Samantha: ಮಳೆ ನಿಂತರೂ ಮರದ ಹನಿ ನಿಲ್ಲದು.. ಅಕ್ಕಿನೇನಿ ಕುಟುಂಬಕ್ಕೆ ಮದುವೆ ಸೀರೆ ವಾಪಸ್​ ಕೊಟ್ಟ ಸಮಂತಾ!

ಸಮಂತಾ ಎಲ್ಲಾ ವಸ್ತುಗಳನ್ನು ವಾಪಸ್ ಕೊಡಲು ನಿರ್ಧರಿಸಿದ್ದಾರಂತೆ. ಹೌದು, ಆದರೆ ಸಮಂತಾ ನಾಗಚೈತನ್ಯ ಅವರಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದು, ಯಾವತ್ತೂ ಈ ಜೋಡಿ ಒಂದಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ನಾಗ ಚೈತನ್ಯ, ಸಮಂತಾ

ನಾಗ ಚೈತನ್ಯ, ಸಮಂತಾ

  • Share this:
ಸಮಂತಾ (Samantha) ಮತ್ತು ನಾಗಚೈತನ್ಯ (Naga Chaitanya) ತೆಲುಗಿನ ಮೋಸ್ಟ್ ರೊಮ್ಯಾಂಟಿಕ್ ಜೋಡಿ (Romantic Couple). ಅಕ್ಟೋಬರ್ 2 ರಂದು ದಂಪತಿಗಳು ತಮ್ಮ ವಿಚ್ಛೇದ(Divorce)ನವನ್ನು ಘೋಷಿಸಿದರು. ನಾಲ್ಕು ವರ್ಷಗಳ ದಾಂಪತ್ಯದಿಂದ ಇಬ್ಬರು ದೂರಾಗಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಡಿವೋರ್ಸ್ ವಿಚಾರ ಟಾಲಿವುಡ್ನ(Tollywood)ಲ್ಲಿ ಸಖತ್ ಸೌಂಡ್ ಮಾಡಿತ್ತು. ಹಲವರು ಸಮಂತಾ ಅವರನ್ನು ಟ್ರೋಲ್ ಮಾಡಿದರು. ಆದರೆ, ಸಮಂತಾ ಯಾವುದಕ್ಕೂ ಜಗ್ಗಲಿಲ್ಲ. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದಗಿನಿಂದಲೂ ಸಮಂತಾ ವಿರುದ್ಧದ ಟೀಕೆಗಳು ನಿಂತಿಲ್ಲ. ಒಂದು ಹಂತದಲ್ಲಿ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣಗಳು (Social Media), ಯೂಟ್ಯೂಬ್ (YouTube) ಚಾನೆಲ್​​ಗಳಲ್ಲಿ ಬರುತ್ತಿರುವ ಕಾಮೆಂಟ್​ಗಳು ಟ್ರೋಲಿಂಗ್ ಮಾನನಷ್ಟವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗೆ ಒಂದೆಲ್ಲ ಒಂದು ವಿವಾದಗಳಗಳ ಮೂಲಕ ಸುದ್ದಿಯಲ್ಲಿದ್ದ ಸಮಂತಾ ಈಗ ಮತ್ತೆ ಸುದ್ದಿಯಲ್ಲಿದ್ಧಾರೆ.

ಮದುವೆ ಸೀರೆ ವಾಪಸ್​ ನೀಡಿದ ಸಮಂತಾ!

ಏನಪ್ಪಾ ಅದು ಅಂದ್ರೆ, ಸಮಂತಾ ಎಲ್ಲಾ ವಸ್ತುಗಳನ್ನು ವಾಪಸ್ ಕೊಡಲು ನಿರ್ಧರಿಸಿದ್ದಾರಂತೆ. ಹೌದು, ಆದರೆ ಸಮಂತಾ ನಾಗಚೈತನ್ಯ ಅವರಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಹಿಂದಿರುಗಿಸುವ ನಿರ್ಧಾರ ಮಾಡಿದ್ದು, ಯಾವತ್ತೂ ಈ ಜೋಡಿ ಒಂದಾಗಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ನಾಗಚೈತನ್ಯಗೆ ಸಂಬಂಧ ಪಟ್ಟ ವಸ್ತುಗಳೆಲ್ಲ ವಾಪಸ್​!

ಸಮಂತಾ ಮದುವೆ ಸೀರೆಯನ್ನು ಅಕ್ಕಿನೇನಿ ಫ್ಯಾಮಿಲಿಗೆ ವಾಪಸ್ ಮಾಡುತ್ತಿದ್ದಾರೆ, ಅಂದರೆ ಮದುವೆಯಲ್ಲಿ ನಾಗಚೈತನ್ಯ ಮನೆಯವರು ಕೊಟ್ಟಿದ್ದ ರೇಷ್ಮೆ ಸೀರೆಯನ್ನು ವಾಸಪ್ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿದೆ. ಅಲ್ಲದೇ ಸೀರೆ ಮಾತ್ರವಲ್ಲ ನಾಗಚೈತನ್ಯ ಮತ್ತು ಅವರ ಮನೆಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಮರಳಿ ಕೊಡಲಿದ್ದಾರೆ ಎನ್ನಲಾಗಿದೆ.

ಸೀರೆ ವಾಪಸ್ ಕೊಟ್ಟಿದ್ದಕ್ಕೆ ಗರಂ ಆದ ಅಕ್ಕಿನೇನಿ ಕುಟುಂಬ!

ಸಮಂತಾಗೆ ನಾಗಚೈನ್ಯ ವಸ್ತುಗಳನ್ನು ಉಳಿಸಿಕೊಳ್ಳಲು ಇಷ್ಟ ಇಲ್ಲ, ಹಾಗಾಗಿ ಒಂದೊಂದೇ ವಸ್ತುಗಳನ್ನು ಹಿಂದಿರುಗಿಸಿ ಸಂಪೂರ್ಣವಾಗಿ ನಾಗಚೈತನ್ಯ ಕುಟುಂಬದಿಂದ ದೂರ ಆಗಲು ಸಮಂತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಮಂತಾ ಸೀರೆ ವಾಪಸ್ ಮಾಡುತ್ತಿರುವುದನ್ನ ಅಕ್ಕಿನೇನಿ ಕುಟುಂಬ ವಿರೋಧ ಮಾಡಿದೆಯಂತೆ. ಮದುವೆ ಸೀರೆಯನ್ನು ವಾಪಸ್ ಕೊಟ್ಟಿದ್ದು ಕುಟುಂಬದ ಸದಸ್ಯರಲ್ಲಿ ಬೇಸರ ಮೂಡಿಸಿದೆಯಂತೆ.

ಇದನ್ನೂ ಓದಿ: ಟಾಲಿವುಡ್​ನಲ್ಲಿ ರಶ್ಮಿಕಾ ಮಂದಣ್ಣಗೆ ಮೊದಲ ಸೋಲು? ಕಿರಿಕ್​ ಬ್ಯೂಟಿಗೆ ಯಾಕ್​ ಬೇಕಿತ್ತು ಈ ಸಿನಿಮಾ ಎಂದ ಫ್ಯಾನ್ಸ್​!

2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಈ ಜೋಡಿಯ ಮದುವೆಯಾಗಿತ್ತು. ಅಕ್ಟೋಬರ್ 7ರಂದು ಈ ಜೋಡಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಸಮಂತಾ ಅಕ್ಕಿನೇನಿ ಕಳೆದ ಕೆಲ ಸಮಯದಿಂದ ಪತಿ ನಾಗ ಚೈತನ್ಯ ಹಾಗೂ ಅವರ ಕುಟುಂಬದವರ ಜೊತೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೆ ಪತಿಯ ಸಿನಿಮಾ ಲವ್ ಸ್ಟೋರಿ ಕಾರ್ಯಕ್ರಮಗಳಲ್ಲೂ ಗೈರಾಗಿದ್ದರು. ನಾಗಾರ್ಜುನ ಅವರ ಹುಟ್ಟುಹಬ್ಬ, ಅಮೀರ್ ಖಾನ್ ಜತೆಗಿನ ಡಿನ್ನರ್ ಪಾರ್ಟಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಸಮಂತಾ ಕಾಣಿಸಿಕೊಂಡಿರಲಿಲ್ಲ.

ಇದನ್ನೂ ಓದಿ: ಜಿಮ್​ನಲ್ಲಿ ಸಮಂತಾಗೆ ವರ್ಕೌಟ್​ ಮಾಡೋಕೆ ಬಿಡ್ತಿಲ್ವಂತೆ ಇವ್ರು! ಎಲ್ಲಿ ಹೋದ್ರೂ ಅಲ್ಲೇ ಬರ್ತಾರಂತೆ

ಟಾಕ್​ ಆಫ್​ ದಿ ಟೌನ್​ ಆಗಿರುವ ಸಮಂತಾ!

ವಿಚ್ಛೇದನದ ನಂತರ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಅದರಲ್ಲೂ ಅವರು ಮಾಡುತ್ತಿರುವ ಕೆಲಸಗಳು.. ಸಿನಿಮಾಗಳನ್ನು ಒಪ್ಪಿಕೊಳ್ಳುವುದು.. ಹೆಚ್ಚುತ್ತಿರುವ ಕ್ರೇಜ್ ನೋಡಿ ಕೆಲ ದಿನಗಳಿಂದ ಸಮಂತಾ ಹಾಟ್ ಟಾಪಿಕ್ ಆಗಿದ್ದಾರೆ. ಎಂದಿನಂತೆ ಟ್ರೆಂಡಿಂಗ್ನಲ್ಲಿದ್ದಾರೆ ಸಮಂತಾ. ಅವರಿಗಿರುವ ಫಾಲೋವರ್ಸ್ ನೋಡಿದರೆ ಮಾತ್ರ ಅರ್ಥವಾಗುತ್ತದೆ.
Published by:Vasudeva M
First published: