HOME » NEWS » Entertainment » ACTRESS SANJANA NAIDU SHOWED HER NAKED BACK IN DEVDASI MOVIE BKTV MAK

ದೇವದಾಸಿ ಚಿತ್ರದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿ ಸುದ್ದಿಯಾಗುತ್ತಿರುವ ಕನ್ನಡದ ಮತ್ತೋರ್ವ ಸಂಜನಾ!

ದೇವದಾಸಿಯರ ಬದುಕನ್ನು ಆಧರಿಸಿದ್ದ ನೈಜ ಕಥಾಹಂದರವನ್ನು ಹೊಂದಿದ್ದ ತಿಪ್ಪಜ್ಜಿ ಸರ್ಕಲ್​ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಸಾಧಾರಣ ಓಟ ಕಂಡಿತ್ತು. ಈ ಚಿತ್ರದಲ್ಲೂ ತಿಪ್ಪಜ್ಜಿ ಪಾತ್ರದಲ್ಲಿ ಸಂಜನಾ ಗಾಂಧಿ ನಟಿಸಿದ್ದರು. ಆದರೆ, ದೇವದಾಸಿಯರ ಬದುಕನ್ನು ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಇದೀಗ ಮತ್ತೊಂದು ಚಿತ್ರ ರೂಪುಗೊಳ್ಳುತ್ತಿದೆ.

news18-kannada
Updated:November 28, 2020, 9:16 PM IST
ದೇವದಾಸಿ ಚಿತ್ರದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿ ಸುದ್ದಿಯಾಗುತ್ತಿರುವ ಕನ್ನಡದ ಮತ್ತೋರ್ವ ಸಂಜನಾ!
ದೇವದಾಸಿ ಚಿತ್ರದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿರುವ ಸಂಜನಾ ನಾಯ್ಡು.
  • Share this:
ಬಾಲಿವುಡ್​ ಚಿತ್ರಗಳಲ್ಲಿ ನಟಿಯರ ಬೆತ್ತಲೆ ಬೆನ್ನನ್ನು ಪ್ರದರ್ಶಿಸುವುದು ಮಾಮೂಲಿ. ಆದರೆ, ಸ್ಯಾಂಡಲ್​ವುಡ್​ನಲ್ಲಿ ಇಂತಹ ದೃಶ್ಯಗಳನ್ನು ಬಹು ವಿರಳ ಎಂದೇ ಹೇಳಬಹುದು. ಆದರೆ, ಈ ಎಲ್ಲಾ ಮಡಿಕೆವಂತಿಗಳನ್ನೂ ಕೆಲವು ನಟಿಯರು ಒಡೆದಿದ್ದಾರೆ. ಕಡ್ಡಿಪುಡಿ ಚಿತ್ರದಲ್ಲಿ ಐಂದ್ರಿತಾ ರೇ, ಎರಡನೇ ಸಲ ಚಿತ್ರದಲ್ಲಿ ಸಂಗೀತಾ ಭಟ್, ದಂಡೂಪಾಳ್ಯ ಚಿತ್ರದಲ್ಲಿ ಸಂಜನಾ ಗಾಂಧಿ ಮತ್ತು ಅದೇ ಚಿತ್ರದ ಎರಡನೇ ಭಾಗದಲ್ಲಿ ಹಾಗೂ ಗಂಡಾ ಹೆಂಡತಿ ಚಿತ್ರದಲ್ಲಿ ಸಂಜನಾ ಗಲ್ರಾನಿ ಈ ಹಿಂದೆ ಬೆತ್ತಲೆ ಬೆನ್ನನ್ನು ಪ್ರದರ್ಶಿಸಿ ಸುದ್ದಿಯಾಗಿದ್ದರು. ಹಾಗೆಯೇ ಹಲವಾರು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಇಂತಹದ್ದೇ ಒಂದು ದೃಶ್ಯದಲ್ಲಿ ನಟಿಸುವ ಮೂಲಕ ದೇವದಾಸಿ ಚಿತ್ರದ ನಾಯಕ ನಟಿ ಸಂಜನಾ ನಾಯ್ಡು ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದ್ದಾರೆ.  

ದೇವದಾಸಿಯರ ಬದುಕನ್ನು ಆಧರಿಸಿದ್ದ ನೈಜ ಕಥಾಹಂದರವನ್ನು ಹೊಂದಿದ್ದ ತಿಪ್ಪಜ್ಜಿ ಸರ್ಕಲ್​ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಸಾಧಾರಣ ಓಟ ಕಂಡಿತ್ತು. ಈ ಚಿತ್ರದಲ್ಲೂ ತಿಪ್ಪಜ್ಜಿ ಪಾತ್ರದಲ್ಲಿ ಸಂಜನಾ ಗಾಂಧಿ ನಟಿಸಿದ್ದರು. ಆದರೆ, ದೇವದಾಸಿಯರ ಬದುಕನ್ನು ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಇದೀಗ ಮತ್ತೊಂದು ಚಿತ್ರ ರೂಪುಗೊಳ್ಳುತ್ತಿದೆ. ಈ ಚಿತ್ರದಲ್ಲಿ ಕೇರಳ ಮೂಲದ ನಟಿ ಸಂಜನಾ ನಾಯ್ಡು ನಟಿಸುತ್ತಿದ್ದಾರೆ. ಅಲ್ಲದೆ, ಚಿತ್ರದ ಚಿತ್ರೀಕರಣದ ವೇಳೆ ಇವರು ತಮ್ಮ ಬೆತ್ತಲೆ ಬೆನ್ನನ್ನು ಪ್ರದರ್ಶಿಸಿದ್ದು ಆ ಚಿತ್ರ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.

ಗಂಡ-ಹೆಂಡತಿಯಲ್ಲಿ ಶೃಂಗಾರದ ಕಾರಣಕ್ಕಾಗಿ ಸಂಜನಾ ಗಲ್ರಾನಿ ಅವರ ಹಸಿ-ಬಿಸಿ ದೃಶ್ಯಗಳ ಫೋಟೋಗಳು ಪಡ್ಡೆಗಳನ್ನು ಸೆಳೆದಿದ್ದವು. ದಂಡುಪಾಳ್ಯದಲ್ಲಿ ಪೊಲೀಸರ ಕ್ರೌರ್ಯದ ಸಂಕೇತವಾಗಿದ್ದ ದೃಶ್ಯದಲ್ಲಿ ಸಂಜನಾ ಬೆತ್ತಲೆ ಬೆನ್ನು ಜನರನ್ನು ಥೇಟರ್‌ನತ್ತ ಬರುವಂತೆ ಮಾಡಿತ್ತು. ಈಗ ದೇವದಾಸಿಯರು ಸಿನಿಮಾದಲ್ಲಿ ಮತ್ತೇ ಶೃಂಗಾರದ ಸಂಕೇತವಾಗಿರುವ ಬೆತ್ತಲೆ ಬೆನ್ನನ್ನು ಪ್ರದರ್ಶಿಸುವ ಮೂಲಕ ದೇವದಾಸಿ ಚಿತ್ರತಂಡ ಪಡ್ಡೆಗಳ ಎದೆಯಲ್ಲಿ ಕಿಚ್ಚು ಹಚ್ಚಿರುವುದಂತೂ ಸತ್ಯ.

ಆದರೆ, ಈ ಚಿತ್ರ ಜನರನ್ನ ಥೇಟರ್‌ನತ್ತ ಸೆಳೆಯುತ್ತಾ? ಎಂಬ ಪ್ರಶ್ನೆಗೆ ಡಿಸೆಂಬರ್ ಕೊನೆಗೆ ಇಲ್ಲವೇ 2021ರ ಜನವರಿ ಮೊದಲೆರಡು ವಾರದ ಬಳಿಕ ಉತ್ತರ ಸಿಗಲಿದೆ.  ಏಕೆಂದರೆ ಸ್ವಾತಿ ಅಂಬರೀಶ್ ನಿರ್ದೇಶನದ ದೇವದಾಸಿಯರು ಬಿಡುಗಡೆ ಆಗೋದು ಆ ಟೈಮ್‌ನಲ್ಲೇ.

ಇದನ್ನೂ ಓದಿ : Happy Birthday Ravi Shankar: ಹುಟ್ಟುಹಬ್ಬದ ಸಂಭ್ರಮದಲ್ಲಿ ರವಿಶಂಕರ್​: 3 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಕಂಠದಾನ ಮಾಡಿದ್ದಾರೆ ಆರ್ಮುಗಂ

ಗಂಡ-ಹೆಂಡತಿ, ದಂಡುಪಾಳ್ಯ ಹಾಗೂ ದೇವದಾಸಿಯರು-ಈ ಮೂರು ಸಿನಿಮಾದ ವಿಶೇಷತೆ ಅಂದ್ರೆ ಸೆನ್ಸಾರ್ ಮಂಡಳಿ ಇವುಗಳಿಗೆ ಎ ಸರ್ಟಿಫಿಕೇಟ್ ನೀಡಿರೋದು. ಮೊದಲು ಎ ಸರ್ಟಿಫಿಕೇಟ್ ಸಿಕ್ಕರೆ ಅಶ್ಲೀಲ ಎಂಬ ಭಾವ ಇರುತ್ತಿತ್ತು. ಈಗ ಕ್ರೌರ್ಯದ ಅಂಶಗಳು ಹೆಚ್ಚಿರುವ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ನೀಡಲಾಗುತ್ತೆ. ಶಿವಣ್ಣ ಅಭಿನಯದ ಹೊಡಿ ಮಗಾ ಸಿನಿಮಾಗೆ ಎ ಸರ್ಟಿಫಿಕೇಟ್ ನೀಡಲಾಗಿತ್ತು ಅನ್ನೋ ಸಮಾಧಾನ ದೇವದಾಸಿಯರು ಚಿತ್ರತಂಡದ್ದು. ಅಂದಹಾಗೆ ಸ್ವಾತಿ ಅಂಬರೀಶ್ ದೇವದಾಸಿಯರು ಸಿನಿಮಾ ಪೂರ್ಣಗೊಳಿಸಿ, ಈಗ ತಮಸ್ ಎಂಬ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
ಒಟ್ಟಾರೆ ದೇವದಾಸಿಯರು ಸಿನಿಮಾದ ಮತ್ತೊಬ್ಬ ಸಂಜನಾಳ ಬೆತ್ತಲೆ ಬೆನ್ನನ್ನ ಹದಿಹರೆಯದ ಹುಡುಗರು ಕದ್ದು ಮುಚ್ಚಿ ನೋಡ್ತಿದಾರೆ. ಸಿನಿಮಾನ ಎಷ್ಟು ಜನ ನೋಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Published by: MAshok Kumar
First published: November 28, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories