Bigg Boss OTT: ಬಿಗ್​ಬಾಸ್​ ಮನೆಗೆ 'ಪುಟ್ಟಗೌರಿ' ಸಾನ್ಯ ಅಯ್ಯರ್ ಗ್ರ್ಯಾಂಡ್​​ ಎಂಟ್ರಿ

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯ ಪಾತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ನಟಿ ಸಾನ್ಯ ಅಯ್ಯರ್ ಇದೀಗ ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್​  ಆಗಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ರು. 

ಸಾನ್ಯ ಅಯ್ಯರ್

ಸಾನ್ಯ ಅಯ್ಯರ್

  • Share this:
ಕನ್ನಡ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು, ಇನ್ನು ಸಾಕಷ್ಟು ಬಾರಿ ಟ್ರೋಲ್‌ಗಳಿಗೆ ಒಳಪಟ್ಟ ಸೀರಿಯಲ್ ಕೂಡ ಆಗಿದೆ. ಈ ಧಾರಾವಾಹಿಯಲ್ಲಿ (Serial) ಗೌರಿಯ ಪಾತ್ರದಲ್ಲಿ ಬಾಲನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ಸಾನ್ಯ ಅಯ್ಯರ್ ಇದೀಗ ಬಿಗ್​ ಬಾಸ್ (Bigg Boss)​ ಮನೆಗೆ ಗ್ರ್ಯಾಂಡ್​  ಆಗಿ ಕಾಲಿಟ್ಟಿದ್ದಾರೆ. ಇತ್ತೀಚಿಗೆ ರಿಯಾಲಿಟಿ ಶೋಗಳಲ್ಲೂ  ಅವರು ಭಾಗವಹಿಸಿದ್ರು.  ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಾನ್ಯ ಅಯ್ಯರ್​ (Sanya Iyar) ಸೋಷಿಯನ್ ಮಿಡಿಯಾದಲ್ಲಿ ಸಖತ್​ ಆಕ್ಟೀವ್ ಆಗಿದ್ದು, ಅಭಿಮಾನಿ ಬಳಗ ಹೊಂದಿದ್ದಾರೆ.

ಅನೇಕ ಚಿತ್ರಗಳಲ್ಲಿ ಸಾನ್ಯ ಅಭಿನಯ

ಸಾನ್ಯ ಅವರು ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕೆಲ ವರ್ಷಗಳ ಹಿಂದೆ ಮಲಯಾಳಂನ 'ಆರಾರೋ..ನೀಯಾರೋ' ಎಂಬ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಾನ್ಯ ಅವರು 'ಗುಲಾಬ್‌ ಜಾಮೂನ್‌' ಎಂಬ ಮೈಕ್ರೋ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

5ನೇ ಸ್ಪರ್ಧಿ ಸಾನಿಯಾ


ಇದನ್ನೂ ಓದಿ: Bigg Boss OTT: ಈ ಮೂರು ಸಂಖ್ಯೆಯ ಕ್ಯಾಂಡಿಡೇಟ್ ಗಳು ಗೆಲ್ತಾರಂತೆ, ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಗುತ್ತಾ?
ಪಾತ್ರಕ್ಕೆ ಬೇಕು ಅದ್ರೆ ಬೋಲ್ಡ್‌ ಆಗಿಯೂ ಸಾನಿಯಾ ಕಾಣಿಸಿಕೊಳ್ಳು ರೆಡಿ ಎಂದು ಹೇಳಿದ್ದ ಸಾನಿಯಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಸಾನಿಯಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಿವಿಧ ರೀತಿಯ ಕಾಸ್ಟ್ಯೂಮ್‌ನಲ್ಲಿ ಸಾನಿಯಾ ಫೋಟೋ ತೆಗೆಸಿಕೊಂಡಿದ್ದಾರೆ.


ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದಿರುವ ಸಾನಿಯಾ ಅಯ್ಯರ್ ತಂದೆ-ತಾಯಿ, ಚಿಕ್ಕಮ್ಮಂದಿರು ಕೂಡ ಕಲಾವಿದರು. ಇವರೆಲ್ಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 8ನೇ ತರಗತಿವರೆಗೆ ನಟಿಸಿದ್ದ ಸಾನ್ಯ ಅಯ್ಯರ್ ಅವರು ಆಮೇಲೆ ಶಿಕ್ಷಣದತ್ತ ಮುಖ ಮಾಡಿದರು. ಪ್ರಸ್ತುತ ಸಾನ್ಯ ಅಯ್ಯರ್ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ, ಸಾನಿಯಾ ಬಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಹೌದು


4ನೇ ಅಭ್ಯರ್ಥಿಯಾಗಿ ಎಂಟ್ರಿ ಕೊಟ್ಟ  ನಟಿ ಸ್ಫೂರ್ತಿಗೌಡ


ಕನ್ನಡ ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಈಗಾಗಲೇ ಆರಂಭವಾಗಿರುವ ಕಾರ್ಯಕ್ರಮದಲ್ಲಿ 3 ಜನ ಸ್ಪರ್ಧಿಗಳು ಬಿಗ್​ ಬಾಸ್​ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇದೀಗ ದೊಡ್ಮನೆಗೆ 4ನೇ ಸ್ಪರ್ಧಿಯ ಪ್ರವೇಶ ಆಗಿದೆ. ಹೌದು, ಕನ್ನಡದ ಸೀರಿಯಲ್​​ ನಟಿ ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್​ ಬಾಸ್​ ಒಟಿಟಿ ಸೀಸನ್ ್ಒಂದರಲ್ಲಿ 4ನೇ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಇನ್ನು, ಇಂದಿನಿಂದ ಪ್ರಾರಂಭವಾಗಿರುವ ಶೋ ವೂಟ್‌ ಆ್ಯಪ್‌ನಲ್ಲಿ (Voot App)   ಸ್ಟ್ರೀಮಿಂಗ್ (Streaming) ಆಗಲಿದೆ.  ಈ ಬಾರಿಯ ಸ್ಪರ್ಧಿಗಳನ್ನು ನೋಡುತ್ತಿದ್ದಲ್ಲಿ ಬಿಗ್​ ಬಾಸ್​ ಎಲ್ಲಾ ಸೀಸನ್​ ನಂತೆಯೇ ಈ ಬಾರಿಯೂ ಪ್ರೇಕ್ಷಕರಿಗೆ ಸಖತ್ ಮಜಾ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.




ಮಲೆನಾಡ ಹುಡುಗಿ ಸ್ಪೂರ್ತಿ ಗೌಡ




ಇನ್ನು, 4ನೇ ಸ್ಪರ್ಧಿಯಾಗಿ ವೇದಿಕೆ ಮೇಲೆ ಬಂದ ಮಲೆನಾಡ ಹುಡುಗಿ ಸ್ಪೂರ್ತಿ ಗೌಡ, ತಮ್ಮ ಕನಸಿನ ಬಗ್ಗೆ ಹೇಳಿಕೊಡಿದ್ದಲ್ಲದೇ ಬೆಂಗಳೂರು ಒಂದು ಮಾಯಾನಗರಿ ಎಂದು ಹೇಳಿದ್ದಾರೆ. ಇದಲ್ಲದೇ ತಾನು  ‘ಮುಂಗಾರು ಮಳೆ’ ಸಿನಿಮಾ ನೋಡಿದ ಮೇಲೆ ನಾನು ನಟಿ ಆಗಬೇಕು ಎಂದು ಕನಸು ಕಂಡೆ. ನನಗೆ ಈ ಜೀವನದಲ್ಲಿ ಏನೇನು ಬೇಕು ಎನ್ನುವುದು ಚನ್ನಾಗಿ ಗೊತ್ತು. ಆದರೆ ಒಂದೇ ಒಂದು ನನ್ನಲ್ಲಿರುವ ದೌರ್ಭಲ್ಯ ಎಂದರೆ ಅದು ನಾನು ವೀಕ್ ಆಗಿದ್ದೀನಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ನನ್ನಲ್ಲಿರು ನಗು ಎಲ್ಲದ್ದಕ್ಕಿಂತ ಹೆಚ್ಚು ಶಕ್ತಿಯುತವಾಗಿದೆ ಎಂದು ನಾನು ತಿಳಿದುಕೊಂಡಿರುವೆ ಎಂದು ಹೇಳಿದ್ದಾರೆ.

Published by:Pavana HS
First published: