• Home
  • »
  • News
  • »
  • entertainment
  • »
  • Viral Video: ಜಾವೇದ್ ಅಖ್ತರ್ ಹೇಗೆ ರೊಮ್ಯಾನ್ಸ್ ಮಾಡ್ತಾರೆ ಅಂತ ಹಾಡಿನ ಮೂಲಕ ಹೇಳಿದ ಶಬಾನಾ ಅಜ್ಮಿ..!

Viral Video: ಜಾವೇದ್ ಅಖ್ತರ್ ಹೇಗೆ ರೊಮ್ಯಾನ್ಸ್ ಮಾಡ್ತಾರೆ ಅಂತ ಹಾಡಿನ ಮೂಲಕ ಹೇಳಿದ ಶಬಾನಾ ಅಜ್ಮಿ..!

ಜಾವೇದ್ ಅಖ್ತರ್ ಹಾಗೂ ಶಬಾನಾ ಅಜ್ಮಿ

ಜಾವೇದ್ ಅಖ್ತರ್ ಹಾಗೂ ಶಬಾನಾ ಅಜ್ಮಿ

Shabana Azmi Singing Video: ಸಿನಿಮಾಗಳಿಗೆ ಹಾಡುಗಳನ್ನು ಬರೆಯುವ ಜಾವೇದ್ ಅಖ್ತರ್ ಪತ್ನಿ ಜೊತೆ ರೊಮ್ಯಾನ್ಸ್ ಮಾಡೋದು ಸಹ ಹಾಡು ಹಾಡುತ್ತಲೇ ಅಂತೆ. ಹೀಗೆಂದು ನಾವು ಹೇಳಿದ್ದಲ್ಲ. ಖುದ್ದು ಶಬಾನಾ ಹೇಳಿಕೊಂಡಿದ್ದಾರೆ. ಅವರ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.

  • Share this:

ಶಬಾನಾ ಅಜ್ಮಿ ಹಾಗೂ ಜಾವೇದ್ ಅಖ್ತರ್ ಅವರು ಪ್ರೀತಿಸಿ ವಿವಾಹವಾಗಿದ್ದು ಗೊತ್ತೇ ಇದೆ. ಪ್ರಾಯೋಗಿಕ ಪಾತ್ರಗಳಿಂದಲೇ ಖ್ಯಾತರಾಗಿರುವ ಶಬಾನಾ ಅಜ್ಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿರುವ ಜಾವೇದ್ ಅಖ್ತರ್ ಅವರ ಆ ದಿನಗಳ ರೊಮ್ಯಾನ್ಸ್ ಹೇಗಿತ್ತು ಅಂತ ಶಬಾನಾ ಅಜ್ಮಿ ಅವರೇ ಹೇಳಿಕೊಂಡಿದ್ದಾರೆ.


ಸಿನಿಮಾಗಳಿಗೆ ಹಾಡುಗಳನ್ನು ಬರೆಯುವ ಜಾವೇದ್ ಅಖ್ತರ್ ಪತ್ನಿ ಜೊತೆ ರೊಮ್ಯಾನ್ಸ್ ಮಾಡೋದು ಸಹ ಹಾಡು ಹಾಡುತ್ತಲೇ ಅಂತೆ. ಹೀಗೆಂದು ನಾವು ಹೇಳಿದ್ದಲ್ಲ. ಖುದ್ದು ಶಬಾನಾ ಹೇಳಿಕೊಂಡಿದ್ದಾರೆ. ಅವರ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ.ಒಮ್ಮೆ ಜಾವೇದ್ ಅಖ್ತರ್ ಸೂಪ್ ಕುಡಿಯುವಾಗ ಸೂಪ್ ತೊಟ್ಟು ಇಕ್ಕುತ್ತಿತ್ತಂತೆ. ಇದನ್ನು ನೋಡಿದ ಶಬಾನಾ ಹೀಗೆ ಕುಡಿದರೆ ಚೆಲ್ಲೋದೆ ಜಾಸ್ತಿಯಾಗುತ್ತದೆ ಎಂದಿದ್ದಾರೆ. ಆಗ ಅದಕ್ಕೆ ಜಾವೇದ್ ಅಖ್ತರ್ ಸೂಪ್ ಕುಡಿಯುವುದರಿಂದ ಹಿಡಿದು ಅದು ಚೆಲ್ಲಿದ ಬಟ್ಟೆಯನ್ನು ಒಗೆಯುವವರೆಗೂ ಹಾಡು ಹಾಡಿದ್ದರಂತೆ.

View this post on Instagram

And the caption is ....??


A post shared by Shabana Azmi (@azmishabana18) on

ಎವರ್ ಗ್ರೀನ್ ರೊಮ್ಯಾಂಟಿಕ್ ಹಾಡು ಅಭಿನಾ ಜಾವೋ ಚೋಡ್ಕೆ ಕೆ ದಿಲ್ ಅಭಿ ಬರಾ ನಹೀ ಹಾಡಿನ ಟ್ಯೂನ್ನಲ್ಲೇ ಸೂಪ್ ಹಾಡನ್ನು ಹಾಡಲಾಗಿತ್ತಂತೆ. ಶಬಾನಾ ಅವರೇ ಹಾಡಿರುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಜೋಡಿಯ ರೊಮ್ಯಾನ್ಸ್ ಹಾಗೂ ಶಬಾನಾ ಅವರ ಇಂಪಾದ ಕಂಠಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.


Mia Khalifa: ಲಾಕ್​ಡೌನ್​ನಲ್ಲೇ ಎರಡನೇ ಮದುವೆಯಾದ ಮಾಜಿ ನೀಲಿ ತಾರೆ ಮಿಯಾ ಖಲೀಫಾ..!


Published by:Anitha E
First published: