆಚ್ಚು ಜನರಿಗೆ ಗೊತ್ತಿರದ ವಿಚಾರಗಳನ್ನು ಶೇರ್​ ಮಾಡಿಕೊಂಡಿದ್ದಾರೆ ನೋಡಿ. ನಟಿ ಶೆಹನಾಜ್ ಗಿಲ್ (Shehnaaz Gill) ರಿಯಾಲಿಟಿ ಶೋ ಬಿಗ್‌ಬಾಸ್ ನಲ್ಲಿ ಯಶಸ್ವಿಯಾದ ನಂತರ, ದಿಲ್ಜಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ ಅವರೊಂದಿಗೆ ಪಂಜಾಬಿ ಬ್ಲಾಕ್ ಬಸ್ಟರ್ ‘ಹೊನ್ಸ್ಲಾ ರಖ್’ ಚಿತ್ರದೊಂದಿಗೆ ಅವರು ಶೋ ಬಿಜ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಈಗ ಸಲ್ಮಾನ್ ಖಾನ್ ಅಭಿನಯದ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ನ (Kisi Ka Bhai Kisi Ki Jaan) ಭಾಗವಾಗುವ ಮೂಲಕ, ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ.


ಈ ಚಿತ್ರವು ಈಗಾಗಲೇ ಬಿಡುಗಡೆಯಾಗಿದ್ದು, ನಟಿ ಶೆಹನಾಜ್ ಗಿಲ್ ಅವರು ಮನರಂಜನಾ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದಾರೆ.


ಸಲ್ಮಾನ್ ಜೊತೆ ಒಂದಲ್ಲ ಒಂದು ಚಿತ್ರದಲ್ಲಿ ನಟಿಸ್ತಿನಿ ಅಂತ ಮೊದಲೇ ಅಂದುಕೊಂಡಿದ್ರಂತೆ


ಸಂದರ್ಶನವೊಂದರಲ್ಲಿ ಶೆಹನಾಜ್ ಗಿಲ್ ಅವರನ್ನು ಸಲ್ಮಾನ್ ಖಾನ್ ಅವರ ಚಿತ್ರದಲ್ಲಿ ನಟಿಸುತ್ತೇನೆ ಅಂತ ನೀವು ಎಂದಾದರೂ ಊಹಿಸಿದ್ದೀರಾ ಅಂತ ಕೇಳಿದ್ದಕ್ಕೆ, ನಟಿ “ಹೌದು.. ಊಹಿಸಿದ್ದೆ, ಸಲ್ಮಾನ್ ಖಾನ್ ಚಿತ್ರದ ಭಾಗವಾಗಬೇಕೆಂದು ತನ್ನ ತಾಯಿ ಯಾವಾಗಲೂ ಕಲ್ಪಿಸಿಕೊಂಡಿದ್ದರು” ಎಂದು ಅವರು ಹೇಳಿದರು.


ಇದನ್ನೂ ಓದಿ: ಬ್ಲ್ಯಾಕ್ ಬ್ಯೂಟಿಯಾದ ಸಾನ್ಯಾ ಐಯ್ಯರ್, ಕಪ್ಪು ಬಣ್ಣ ನಿಮಗೆ ಮ್ಯಾಚ್ ಆಗುತ್ತೆ ಎಂದ ಫ್ಯಾನ್ಸ್!


“ಅವರ ಜೊತೆ ಕೆಲಸ ಮಾಡುವುದು ನಿಜವಾಗಿಯೂ ಒಳ್ಳೆಯ ಅನುಭವ ಮತ್ತು ಈಗ ಇಂತಹ ಉತ್ತಮ ಆರಂಭ ದೊರೆತರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳು ಇನ್ನೂ ಸಿಗುತ್ತವೆ” ಎಂದು ನಟಿ ಹೇಳಿದರು.


ಶೆಹನಾಜ್ ಅವರು 'ಭಾಯಿಜಾನ್' ನಿಂದ ಸಾಕಷ್ಟು ಕಲಿತಿದ್ದಾರೆ ಎಂದು ಹೇಳಿದರು. ಅವರು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸೆಟ್ ಗಳಲ್ಲಿ ಅವರನ್ನು ತುಂಬಾನೇ ಪ್ರೇರೇಪಿಸುತ್ತಿದ್ದರು ಮತ್ತು ಆಕೆಗೆ ಮುಂದೆ ಏನು ಮಾಡಬೇಕೆಂದು ಹೇಳುತ್ತಿದ್ದರಂತೆ.


ಬಿಗ್‌ಬಾಸ್ ಸೆಟ್ ನಲ್ಲಿ ಹೇಗಿರ್ತಾರೋ, ಫಿಲ್ಮ್ ಸೆಟ್ ನಲ್ಲೂ ಹಾಗೆ ಅಂತೆ ಸಲ್ಲು ಭಾಯ್


ಬಿಗ್‌ಬಾಸ್ ಅನ್ನು ಆಯೋಜಿಸಿದ್ದ ಸಲ್ಮಾನ್ ಖಾನ್ ಮತ್ತು ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಚಿತ್ರದ ಸೆಟ್ ಗಳಲ್ಲಿ ಅವರೊಂದಿಗಿದ್ದ ಸಲ್ಮಾನ್ ಖಾನ್ ನಡುವಿನ ವ್ಯತ್ಯಾಸದ ಬಗ್ಗೆ ಶೆಹನಾಜ್ ಅವರನ್ನು ಕೇಳಲಾಯಿತು. ಇದಕ್ಕೆ, ನಟಿ ತಕ್ಷಣವೇ "ಅವರು ಬಿಗ್‌ಬಾಸ್ ರಿಯಾಲಿಟಿ ಶೋ ಹೋಸ್ಟ್ ಮಾಡುತ್ತಿರಲಿ ಅಥವಾ ನಿಜ ಜೀವನದಲ್ಲಾಗಲಿ ಒಂದೇ ರೀತಿ ಇರುತ್ತಾರೆ. ಅವರು ಅದೇ ವ್ಯಕ್ತಿತ್ವವನ್ನು ಹೊಂದಿದ್ದಾರೆ.


ಸಲ್ಮಾನ್ ಖಾನ್​ ಮತ್ತು ಶೆಹನಾಜ್ ಗಿಲ್


ಅವರು ಸಲಹೆಗಳನ್ನು ನೀಡುತ್ತಾರೆ, ಆದರೆ ಉಚಿತವಾಗಿ ಅಲ್ಲ. ನೀವು ಅವರಿಗೆ ಸಲಹೆ ಕೇಳಿದರೆ, ಅವರು ನೀಡುತ್ತಾರೆ ಮತ್ತು ಉತ್ತಮ ಸಲಹೆ ನೀಡುತ್ತಾರೆ" ಎಂದು ನಟಿ ಹೇಳಿದರು.


ಶೆಹನಾಜ್ ಅವರ ಚೊಚ್ಚಲ ಬಾಲಿವುಡ್ ಚಿತ್ರದ ಬಗ್ಗೆ ಕೇಳಿದಾಗ "ನಾನು ಸಲ್ಮಾನ್ ಸರ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಅದೇ ರೀತಿಯಲ್ಲಿ ನಾನು ಅದನ್ನು ಈಗ ಮಾಡಿದ್ದೇನೆ” ಅಂತ ಹೇಳಿದರು. ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿರಲಿ, ಅವರ ಶೂಟಿಂಗ್ ಸೆಟ್ ನಲ್ಲಿದ್ದೀರಿ ಎಂಬುದೇ ದೊಡ್ಡ ವಿಷಯ” ಎಂದು ನಟಿ ಹೇಳಿದರು.
ಮುಂದೆ ಯಾವೆಲ್ಲಾ ಚಿತ್ರಗಳಲ್ಲಿ ನಟಿಸಲಿದ್ದಾರೆ ನಟಿ ಶೆಹನಾಜ್ ಗಿಲ್?


ಶೆಹನಾಜ್ ಗಿಲ್ ಈಗಾಗಲೇ ರಿಯಾ ಕಪೂರ್ ಅವರೊಂದಿಗೆ ಒಂದು ಚಿತ್ರಕ್ಕಾಗಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಇದಲ್ಲದೆ, ಅವರು ಹಲವಾರು ಆಫರ್ ಗಳನ್ನು ಪಡೆಯುತ್ತಿದ್ದಾರೆ.


ಸಂದರ್ಶನದಲ್ಲಿ, ನಟಿ ರಾಧಿಕಾ ಆಪ್ಟೆ ಅವರಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹಂಚಿಕೊಂಡಿದ್ದಾರೆ. ಹಿಂದಿ ಅಥವಾ ಪಂಜಾಬಿ ಭಾಷೆಗಳಲ್ಲಿ ತನ್ನ ಹೃದಯಕ್ಕೆ ಹತ್ತಿರವಾಗುವ ಚಿತ್ರಗಳಲ್ಲಿ ಮಾತ್ರ ಕೆಲಸ ಮಾಡುತ್ತೇನೆ ಎಂದು ನಟಿ ಹೇಳಿದರು.

First published: