ಸಾರಾ ಅಣ್ಣಯ್ಯ ಅನ್ನೋದಕ್ಕಿಂತ ವರೂಧಿನಿ ಅಂದ್ರೆ ಜನಕ್ಕೆ ಬೇಗ ಅರ್ಥ ಆಗುತ್ತೆ. ಹೌದು ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅವರು ಸೀರೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಸಾರಾ ಅಣ್ಣಯ್ಯ ತುಂಬಾ ಬೋಲ್ಡ್ ಹುಡುಗಿ. ಸದಾ ಮಾರ್ಡನ್ ಬಟ್ಟೆಗಳನ್ನೇ ಧರಿಸುತ್ತಾರೆ. ಆದ್ರೆ ಅವರಿಗೆ ಸೀರೆ ಎಂದ್ರೆ ತುಂಬಾ ಇಷ್ಟಂತೆ.
ಸೀರೆ ಫೋಟೋಗಳನ್ನು ಸಾರಾ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸೀರೆ ಮೇಲಿನ ನನ್ನ ಪ್ರೀತಿಗೆ ಕೊನೆ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಸಾರಾ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಾವ್ ಸೂಪರ್, ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ.
ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಆಗಿ ಮಿಂಚಿದ್ರು. ಧಾರಾವಾಹಿ ಮುಕ್ತಾಯವಾಗಿದೆ. ಮುಂದೆ ಏನ್ ಮಾಡ್ತಾರೆ ಎಂದು ಎಲ್ಲರೂ ಕೇಳ್ತಾ ಇದ್ರು.
ಸಾರಾ ಅಣ್ಣಯ್ಯ ಈಗ ದೀಪಿಕಾ ಆಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ವರು ರೀತಿಯೇ ಇಲ್ಲೂ ದರ್ಪ, ಶ್ರೀಮಂತಿಕೆಯ ಮದ ಎದ್ದು ಕಾಣುತ್ತಿದೆ.
ಹೌದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಆಗಿ ಕಾಣಿಸಿಕೊಂಡಿದ್ದಾರೆ. ಹೀರೋ ಸಂಗಮ್ ಪತ್ನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಸಾರಾ ಈ ಧಾರಾವಾಹಿಯಲ್ಲೂ ಅದ್ಭುತವಾಗಿ ನಟನೆ ಮಾಡ್ತಾ ಇದ್ದಾರೆ. ಮಗಳಿಗಾಗಿ ಏನ್ ಬೇಕಾದ್ರೂ ಮಾಡೋಕೆ ತಯಾರಾಗಿದ್ದಾರೆ.
Published by:Savitha Savitha
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ