Shama Sikander: ಚರ್ಮದ ಸುಕ್ಕು ತೆಗೆಸಿಕೊಂಡರೆ ಅದು ಪ್ಲಾಸ್ಟಿಕ್‌ ಸರ್ಜರಿಯಾಗೋದಿಲ್ಲ: ನಟಿ ಶಮಾ ಸಿಕಂದರ್

ಇಂಗ್ಲಿಷ್​ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತನ್ನ ವೈಶಿಷ್ಟ್ಯಗಳನ್ನು ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ವಿಧಾನವಾದ ಬೊಟೊಕ್ಸ್ ಚಿಕಿತ್ಸೆಗೆ ತಾನು ಒಳಗಾಗಿದ್ದೇನೆ ಎಂದು ಶಮಾ ಸಿಕಂದರ್‌ ಹೇಳಿಕೊಂಡಿದ್ದಾರೆ. ಹೌದು, ತಾನು ಬೊಟೊಕ್ಸ್​ ಸರ್ಜರಿ ಮಾಡಿಸಿಕೊಂಡಿದ್ದು, ಪ್ಲಾಸ್ಟಿಕ್​ ಸರ್ಜರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

 ಶಮಾ ಸಿಕಂದರ್

ಶಮಾ ಸಿಕಂದರ್

  • Share this:
ಬಾಲಿವುಡ್​ ನಟಿ ಶಮಾ ಸಿಕಂದರ್​ ಸಿನಿಮಾಗಿಂತ ಹೆಚ್ಚಾಗಿ ಸದ್ದು ಮಾಡಿದ್ದೇ ಪ್ಲಾಸ್ಟಿಕ್​ ಸರ್ಜರಿ ವಿಷಯವಾಗಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಮಾ ತಮ್ಮ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳಿಂದಲೇ ಸಖತ್​ ಸುದ್ದಿಯಲ್ಲಿರುತ್ತಾರೆ. ಟ್ರೋಲ್​ ಮಾಡುವವರ ಬಾಯಿಮುಚ್ಚಿಸುವ ನಟಿ, ತನ್ನ ಇನ್​ಸ್ಟಾಗ್ರಾಂ ಪುಟದಲ್ಲಿ ಹಾಟ್​ ಫೋಟೋಗಳ ಜತೆಗೆ ಬೋಲ್ಡ್​ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇನ್ನು, ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಸಾಕಷ್ಟು ಸಮಯದಿಂದ ಹರಿದಾಡುತ್ತಲೇ ಇದೆ. ಈಗ ಈ ವಿಷಯವಾಗಿ ಬಾಯಿ ಬಿಟ್ಟಿದ್ದಾರೆ ಈ ನಟಿ. ತಮ್ಮ ಲುಕ್​ ಬದಲಿಸಿಕೊಂಡಿರುವ ಬಗ್ಗೆ ಇರುವ ಗಾಳಿ ಮಾತುಗಳ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ಲಾಸ್ಟಿಕ್​ ಸರ್ಜರಿ ವಿಷಯವಾಗಿ ಮಾತನಾಡಿದ್ದಾರೆ. 

ಇಂಗ್ಲಿಷ್​ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತನ್ನ ವೈಶಿಷ್ಟ್ಯಗಳನ್ನು ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ವಿಧಾನವಾದ ಬೊಟೊಕ್ಸ್ ಚಿಕಿತ್ಸೆಗೆ ತಾನು ಒಳಗಾಗಿದ್ದೇನೆ ಎಂದು ಶಾಮಾ ಸಿಕಂದರ್‌ ಹೇಳಿಕೊಂಡಿದ್ದಾರೆ. ಹೌದು, ತಾನು ಬೊಟೊಕ್ಸ್​ ಸರ್ಜರಿ ಮಾಡಿಸಿಕೊಂಡಿದ್ದು, ಪ್ಲಾಸ್ಟಿಕ್​ ಸರ್ಜರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

10 year challenge, botox, cosmetic surgery, plastic surgery, Shama Sikander, Yeh Meri Life Hai, 10 YEAR CHALLENGE, BOTOX, COSMETIC SURGERY, PLASTIC SURGERY, SHAMA SIKANDER, YEH MERI LIFE HAI, ಕಾಸ್ಮೆಟಿಕ್‌ ಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ, ಶಾಮಾ ಸಿಕಂದರ್, ಯೇ ಮೇರಿ ಲೈಫ್‌ ಹೈ, Actress Shama Sikander opened up about Botox and Plastic Surgery stg ae
ಶಮಾ ಸಿಕಂದರ್


ಇನ್ನು, ತಮ್ಮ ಬದಲಾದ ಲುಕ್​ ಕುರಿತಾಗಿ ಮಾತನಾಡಿರುವ ನಟಿ, ಹಿಂದಿನಿಂದ ಇಲ್ಲಿಯವರೆಗೆ ನಟಿಯ ಲುಕ್‌ನಲ್ಲಿ ಬದಲಾವಣೆಯನ್ನು ತರುವಲ್ಲಿ ತನ್ನ ಆಹಾರ ಮತ್ತು ಜೀವನಕ್ರಮಗಳು ದೊಡ್ಡ ಪಾತ್ರವಹಿಸಿವೆ ಎಂದು ಹೇಳಿಕೊಂಡಿದ್ದಾರೆ.


ನಾನು ಬೊಟೊಕ್ಸ್ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಆದರೆ ಅದು ಕರೆಕ್ಟೀವ್‌ ಶಸ್ತ್ರಚಿಕಿತ್ಸೆಯ ವರ್ಗಕ್ಕೆ ಬರುವುದಿಲ್ಲ.ಬೊಟೊಕ್ಸ್​ ಎಂದರೆ ಚರ್ಮದ ಸುಕ್ಕು ತೆಗೆಸಿಕೊಳ್ಳುವ ಚಿಕಿತ್ಸೆ ಅಷ್ಟೆ.  ಯಾವುದೇ ನಟ ಅಥವಾ ನಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ ಜನರು ತಲೆಕೆಡಿಸಿಕೊಳ್ಳಬಾರದು. ಅದು ಅವರು ಕಷ್ಟಪಟ್ಟು ಸಂಪಾದಿಸಿದ ಹಣ. ಜನರು ಸಹಜವಾಗಿ ಅಭಿಪ್ರಾಯಗಳನ್ನು ಹೊಂದಬಹುದು, ಆದರೆ ಟ್ರೋಲಿಂಗ್ ನನಗೆ ಅರ್ಥವಾಗುವುದಿಲ್ಲ. ಟ್ರೋಲ್ ಮಾಡುವವರು ಈಗ ನನ್ನ ಮೇಲೆ ಹೆಚ್ಚು ಪರಿಣಾಮ ಬೀರಲ್ಲ. ಇದಕ್ಕೆ ಕಾರಣ ನಾನು ನಿಯಮಿತವಾಗಿ ಅಭ್ಯಾಸ ಮಾಡುವ ಧ್ಯಾನ. ಅದು ನನಗೆ ಶಾಂತವಾಗಿರಲು ಸಹಾಯ ಮಾಡುತ್ತದೆ ಎಂದು ನಟಿ ಹೇಳಿದ್ದಾರೆ.

ಜನರು ಮೊದಲು ತನ್ನನ್ನು ಟಿವಿಯಲ್ಲಿ ನೋಡಿದಾಗ ತಾನು ಬೆಳೆಯುತ್ತಿರುವ ಹುಡುಗಿಯಾಗಿದ್ದೆ. ಆದರೆ, ಈಗ ವಯಸ್ಸಿಗೆ ತಕ್ಕಂತೆ ಕೆಲವು ಬದಲಾವಣೆಗಳು ಆಗಿವೆ ಎಂದು ಸ್ಪಷ್ಟಪಡಿಸಿದರು. 2004 ರ ಸ್ಲೈಸ್-ಆಫ್-ಲೈಫ್ ಟಿವಿ ಶೋ 'ಯೇ ಮೇರಿ ಲೈಫ್ ಹೈ' ಮೂಲಕ ಶಾಮಾ ಖ್ಯಾತಿ ಪಡೆದರು. ಇದರಲ್ಲಿ ಅವರು ಪೂಜಾ ಪಾತ್ರವನ್ನು ನಿರ್ವಹಿಸಿದ್ದರು ಈ 39 ವರ್ಷ ವಯಸ್ಸಿನ ನಟಿ.

ಇದನ್ನೂ ಓದಿ: Aadya-Pawan Kalyan: ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡ ನಟ ಪವನ್ ಕಲ್ಯಾಣ್ ಮಗಳು ಆದ್ಯಾ..!

ಅಲ್ಲದೆ, 'ತಾನು ಅನೇಕ ವರ್ಷಗಳಿಂದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದೇನೆ. ಇದರಿಂದಾಗಿ ಕೆಲ ಕಾಲ ಉದ್ಯಮದಿಂದ ಹೊರಗುಳಿದಿದ್ದೆ. ಈ ಕಾರಣದಿಂದ ವೀಕ್ಷಕರು ತನ್ನನ್ನು ನೋಡಲು ಆಗಲಿಲ್ಲ. ಆದರೂ, ಧ್ಯಾನ, ನಿಯಮಿತವಾಗಿ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ಒಳಗೊಂಡಿರುವ ಸ್ವ-ಆರೈಕೆ ನಿಯಮವನ್ನು ಅನುಸರಿಸುವ ಮೂಲಕ ತಾನು ತನ್ನ ಜೀವನವನ್ನು ಮರಳಿ ಟ್ರ್ಯಾಕ್‌ಗೆ ತರಲು ಪ್ರಯತ್ನಿಸಿದ್ದೇನೆ. ಈ ಜೀವನಶೈಲಿ ತನ್ನ ಸ್ಕಿನ್‌ ಮೇಲೂ ಬದಲಾವಣೆಯನ್ನು ತಂದಿದೆ. ಜತೆಗೆ ತನ್ನ ದೇಹವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು ಎಂದಿದ್ದಾರೆ.

2020 ರಲ್ಲಿ ಜನಪ್ರಿಯ #10yearchallenge ಮಾಡಿದಾಗ ಅವರ ಅಂದಿನ ಮತ್ತು ಈಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದಾಗ ಶಮಾ ಅವರ ಎರಡೂ ಫೋಟೋಗಳನ್ನು ನೋಡಿ ಹಲವು ವದಂತಿಗಳು ಹರಡಿದ್ದವು. ಇದಕ್ಕೆ ಕಳೆದ ವರ್ಷ ಪ್ರತಿಕ್ರಿಯೆ ನೀಡಿದ್ದ ನಟಿ, 'ಯಾರದ್ದಾದರೂ ಲುಕ್‌ ಬದಲಾಯಿತು ಎಂದ ಮಾತ್ರಕ್ಕೆ ಪ್ರತಿ ಬಾರಿ ಅವರು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದರ್ಥವಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಚಿತಾಗಾರ-ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್​ ವಿತರಿಸಿದ ರಾಗಿಣಿ ದ್ವಿವೇದಿ..!

ಯಾರಾದರೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೂ ಸಹ ಇದು ಬೇರೆಯವರ ಹಣವಾದ್ದರಿಂದ ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ನಟಿ ಟ್ರೋಲ್‌ ಮಾಡುವವರ ವಿರುದ್ಧ ಹರಿಹಾಯ್ದಿದ್ದರು. ಆದರೂ ತಾನು ನಿಯಮಿತವಾಗಿ ಧ್ಯಾನ ಮಾಡಲು ಪ್ರಾರಂಭಿಸಿದಾಗಿನಿಂದ ಟ್ರೋಲ್‌ಗಳಿಂದ ಪ್ರಭಾವಿತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Published by:Anitha E
First published: