ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಧಾರಾವಾಹಿ (Serial) ಕನ್ನಡತಿ (Kannadathi) ಸೂಪರ್ ಹಿಟ್ ಆಗಿ ರನ್ ಆಗಿತ್ತು. ಹೆಚ್ಚು ಜನರನ್ನು ಆಕರ್ಷಿಸಿತ್ತು. ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿತ್ತು. ಸದ್ಯ ಧಾರಾವಾಹಿ ಮುಕ್ತಾಯವಾಗಿದೆ. ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇತ್ತು. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡ್ತಾ ಇದ್ದರು. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ (Fans) ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾ ಇದ್ದಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾ ಇದ್ರು. ಈ ಧಾರಾವಾಹಿಯಲ್ಲಿ ವರು ಪಾತ್ರ ಮಾಡಿದ್ದ ಸಾರಾ ಅಣ್ಣಯ್ಯ ಎಲ್ಲರಿಗೂ ಇಷ್ಟ ಆಗಿದ್ದರು. ಸಾರಾ ಅಣ್ಣಯ್ಯ ಈಗ ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗುತ್ತಿರುವ ನನ್ನ ಲಚ್ಚಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಮ್ಮ ಲಚ್ಚಿ ಧಾರಾವಾಹಿ!
ಸ್ಟಾರ್ ಸುವರ್ಣದಲ್ಲಿ ಜನರಿಗೆ ಮನರಂಜನೆ ನೀಡಲು ಹೊಸ ಹೊಸ ಧಾರಾವಾಹಿಗಳನ್ನು ತೆರೆಗೆ ತರುತ್ತಿದೆ. ರಾತ್ರಿ 8 ಗಂಟೆಗೆ ನಮ್ಮ ಲಚ್ಚಿ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗ್ತಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಯೇ ನಮ್ಮ ಲಚ್ಚಿ ಕಥೆ. ಅಪ್ಪ ದೊಡ್ಡ ಸಿಂಗರ್. ಆದ್ರೆ ಇವರ ಜೊತೆಗೆ ಇಲ್ಲ. ಮಗಳಿಗೂ ಅಪ್ಪನಂತೆ ಹಾಡುವ ಗುಣ ಬಂದಿದೆ.
ನನ್ನ ಲಚ್ಚಿಯಲ್ಲಿ ದೀಪಿಕಾ ಆಗಿ ಅಭಿನಯ!
ಸಂಗಮ್ ಹಳ್ಳಿಯಿಂದ ಹೋದ ಮೇಲೆ ದೊಡ್ಡ ಸಿಂಗರ್ ಆಗಿದ್ದಾರೆ. 10 ವರ್ಷಗಳಿಂದ ಇವರನ್ನು ಬಿಟ್ಟರೆ ಬೇರೆ ಹಾಡುಗಾರರು ಇಲ್ಲ ಎನ್ನುವಂತಾಗಿದೆ. ಸಂಗಮ್ ಗಿರಿಜಾಳನ್ನು ಮರೆತು ಬೇರೆ ಮದುವೆ ಆಗಿದ್ದಾನೆ. ಸಂಗಮ್ ಹೆಂಡ್ತಿ ಪಾತ್ರವನ್ನು ಕನ್ನಡತಿಯ ವರೂಧಿನಿ ಮಾಡ್ತಾ ಇದ್ದಾರೆ. ದೀಪಿಕಾ ಆಗಿ ಅಭಿನಯಿಸುತ್ತಿದ್ದಾರೆ.
ಮಗಳ ಜೊತೆ ರೀಲ್ಸ್
ಸಂಗಮ್‍ಗೆ ದೀಪಿಕಾ ಜೊತೆ ಮದುವೆ ಆಗಿದೆ, ರಿಯಾ ಎಂಬ ಮಗಳಿದ್ದಾಳೆ. ರಿಯಾಗೆ ಅಷ್ಟೊಂದು ಹಾಡು ಹೇಳಲು ಬರುವುದಿಲ್ಲ. ಆದ್ರೂ ದೊಡ್ಡ ಸಿಂಗರ್ ಮಾಡಬೇಕು ಎಂದು ದೀಪಿಕಾ ಸ್ಟಾರ್ ಸಿಂಗರ್ ಮಾಡಿ ಎಂದು ಸಂಗಮ್‍ಗೆ ಒತ್ತಾಯ ಮಾಡ್ತಾ ಇದ್ದಾಳೆ. ಧಾರಾವಾಹಿ ಮಗಳು ರಿಯಾ ಜೊತೆ ಸಾರಾ ಅಣ್ಣಯ್ಯ ರೀಲ್ಸ್ ಮಾಡಿದ್ದಾರೆ
View this post on Instagram
ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಸಹ ಫೋಟೋಗಳನ್ನು ನೋಡಿ ಮೆಚ್ಚಿಕೊಳ್ತಾರೆ. ವಾವ್ ಸೂಪರ್, ಕ್ಯೂಟ್, ನೈಸ್ ಎಂದೆಲ್ಲಾ ಕಾಮೆಂಟ್ ಆಗ್ತಾರೆ.
ದೇಶ ಸುತ್ತೋದು ಇಷ್ಟ
ಸಾರಾ ಅಣ್ಣಯ್ಯ ಇಲ್ಲೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಬೇಕಾದ್ದನ್ನು ಪಡೆದೇ ತೀರುತ್ತಾರೆ. ಸಾರಾ ಅಣ್ಣಯ್ಯ ಅವರು ಧಾರಾವಾಹಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಆಗಾಗ ಸುತ್ತಾಟ ನಡೆಸುತ್ತಾರೆ. ದೇಶ ಸುತ್ತುತ್ತಾರೆ. ತಮಗೆ ಇಷ್ಟವಾದ ಸ್ಥಳಗಳನ್ನು ನೋಡಲು ಹೋಗುತ್ತಾರೆ.
ಇದನ್ನೂ ಓದಿ: Kannadathi Sara Annaiah: ಇದ್ಯಾವುದಪ್ಪಾ ಲಡಾಖ್ ಗೊಂಬೆ! ಸಾರಾ ಅಣ್ಣಯ್ಯ ಹೊಸ ಅವತಾರ
ಕಳೆದ ಬಾರಿ ಸೊಂಟದ ವಿಷ್ಯ ಡ್ಯಾನ್ಸ್
ಕಳೆದ ಬಾರಿ ಸಾರಾ ಅವರು ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಡ್ಯಾನ್ಸ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು. ಸುದೀಪ್ ಅವರ ಚೆಂದು ಚಿತ್ರದ ಹಾಡು ರೀಲ್ಸ್ ನಲ್ಲಿ ಎಲ್ಲಾ ಕಡೆ ಸದ್ದು ಮಾಡ್ತಿದೆ. ಆ ಹಾಡಿನ ರೀಲ್ಸ್‍ಗೆ ಸಾರಾ ಸೊಂಟ ಬಳುಕಿಸಿದ್ದರು. ಬ್ಲ್ಯಾಕ್ ಸೀರೆಯಲ್ಲಿ ಡ್ಯಾನ್ಸ್ ಸೂಪರ್ ಎಂದು ಹಲವು ಜನ ಕಾಮೆಂಟ್ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ