Akshay Kumar: ಅಕ್ಷಯ್ ಕುಮಾರ್ ಸಂಭಾವನೆಯ ಬಗ್ಗೆ ಏನಂದ್ರು ಸಮಂತಾ? ಸೌತ್ ಬ್ಯೂಟಿಯ ಉತ್ತರಕ್ಕೆ ಶಾಕ್ ಆದ ಕರಣ್

ಬಾಲಿವುಡ್ ನಲ್ಲಿ ಜನಪ್ರಿಯ ನಟರು ಒಂದು ಚಲನಚಿತ್ರಕ್ಕೆ ತೆಗೆದುಕೊಳ್ಳುವ ಹಣವನ್ನು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರೆಂಟಿ. ಅದರಲ್ಲೂ ನಟ ಅಕ್ಷಯ್ ಕುಮಾರ್ ಒಬ್ಬ ಜನಪ್ರಿಯ ಮತ್ತು ಬಹು ಬೇಡಿಕೆಯ ನಟ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ಇವರು ಒಂದು ಚಿತ್ರದಲ್ಲಿ ನಟಿಸಬೇಕಾದರೆ ಒಂದು ದಿನಕ್ಕೆ ತೆಗೆದುಕೊಳ್ಳುವ ಹಣವನ್ನು ಕೇಳಿ ಇಲ್ಲೊಬ್ಬ ನಟಿ ಏನು ಹೇಳಿದ್ದಾರೆ ನೋಡಿ.

ಅಕ್ಷಯ್ ಕುಮಾರ್ ಮತ್ತು ಸಮಂತಾ ರುತ್ ಪ್ರಭು

ಅಕ್ಷಯ್ ಕುಮಾರ್ ಮತ್ತು ಸಮಂತಾ ರುತ್ ಪ್ರಭು

  • Share this:
ಬಾಲಿವುಡ್ ನಲ್ಲಿ (Bollywood) ಜನಪ್ರಿಯ ನಟರು ಒಂದು ಚಲನಚಿತ್ರಕ್ಕೆ ತೆಗೆದುಕೊಳ್ಳುವ ಹಣವನ್ನು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರೆಂಟಿ. ಅದರಲ್ಲೂ ನಟ ಅಕ್ಷಯ್ ಕುಮಾರ್  (Akshay Kumar)ಒಬ್ಬ ಜನಪ್ರಿಯ ಮತ್ತು ಬಹು ಬೇಡಿಕೆಯ ನಟ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ಇವರು ಒಂದು ಚಿತ್ರದಲ್ಲಿ ನಟಿಸಬೇಕಾದರೆ ಒಂದು ದಿನಕ್ಕೆ ತೆಗೆದುಕೊಳ್ಳುವ ಹಣವನ್ನು (Money) ಕೇಳಿ ಇಲ್ಲೊಬ್ಬ ನಟಿ (Actress) ಏನು ಹೇಳಿದ್ದಾರೆ ನೋಡಿ. ಸುಮಾರು ಎರಡು ವರ್ಷಗಳ ನಂತರ, ಬಾಲಿವುಡ್ ನ ನಿರ್ಮಾಪಕರಾದ ಕರಣ್ ಜೋಹರ್ ತಮ್ಮ ಗಾಸಿಪ್ ತುಂಬಿದ ಸೂಪರ್ ಮನರಂಜನಾ ಚಾಟ್ ಶೋ ‘ಕಾಫಿ ವಿತ್ ಕರಣ್’ ನೊಂದಿಗೆ ಮರಳಿದ್ದಾರೆ. 3 ನೇ ಸಂಚಿಕೆಯಲ್ಲಿ, ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಟ ಅಕ್ಷಯ್ ಕುಮಾರ್ ಅತಿಥಿಗಳಾಗಿ ಶೋ ಗೆ ಮೆರುಗು ನೀಡಿದರು.

ಸಿನಿ ಪಯಣದ ಬಗ್ಗೆ ಮಾತನಾಡಿದ ನಟ ಹಾಗೂ ನಟಿ
ಇವರಿಬ್ಬರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು ಮತ್ತು ಅವರಿಬ್ಬರು ಈ ಶೋ ನಲ್ಲಿ ತುಂಬಾನೇ ಮಜಾ ಮಾಡಿದರು. ಇದರೊಂದಿಗೆ ಇವರಿಬ್ಬರು ತಮ್ಮ ಸಿನಿ ಪಯಣದ ಬಗ್ಗೆ ಸಹ ಹೇಳಿದರು. ಅಕ್ಷಯ್ ಮತ್ತು ಸಮಂತಾ ಇಬ್ಬರೂ ತಮ್ಮ ತಮ್ಮ ಭಾಷೆಯ ಚಿತ್ರೋದ್ಯಮದಲ್ಲಿ ಹೇಗೆ ಕೆಲಸ ಶುರು ಮಾಡಿದರು ಮತ್ತು ಮೊದಲಿಗೆ ಇವರು ಪಡೆಯುತ್ತಿದ್ದ ಹಣ ಎಷ್ಟು ಅಂತ ಅನೇಕ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ಜಾನಿ ದುಷ್ಮನ್’ ಸಿನೆಮಾಕ್ಕೆ ಅಕ್ಷಯ್ ಅವರಿಗೆ ಸಿಗುತ್ತಿದ್ದ ಹಣ 
ಅಕ್ಷಯ್ ಅವರು 7 ನಾಯಕರೊಂದಿಗೆ ನಟಿಸಿದ ‘ಜಾನಿ ದುಷ್ಮನ್’ ಚಲನಚಿತ್ರವು ಬಾಲಿವುಡ್ ನಲ್ಲಿ ಅವರಿಗೆ ಒಂದು ಉತ್ತಮವಾದ ಸ್ಥಾನವನ್ನು ಪಡೆಯಲು ಸಹಾಯ ಮಾಡಿತು ಎಂದು ಬಹಿರಂಗಪಡಿಸಿದರು. ಅವರು ತಿಂಗಳಿಗೆ ಆಗ 5000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಆ ಹೋರಾಟದ ದಿನಗಳ ಬಗ್ಗೆ ನೆನಪಿಸಿಕೊಂಡರು ಮತ್ತು ಇದ್ದಕ್ಕಿದ್ದಂತೆ ಜಾಹೀರಾತು ಏಜೆನ್ಸಿಯು ಕೇವಲ 2 ಗಂಟೆಗಳ ಚಿತ್ರೀಕರಣಕ್ಕಾಗಿ ಅವರಿಗೆ 21,000 ರೂಪಾಯಿಗಳನ್ನು ನೀಡಿತು ಎಂದು ನಟ ಹೇಳಿದರು.

ಇದನ್ನೂ ಓದಿ: Akshay Kumar and Twinkle Khanna: ಟ್ವಿಂಕಲ್‍ಗೆ ಹೇಗೆ ಬರೆಯಬೇಕು ಎಂದು ಹೇಳಿಕೊಡುತ್ತಾರಂತೆ ಅಕ್ಷಯ್ ಕುಮಾರ್!

ಅಕ್ಷಯ್ ಅವರ ಒಂದು ದಿನದ ಚಿತ್ರೀಕರಣದ ವೆಚ್ಚವು ಸಮಂತಾ ಅವರ ಇಡೀ ಚಿತ್ರದ ಸಂಬಳವಂತೆ!
ಸಮಂತಾ ಅವರು ದಕ್ಷಿಣ ಚಲನಚಿತ್ರೋದ್ಯಮಕ್ಕೆ ಹೇಗೆ ಬಂದರು ಎಂದು ಹೇಳಿಕೊಂಡರು. ತನ್ನ ಸಾಲವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ತನ್ನ ತಂದೆ ನೇರವಾಗಿ ಹೇಳಿದ ಸಮಯ ಅದು, ಆಗ ನಾನು ನನ್ನ ಸಿನೆಮಾ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸಿಲು ಶುರು ಮಾಡಿದೆ ಎಂದು ನಟಿ ಹೇಳಿದರು. ಆದಾಗ್ಯೂ, ಸಮಂತಾ ಮತ್ತು ಅಕ್ಷಯ್ ಇಬ್ಬರೂ ಚರ್ಚೆಯ ನಂತರ ವಿನೋದಭರಿತ ರ್ಯಾಪಿಡ್-ಫೈರ್ ರೌಂಡ್ ಆಡಿದರು. ಒಂದು ಹಂತದಲ್ಲಿ, ಸಮಂತಾ ತಾನು ಗೆಲ್ಲಲಿ ಅಥವಾ ಇಲ್ಲದಿರಲಿ ಉಡುಗೊರೆ ಹ್ಯಾಂಪರ್ ಅನ್ನು ಬಯಸುತ್ತೇನೆ ಎಂದು ತಮಾಷೆಯಾಗಿ ಹೇಳಿಕೊಂಡರು. ಆಗ ನಟಿ ಅಕ್ಷಯ್ ಅವರ ಒಂದು ದಿನದ ಚಿತ್ರೀಕರಣದ ವೆಚ್ಚವು ನನ್ನ ಇಡೀ ಚಿತ್ರದ ಸಂಬಳವಾಗಿದೆ" ಎಂದು ಅಕ್ಷಯ್ ಗೆ ಹೇಳಿದರು.

ಇದನ್ನೂ ಓದಿ:  Akshay Kumar: ನವವಿವಾಹಿತ ಬಾಲಿವುಡ್ ಜೋಡಿಗಳಿಗೆ ಹಿರಿಯಣ್ಣ ಅಕ್ಷಯ್ ಕುಮಾರ್ ನೀಡಿದ ಸಲಹೆಗಳಿವು!

ಅಕ್ಷಯ್ ಆ ರ್ಯಾಪಿಡ್ ಫೈರ್ ರೌಂಡ್ ಅನ್ನು ಗೆದ್ದರು, ಆದರೆ ಅವರು ಸಮಂತಾಗೆ ಆ ಹ್ಯಾಂಪರ್ ಅನ್ನು ನೀಡಿದರು. ಇಷ್ಟೇ ಅಲ್ಲದೆ ಇವರಿಬ್ಬರು ತಮ್ಮ ಬಗ್ಗೆ ಸಾಕಷ್ಟು ತಮಾಷೆಯ ವಿಷಯಗಳನ್ನು ಬಹಿರಂಗಪಡಿಸಿದರು. ನೀವು ಜೀವನದಲ್ಲಿ ಯಾರನ್ನು ಫಾಲೋ ಮಾಡುತ್ತೀರಿ ಅಂತ ಕೇಳಿದ ಪ್ರಶ್ನೆಗೆ ಅಕ್ಷಯ್ ಅವರ ಪತ್ನಿ ಟ್ವಿಂಕಲ್ ನನ್ನು ಅಂತ ಉತ್ತರಿಸಿದರು. "ನಾನು ಯಾವಾಗಲೂ ಅವಳನ್ನು ಫಾಲೋ ಮಾಡುತ್ತಲೇ ಇರಬೇಕು" ಎಂದು ಅವರು ಹೇಳಿದರು.

ಅಕ್ಷಯ್ ಹಾಗೂ ಸಮಂತಾ ಅವರ ಮುಂಬರುವ ಸಿನೆಮಾಗಳು
ನಟ ಅಕ್ಷಯ್ ಕೊನೆಯದಾಗಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಕೈಯಲ್ಲಿ ‘ರಕ್ಷಾ ಬಂಧನ್’ ಮತ್ತು ‘ರಾಮ ಸೇತು’ ಚಿತ್ರಗಳು ಇವೆ. ರಕ್ಷಾ ಬಂಧನದ ದಿನವೇ ರಕ್ಷಾ ಬಂಧನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ನಟಿ ಸಮಂತಾ ಕೈಯಲ್ಲಿ ಶಾಕುಂತಲಂ, ಯಶೋದಾ ಮತ್ತು ಖುಷಿ ಚಿತ್ರಗಳು ಇವೆ. ವರದಿಗಳ ಪ್ರಕಾರ, ಅವರು ಶೀಘ್ರದಲ್ಲಿಯೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.
Published by:Ashwini Prabhu
First published: