ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!

ಸದಾ ಗಳಗಳನೆ ಮಾತನಾಡುತ್ತಾ, ಪಾದರಸದಂತೆ ಪುಟಿಯುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಇದ್ದಕ್ಕಿದ್ದಂತೆ ಸೈಕೆಂಟ್​ ಆಗಿದ್ದಾರೆ. ಒಂದಲ್ಲ ಒಂದು ವಿವಾದ ಹಾಗೂ ಕಿರಿಕ್​ಗಳಿಂದಲೇ ಹೆಚ್ಚು ಸದ್ದು ಮಾಡಿದ್ದ ಕಿರಿಕ್​ ಬೇಬಿ ಈಗ ಫುಲ್​ ಸೈಲೆಂಟ್​.

Anitha E | news18
Updated:May 27, 2019, 2:59 PM IST
ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!
ಕೃಪೆ: ದ ಪೆಂಟಗಾಂ ಸ್ಟುಡಿಯೋ​ ಫೇಸ್​ಬುಕ್​ ಪುಟ
Anitha E | news18
Updated: May 27, 2019, 2:59 PM IST
'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಬಿಂದಾಸ್ ಆಗಿ ಸ್ಯಾಂಡಲ್​ವುಡ್​ನಲ್ಲಿ ಡೆಬ್ಯೂ ಮಾಡಿದ ನಟಿ ಸಂಯುಕ್ತಾ ಹೆಗ್ಡೆ. ನಂತರ ತೆಲುಗಿನಲ್ಲಿ ಮಿಂಚಿ, 'ಕನ್ನಡದ ಕಾಲೇಜ್' ಕುಮಾರ ಚಿತ್ರದಲ್ಲಿ ವಿವಾದ ಮಾಡಿಕೊಂಡು ಗುಡುಗಿ, ಮುಂಬೈಗೆ ಹೋಗಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು, ಒಂದಲ್ಲ ಒಂದು ಕಾರಣಕ್ಕೆ ಆಗಾಗ ಸದ್ದು, ಸುದ್ದಿ ಮಾಡುತ್ತಲೇ ಇದ್ದಾರೆ.

ಇಂತಹ ಕಿರಿಕ್ ಹುಡುಗಿ ಈಗ ಫುಲ್ ಸೈಲೆಂಟ್ ಆಗಿದ್ದಾರಂತೆ. ಅದಕ್ಕೆ ಕಾರಣ, ಸಿನಿಮಾ. ಹೌದು, 'ಒಮ್ಮೆ ನಿಶ್ಶಬ್ದ ಒಮ್ಮೆ ಯುದ್ಧ' ಚಿತ್ರದಲ್ಲಿ ಮಾತು ಬಾರದ, ಕಿವಿ ಕೇಳದ  ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಜೋಧಪುರದಲ್ಲಿ ನಡೆಯಲಿದೆ ವರುಣ್​-ನತಾಶಾ ವಿವಾಹ..!

ಸಿನಿಮಾ ಹಾಗೂ ತಮ್ಮ ಪ್ರತಿಭೆಯಿಂದಾಗಿ ಸದ್ದು ಮಾಡಬೇಕಿದ್ದ ಸಂಯುಕ್ತ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿ ಇದ್ದದ್ದು ಹೆಚ್ಚು. ಇದರಿಂದಲೇ ಈಗ ಹೀಗಾದ್ರೂ ಸೈಲೆಂಟ್ ಆದ್ರಲ್ಲ ಈ ಹುಡುಗಿ ಅಂತ ಗಾಂಧಿನಗರದ ಕೆಲ ಮಂದಿ ಮುಸಿ ಮುಸಿ ನಗುತ್ತಿದ್ದಾರಂತೆ.

ಶ್ರೀನಾಗ್ ನಿರ್ದೇಶನದ 'ಒಮ್ಮೆ ನಿಶ್ಶಬ್ದ ಒಮ್ಮೆ ಯುದ್ಧ' ಇದೇ ತಿಂಗಳ 31ರಂದು ರಿಲೀಸ್ ಆಗಲಿದೆ. ಪ್ರವೀಣ್​ ರಾಜ್​ ಃಆಗೂ ಸತೀಸ್​ ಕುಮಾರ್​ ನಿರ್ಮಾಣದ ಈ ಚಿತ್ರಕ್ಕೆ ಕಿರಣ್​ ವಾರಣಾಸಿ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಸ್ವಾಭಿಮಾನಿಗಳ ವಿಜಯೋತ್ಸವದ ಹೆಸರಲ್ಲಿ ರೆಬೆಲ್​ ಸ್ಟಾರ್ ಅಂಬಿ​ ಹುಟ್ಟುಹಬ್ಬ
Loading...

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...