ಬಿಕಿನಿ ತೊಡುವುದು ಹಾಗೂ ಬಿಕಿನಿ ತೊಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಈಗ ಕಾಮನ್ ಆಗಿ ಹೋಗಿದೆ. ಬಿಕಿನಿ ತೊಟ್ಟು ತೆರೆ ಮೇಲೆ ಕಾಣಿಸಿಕೊಳ್ಳಲು ನಾಯಕಿಯರು ನಿರಾಕರಿಸುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಿಕಿನಿ ತೊಡಲು ಯಾವುದೇ ಕಾರಣ ಬೇಕಿಲ್ಲ. ಹಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಇತರೆ ಸಿನಿರಂಗದ ನಟಿಯರು ಬಿಕಿನಿ ತೊಟ್ಟು ಹಾಟ್ ಫೋಟೋಶೂಟ್ಗೆ ಪೋಸ್ ಕೊಡುತ್ತಿರುತ್ತಾರೆ. ಆದರೂ ಈಗಲೂ ಬಿಕಿನಿ ತೊಟ್ಟ ನಟಿಯರನ್ನು ಕೆಲವರು ಟ್ರೋಲ್ ಮಾಡುತ್ತಾ ಟೀಕಿಸುತ್ತಿರುತ್ತಾರೆ. ಟೀಕಿಸುವವರಿಗೆ ಸಾಕಷ್ಟು ಮಂದಿ ಸರಿಯಾದ ಉತ್ತರ ಸಹ ಕೊಡುತ್ತಿರುತ್ತಾರೆ. ಇಲ್ಲೊಬ್ಬರು ಸ್ಟಾರ್ ನಟಿ ಬಿಕಿನಿ ವಿಷಯವಾಗಿ ಹೇಳಿಕೆ ನೀಡಿದ್ದಾರೆ. ಇವರಿಗೆ 54 ವರ್ಷ. ಬಿಕಿನಿ ತೊಡಲು ಬಯಸುವ ಈ ನಟಿಯ ಹಾಟ್ ಫೋಟೋಗಳು ಈಗಲೂ ಸಹ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತದೆ. ಅಷ್ಟಕ್ಕೂ ಯಾರೀ ನಟಿ ಅಂತೀರಾ..? ಮುಂದೆ ಓದಿ ತಿಳಿಯುತ್ತದೆ.
ಹಾಲಿವುಡ್ ತಾರೆ ಸಲ್ಮಾ ಹಯೆಕ್ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗುತ್ತದೆ. ನಟಿಗೆ 54 ವರ್ಷಗಳಾದರೂ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಈ ವಯಸ್ಸಲ್ಲೂ ನಟಿ ತಮ್ಮ ಬಿಕಿನಿ ಫೋಟೋಗಳ ಮೂಲಕ ಯುವಕರ ಹೃದಯಕ್ಕೆ ಕಿಚ್ಚು ಹಚ್ಚುತ್ತಿದ್ದಾರೆ. ಈ ರೀತಿ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಳ್ಳುವ ಬಗ್ಗೆ ಸಲ್ಮಾ ಮನಬಿಚ್ಚಿ ಮಾತನಾಡಿದ್ದಾರೆ.
View this post on Instagram
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ