• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Samantha With Sadguru: ನ್ಯಾಯ-ಅನ್ಯಾಯ, ಕರ್ಮದ ಬಗ್ಗೆ ಸಮಂತಾ ಪ್ರಶ್ನೆ! ಇದಕ್ಕೆ ಸದ್ಗುರು ನೀಡಿದ ಉತ್ತರ ಇಲ್ಲಿದೆ

Samantha With Sadguru: ನ್ಯಾಯ-ಅನ್ಯಾಯ, ಕರ್ಮದ ಬಗ್ಗೆ ಸಮಂತಾ ಪ್ರಶ್ನೆ! ಇದಕ್ಕೆ ಸದ್ಗುರು ನೀಡಿದ ಉತ್ತರ ಇಲ್ಲಿದೆ

ಸದ್ಗುರು ಜೊತೆ ಸಮಂತಾ ಸಂವಾದ

ಸದ್ಗುರು ಜೊತೆ ಸಮಂತಾ ಸಂವಾದ

ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು ಸದ್ಗುರು ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ನ್ಯಾಯ, ಅನ್ಯಾಯ, ಕರ್ಮಫಲಗಳ ಕುರಿತಂತೆ ಸಮಂತಾ ಸದ್ಗುರುಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸದ್ಗುರು ಸೂಕ್ತವಾದ ಉತ್ತರ ನೀಡಿದ್ದಾರೆ. ಅವರಿಬ್ಬರ ಸಂವಾದದ ಹೈಲೈಟ್ಸ್ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಹೈದರಾಬಾದ್: ಸದ್ಗುರು ಜಗ್ಗಿ ವಾಸುದೇವ್ (Sadguru Jaggi Vasudev) ಅವರು ಮಣ್ಣಿನ (Soil) ಉಳಿವಿಗಾಗಿ ನಡೆಸುತ್ತಿರುವ ‘ಮಣ್ಣು ಉಳಿಸಿ’ (Save Soil) ಅಭಿಯಾನ (Campaign) ಯಶಸ್ವಿಯಾಗಿದೆ. ಇಂಗ್ಲೆಂಡ್‌ನಿಂದ (England) ಆರಂಭವಾದ ಈ ಅಭಿಯಾನ ಈಗಾಗಲೇ ಭಾರತ (India) ತಲುಪಿದ್ದು, ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಮುಂದುವರೆದಿದೆ. ಇನ್ನು ತೆಲಂಗಾಣದ (Telangana) ಹೈದರಾಬಾದ್‌ನಲ್ಲಿ (Hyderabad) ನಡೆದ ಸಂವಾದದಲ್ಲಿ (Conversation) ತೆಲುಗು ಚಿತ್ರರಂಗದ (Telugu Film Industry) ಖ್ಯಾತ ನಟಿ (Famous Actress) ಸಮಂತಾ ರುತ್ ಪ್ರಭು (Samantha Ruth Prabhu), ಸದ್ಗುರು ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ನ್ಯಾಯ, ಅನ್ಯಾಯ, ಕರ್ಮಫಲಗಳ ಕುರಿತಂತೆ ಸಮಂತಾ ಸದ್ಗುರುಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸದ್ಗುರು ಸೂಕ್ತವಾದ ಉತ್ತರ (Answer) ನೀಡಿದ್ದಾರೆ. ಅವರಿಬ್ಬರ ಸಂವಾದದ ಹೈಲೈಟ್ಸ್ (Highlights) ಇಲ್ಲಿದೆ ಓದಿ…


ಸದ್ಗುರು ಜೊತೆ ನಟಿ ಸಮಂತಾ ಸಂವಾದ


ನಟಿ ಸಮಂತಾ ರುತ್‌ ಪ್ರಭು ಹಾಗೂ ಸದ್ಗುರು ಜಗ್ಗಿ ವಾಸುದೇವ್ ಅವರು ಹೈದರಾಬಾದ್‌ನಲ್ಲಿ ನಡೆದ ಸಂವಾದಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ನ್ಯಾಯ, ಅನ್ಯಾಯದ ಬಗ್ಗೆ ನೀವೇನು ಹೇಳುತ್ತೀರಿ ಸದ್ಗುರುಗಳೇ? ಒಬ್ಬರ ಜೀವನದಲ್ಲಿ ಅನ್ಯಾಯ ಎನ್ನುವುದು ಅವರ ಹಿಂದಿನ ಕರ್ಮಫಲದಿಂದ ಸಂಭವಿಸುವಂತದ್ದೇ ಅಂತ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಸದ್ಗುರು, ನೀವು ಇನ್ನೂ ಜಗತ್ತು ನ್ಯಾಯಯುವಾಗಿರಬೇಕೆಂದು ನೀವು ನಿರೀಕ್ಷಿಸುತ್ತೀರಾ ಅಂತ ಸಮಂತಾಗೆ ಮರು ಪ್ರಶ್ನಿಸಿದ್ರು.


ಸಮಂತಾ ಪ್ರಶ್ನೆಗೆ ಸದ್ಗುರು ಉತ್ತರ


ಇನ್ನು ಪ್ರಶ್ನೆ ಮುಂದುವರೆಸಿದ ಸಮಂತಾ, ಇದು ನನ್ನ ಪಶ್ನೆಯಲ್ಲ ಶಾಲಾ ಬಾಲಕಿಯೊಬ್ಬಳ ಪ್ರಶ್ನೆ. ಅದನ್ನು ನಾನು ಕೇಳುತ್ತಿದ್ದೇನೆ ಎಂದ್ರು. ಅದಕ್ಕೆ ಉತ್ತರಿಸಿದ ಸದ್ಗುರು “ಈ ಹೊತ್ತಿಗೆ, ಜಗತ್ತು ನ್ಯಾಯಯುತವಾಗಿಲ್ಲ ಎಂದು ನೀವು ತಿಳಿದಿರಬೇಕು. ಇದು ನ್ಯಾಯೋಚಿತವಾಗುವುದಿಲ್ಲ. ಆದರೆ ಜಗತ್ತು ನ್ಯಾಯೋಚಿತವಾಗರಬೇಕೆಂದು ನಾನೂ ಕೂಡ ಬಯಸುತ್ತೇನೆ” ಅಂತ ಹೇಳಿದ್ರು.


ಇದನ್ನೂ ಓದಿ: Bengaluru: ಸದ್ಗುರು Save Our Soil ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್; ಮಣ್ಣು ಉಳಿಸಲು ಸರ್ಕಾರದ ಸಾಥ್


ಸಮಂತಾ ಕಾಲೆಳೆದ ಸದ್ಗುರು


ಇನ್ನು ಇದಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಮಣ್ಣು ಉಳಿಸಿ ಅಭಿಯಾನದ ಪ್ರಯುಕ್ತ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟಿ ಸಮಂತಾ ಲೇಟ್ ಆಗಿ ಬಂದರು. ಇದನ್ನು ಗಮನಿಸಿದ ಸದ್ಗುರು, "ಸಮಂತಾ ಅವರು ಸರಿಯಾದ ಸಮಯಕ್ಕೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಬರುತ್ತಿದ್ದರಿಂದ ಯಾರೋ ಅವರು ನಾನು ಹಳದಿ ಕುರ್ತಾ ಧರಿಸಿದ್ದೇನೆ ಎಂದು ಹೇಳಿದರು, ಆದ್ದರಿಂದ ಅವರು ಹಿಂತಿರುಗಿ, ಡ್ರೆಸ್ ಬದಲಾಯಿಸಿ, ಹಳದಿ ಸೀರೆ ಉಟ್ಟು ಮತ್ತೆ ಬರಬೇಕಾಯಿತು. ಹೀಗಾಗಿ ಲೇಟ್ ಆಗಿರಬಹುದು" ಅಂತ ಛೇಡಿಸಿದರು. ಇದಕ್ಕೆ ಸಮಂತಾ ಸಮೇತ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರು ನಕ್ಕು ನಕ್ಕು ಸುಸ್ತಾದರು.



ಹಲವು ವಿಚಾರಗಳ ಬಗ್ಗೆ ಸದ್ಗುರು ಜೊತೆ ಚರ್ಚೆ


ಇನ್ನು ಸಮಂತಾ ಮತ್ತು ಸದ್ಗುರುಗಳು ಅಹಂಕಾರ, ಕರ್ಮ, ಮಣ್ಣು ಉಳಿಸಿ ಅಭಿಯಾನದ ಮೂಲಕ ಅವರ ಪ್ರಯಾಣ ಮತ್ತು ಸಂಭಾಷಣೆಯ ಉದ್ದಕ್ಕೂ ಹೆಚ್ಚಿನದನ್ನು ಚರ್ಚಿಸಿದರು. ಸಭಾಂಗಣದಲ್ಲಿದ್ದ ಇತರರಿಗೂ ಸದ್ಗುರುಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಯಿತು.


ಇದನ್ನೂ ಓದಿ: Samantha: ಕಾಫಿ ವಿತ್ ಕರಣ್​ನಲ್ಲಿ ಸಮಂತಾ? ಡೈವೋರ್ಸ್ ವಿಚಾರ ಮಾತಾಡ್ತಾರಾ ಅಕ್ಕಿನೇನಿ ಫ್ಯಾಮಿಲಿ ಮಾಜಿ ಸೊಸೆ?


ಕಳೆದ ಶನಿವಾರ ಕರ್ನಾಟಕದಲ್ಲಿ ಕಾರ್ಯಕ್ರಮ


‘ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ 27 ಸಾವಿರ ಕಿ.ಮೀ ಪ್ರಯಾಣಿಸಿರುವ ಸದ್ಗುರು, ಕಳೆದ ಶನಿವಾರ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಅವರು, ತಮ್ಮ ಅಭಿಯಾನಕ್ಕೆ 74 ದೇಶಗಳ ಬೆಂಬಲ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಮಣ್ಣು ಉಳಿಸುವ ನೀತಿಗಳು ಜಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

Published by:Annappa Achari
First published: