ನಟಿ ಸಂಯುಕ್ತಾ ಹೆಗ್ಡೆ (Samyuktha Hegde) ಯಾವಾಗಲೂ ಒಂದೆಲ್ಲಾ ಒಂದು ರೀತಿಯಲ್ಲಿ ಸುದ್ದಿಲ್ಲಿರುತ್ತಾರೆ. ಅಲ್ಲದೇ, ಅವರು ತಮ್ಮ ನೇರ ಮಾತುಗಳಿಂದ ಹೆಚ್ಚು ಫೇಮಸ್ ಆದವರು. ಕಿರಿಕ್ ಪಾರ್ಟಿಯಲ್ಲಿ (kirik Party) ತಮ್ಮ ಅದ್ಬುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ನಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ, ಅದು ಒಂದು ಶಾಕಿಂಗ್ ಹೇಳಿಕೆ ನೀಡುವ ಮೂಲಕ. ಹೌದು, ಇತ್ತೀಚೆಗೆ ತಾವು ನಟಿಸಿರುವ ತುರ್ತು ನಿರ್ಗಮನ ಸಿನಿಮಾದ (Film) ಪ್ರಚಾರ ಕಾರ್ಯದ ಸಂದರ್ಭದಲ್ಲಿ 'ಫಿಲ್ಮ್ ಕಂಪಾನಿಯನ್ ಸೌಥ್'ಗೆ ನೀಡಿರುವ ಸಂದರ್ಶನದಲ್ಲಿ ಸಂಯುಕ್ತಾ ಮಾತನಾಡಿದ್ದು, ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಹಣ ಕೊಟ್ಟರೆ ಬೇಗ ಜನಪ್ರಿಯತೆ ಗಳಿಸಬಹುದು
ಅಲ್ಲದೇ, ನಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದು, ಕೆಲ ನಟಿಯರು ಹೇಗೆ ಬೇಗ ಅವಕಾಶಗಳನ್ನು ಪಡೆಯುತ್ತಾರೆ, ಫೇಮಸ್ ಆಗುತ್ತಾರೆ ಎಂಬುದರ ಬಗ್ಗೆ ಗುಟ್ಟು ರಟ್ಟು ಮಾಡಿದ್ದಾರೆ. ಹಣವಿದ್ದರೆ ಯಾವ ನಟ ನಟಿಯರು ಬೇಕಾದರೂ ಕೇವಲ ಕಡಿಮೆ ಸಮಯದಲ್ಲಿ ಬಹು ಬೇಗ ಜನಪ್ರಿಯತೆ ಗಳಿಸಬಹುದು, ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಅಲ್ಲದೇ, 'ನ್ಯಾಷನಲ್ ಕ್ರಷ್, ಸ್ಟೇಟ್ ಕ್ರಷ್ ಎಂಬುದೆಲ್ಲ ಹಣ ಕೊಟ್ಟು ಖರೀದಿಸಿದ ಬಿರುದುಗಳು' ಎಂದಿದ್ದು, ಇದು ಸಂಯುಕ್ತಾ ಯಾರಿಗೆ ಟಾಂಗ್ ಕೊಟ್ಟಿದ್ದು ಎಂಬ ಪ್ರಶ್ನೆ ಉದ್ಭವವಾಗಿದೆ.
ಕೆಲವು ನಟ-ನಟಿಯರು ಬಹು ಬೇಗ ಫೇಮ್ ಪಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ಸಿನಿಮಾ ರಂಗದಲ್ಲಿ ಬೆನ್ನಹಿಂದೆ ಗಾಡ್ ಫಾದರ್ ರೀತಿ ಯಾರಾದರೂ ಇದ್ದರೆ ಅಥವಾ ಹಣವಿದ್ದರೆ ಯಾವುದೇ ನಟ ನಟಿಯರು ಸುಲಭವಾಗಿ ಜನಪ್ರಿಯತೆ ಗಳಿಸಬಹುದು. ಪಿಆರ್ಗಳಿಗೆ ಹಣ ನೀಡಿದರೆ ನಿಮಗೆ ಏನು ಬೇಕೋ ಅದನ್ನೆ ಅವರು ಮಾಡಿಕೊಡುತ್ತಾರೆ. ಒಬ್ಬರಿಗೆ ಉದಾಹರಣೆಗೆ ಚಾಕೊಲೇಟ್ ಬಾಯ್ ಇಮೇಜ್ ಬೇಕು ಅಂದ್ರೆ ಪಿಆರ್ಗಳು ಅದನ್ನು ಮಾಡಿಯೇ ತೀರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ದೃಶ್ಯಂ ಸುಂದರಿ ಆರೋಹಿ ನಾರಾಯಣ್ ರಿಯಲ್ ಲೈಫ್ನಲ್ಲಿ ಎಷ್ಟು ಸ್ಟೈಲಿಶ್ ನೋಡಿ
ಸಾಮಾನ್ಯವಾಗಿ ನಟ, ನಟಿಯರ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಜನರ ಮೇಲೆ ಪರಿಣಾಮ ಬೀರುತ್ತಾರೆ. ಪಿಆರ್ಗಳು ಅವರಿಗೆ ಸಾಥ್ ನೀಡುತ್ತಾರೆ. ಅವರು ಮಾರ್ಕೆಟ್ಗೆ ಹೋದರೂ, ಏರ್ ಪೋರ್ಟ್ ಹೋದರೂ ಸುದ್ದಿಯಾಗುತ್ತದೆ. ಅಷ್ಟೇ ಯಾಕೆ ಲವ್ ಮಾಡಿದರೆ, ಬ್ರೇಕ್ ಅಪ್ ಆದರೂ ಸುದ್ದಿಯಾಗುತ್ತದೆ. ಒಟ್ಟಾರೆಯಾಗಿ ಪಿಆರ್ಗಳು ನೀವು ಅಂದುಕೊಂಡಿದ್ದನ್ನು ಸಾಧಿಸಲು ಸಹಾಯ ಮಾಡುತ್ತಾರೆ ಎಂದು ನಟಿ ಸಂಯುಕ್ತಾ ಹೇಳಿಕೆ ನೀಡಿದ್ದಾರೆ. ಅಲ್ಲದೇ ನಮ್ಮ ಸ್ಯಾಂಡಲ್ವುಡ್ನಲ್ಲಿ ಸಹ ಈ ಪಿಆರ್ ಸಂಸ್ಕೃತಿ ಇದೆ. ಆದರೆ ಬೇರೆ ಸಿನಿಮಾ ರಂಗದಲ್ಲಿ ಹೆಚ್ಚಿದೆ. ನಮ್ಮಲ್ಲಿ ಅದು ಬೆಳೆಯುತ್ತಿದೆ. ಅದೊಂದು ದೊಡ್ಡ ನೆಟ್ವರ್ಕ್, ಆ ನೆಟ್ವರ್ಕ್ಗೆ ಸಿಕ್ಕಿದರೆ ಸಾಕು ಆ ನಟ, ನಟಿಯರ ಜೀವನವೇ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿತನವಿರಲ್ಲ ಬದುಕಿನಲ್ಲಿ
ನೀವು ಪಿಆರ್ಗಳಿಗೆ ನಿಮಗೆ ಏನು ಬೇಕು ಎಂಬುದನ್ನ ಹೇಳಿದರೆ ಸಾಕು ಅವರು ಅದನ್ನು ಸಾಧಿಸಲು ಸಹಾಯ ಮಾಡುತ್ತಾರೆ. ಫೋಟೋಶೂಟ್ ಮಾಡಿಸುವುದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಡುವುದು, ಹೀಗೆ ಹಲವಾರು ವಿಧಗಳ ಮೂಲಕ ಜನರಲ್ಲಿ ಅಭಿಪ್ರಾಯ ಮೂಡಿಸುತ್ತಾರೆ. ಅಲ್ಲದೇ ಈ ಕ್ರಷ್ ಎಂಬುದೆಲ್ಲಾ ಹಣಕೊಟ್ಟು ಪಡೆಯುವುದು, ಮೀಮ್ ಪೇಜ್ಗಳಿಗೆ ಹಣ ನೀಡಿ ಹಾಕಿಸಿಕೊಳ್ಳುವುದು ಎಂದಿದ್ದಾರೆ.
ಇದನ್ನೂ ಓದಿ: ಪುಷ್ಪ 2 ಸಿನಿಮಾದಲ್ಲಿ ವಿಜಯ್ ಸೇತುಪತಿ? ಕುತೂಹಲ ಹೆಚ್ಚಿಸುತ್ತಿದೆ ಹೊಸ ಅಪ್ಡೇಟ್
ಇನ್ನು ಈ ರೀತಿ ಮಾಡುವುದರಿಂದ ಖಾಸಗಿ ಜೀವನ ಇರುವುದಿಲ್ಲ. ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕು ಮಿಕ್ಸ್ ಆಗುತ್ತದೆ. ಇದರಿಂದ ಅವಕಾಶಗಳು ಸಿಗಬಹುದು, ಆದರೆ ಖಾಸಗಿ ಬದುಕು ಹಾಳಾಗುತ್ತದೆ. ಹಾಗಾಗಿ ನಾನು ಯಾವುದೇ ಪಿಆರ್ಗಳ ಜೊತೆ ಒಪ್ಪಂದ ಮಾಡಿಕೊಂಡಿಲ್ಲ. ಖಾಸಗಿ ಮತ್ತು ವೃತ್ತಿ ಜೀವನದ ನಡುವೆ ಅಂತರ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ