‘ಓಹ್ ಬೇಬಿ’ ಚಿತ್ರಕ್ಕೆ ಗುಡ್ ಬೈ ಹೇಳಿದ ನಟಿ ಸಮಂತಾ ಅಕ್ಕಿನೇನಿ!

ಸಿನಿಮಾ ಬಿಡುಗಡೆ ಆಗಿ ಎರಡು ವಾರವಾದರೂ ಸಮಂತಾ ಪ್ರಮೋಷನ್​ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಈ ಸಿನಿಮಾ ಕುರಿತು ಸಾಕಷ್ಟು ಪೋಸ್ಟ್​ಗಳನ್ನು ಅವರು ಹಾಕಿಕೊಂಡಿದ್ದರು. ಈಗ ಸಮಂತಾ ಇದಕ್ಕೆಲ್ಲ ಬ್ರೇಕ್​ ಕೊಟ್ಟಿದ್ದಾರೆ.

Rajesh Duggumane | news18
Updated:July 16, 2019, 3:17 PM IST
‘ಓಹ್ ಬೇಬಿ’ ಚಿತ್ರಕ್ಕೆ ಗುಡ್ ಬೈ ಹೇಳಿದ ನಟಿ ಸಮಂತಾ ಅಕ್ಕಿನೇನಿ!
ಸಮಂತಾ ಅಕ್ಕಿನೇನಿ
  • News18
  • Last Updated: July 16, 2019, 3:17 PM IST
  • Share this:
ನಟಿ ಸಮಂತಾ ಅಕ್ಕಿನೇನಿ ಅಭಿನಯದ ‘ಓಹ್​ ಬೇಬಿ’ ಸಿನಿಮಾ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ಬಿಡುಗಡೆಗೊಂಡ ಮೊದಲ ವಾರದಲ್ಲೇ ಬರೋಬ್ಬರಿ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ನಾಗಾಲೋಟ ಮುಂದುವರಿಸಿದೆ. ಈ ಮಧ್ಯೆ ‘ಓಹ್​ ಬೇಬಿ’ ಚಿತ್ರಕ್ಕೆ ಸಮಂತಾ ಗುಡ್​ ಬೈ ಹೇಳಿದ್ದಾರೆ!

ಹಾಗಾದರೆ ಸಮಂತಾ ಚಿತ್ರತಂಡದೊಂದಿದೆ ಏನಾದರೂ ಕಿರಿಕ್​ ಮಾಡಿಕೊಂಡರಾ? ಇಲ್ಲ. ಅಸಲಿ ವಿಚಾರ ಬೇರೇಯೆ ಇದೆ. ನಟಿ ಸಮಂತಾ ಗುಡ್​ ಬೈ ಹೇಳಿದ್ದು, ‘ಓಹ್​ ಬೇಬಿ’ ಸಿನಿಮಾದ ಪ್ರಮೋಷನ್​ಗೆ. ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಮದುವೆಯಾದ ನಂತರವೂ ದೊಡ್ಡ ಮಾರುಕಟ್ಟೆ ಉಳಿಸಿಕೊಂಡ ನಟಿ ಎನ್ನುವ ಹೆಗ್ಗಳಿಕೆ ಅವರದ್ದು. ಆದರೆ, ಸಮಂತಾ ಕೆರಿಯರ್​ನಲ್ಲಿ ‘ಓಹ್​ ಬೇಬಿ’ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಮತ್ತಾವ ಚಿತ್ರಕ್ಕೂ ನೀಡಿಲ್ಲವಂತೆ. ಅದಕ್ಕಾಗಿಯೇ ಅವರು ಸಾಕಷ್ಟು ಪ್ರಮೋಷನ್​ ಕಾರ್ಯದಲ್ಲೂ ಪಾಲ್ಗೊಂಡಿದ್ದರು.

ಸಿನಿಮಾ ಬಿಡುಗಡೆಗೂ ಎರಡು ವಾರ ಮೊದಲು ಸಾಕಷ್ಟು ಟಿವಿ ಸಂದರ್ಶನಗಳಲ್ಲಿ ಅವರು ಪಾಲ್ಗೊಂಡಿದ್ದರು. ಸಿನಿಮಾ ಬಿಡುಗಡೆ ಆಗಿ ಎರಡು ವಾರವಾದರೂ ಸಮಂತಾ ಪ್ರಮೋಷನ್​ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಈ ಸಿನಿಮಾ ಕುರಿತು ಸಾಕಷ್ಟು ಪೋಸ್ಟ್​ಗಳನ್ನು ಅವರು ಹಾಕಿಕೊಂಡಿದ್ದರು. ಈಗ ಸಮಂತಾ ಇದಕ್ಕೆಲ್ಲ ಬ್ರೇಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಕುಟುಂಬಕ್ಕಾಗಿ ಗ್ಲಾಮರ್​ ತೊರೆದಿದ್ದ ಸಮಂತಾ ಈಗ ಮತ್ತೆ ಹಾಟ್​ ಸೀನ್​ಗಳಿಗೆ ರೆಡಿ? ಇಲ್ಲಿದೆ ಉತ್ತರ

‘ಓಹ್​ ಬೇಬಿ’ ಸಿನಿಮಾದಲ್ಲಿ ಸಮಂತಾ ಮುಖ್ಯಭೂಮಿಕೆ ನಿರ್ವಹಿಸಿದ್ದರು. ವೃದ್ಧೆಯೊಬ್ಬಳಿಗೆ ಯವ್ವನ ಮರಳಿ ದೊರೆತರೆ ಏನಾಗುತ್ತದೆ ಎಂಬುದನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ.

ತಮಿಳಿನಲ್ಲಿ ಹಿಟ್​ ಆಗಿದ್ದ ‘96’ ಸಿನಿಮಾ ತೆಲುಗಿಗೆ ರಿಮೇಕ್​ ಆಗುತ್ತಿದೆ. ಈ ಚಿತ್ರದಲ್ಲಿ ಸಮಂತಾ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ನಾಗಾರ್ಜುನ ಅಭಿನಯದ ‘ಮನ್ಮಥುಡು 2’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
First published: July 16, 2019, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading