Sai Pallavi: ಭಾಷೆ ಬರದಿದ್ರೂ ಕನ್ನಡ ಕಲಿತು ಡಬ್​ ಮಾಡಿದ ಸಾಯಿ ಪಲ್ಲವಿ! 'ಆ' ನಟಿಗೆ ಗೊತ್ತಿದ್ರೂ ಡವ್​ ಮಾಡ್ತಾರೆ ಎಂದು ಟ್ರೋಲ್

ಕೆಲ ನಟಿಯರು ಕನ್ನಡ ಬಂದರು ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಕನ್ನಡ ಬಿಟ್ಟು ಇಂಗ್ಲಿಷ್ ಮಾತನಾಡುವ ಕೆಲ ಕಲಾವಿದರ ಬಗ್ಗೆ ಕನ್ನಡಿಗರು ಅನೇಕ ಬಾರಿ ಮುನಿಸಿಕೊಂಡಿದ್ದೂ ಇದೆ. ಆದರೆ ಕನ್ನಡ ಭಾಷೆ ಗೊತ್ತಿರದ ಸಾಯಿ ಪಲ್ಲವಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಸಾಯಿ ಪಲ್ಲವಿ

ಸಾಯಿ ಪಲ್ಲವಿ

  • Share this:
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ನಿನ್ನೆಯಷ್ಟೆ  ಹುಟ್ಟುಹಬ್ಬ(Birthday) ಆಚರಿಸಿಕೊಂಡಿದ್ದಾರೆ. ಅದ್ಭುತ ಅಭಿನಯ, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಸಿನಿಪ್ರಿಯರ ಮನಗೆದ್ದಿರುವ ಸುಂದರಿ. ಅಭಿನಯ (Acting) ಮತ್ತು ನೃತ್ಯ (Dance) ದ ಮೂಲಕ ಚಿತ್ರಪ್ರಿಯರ ಹೃದಯ ಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ (Malar) ಎಂದೇ  ಖ್ಯಾತಿ ಗಳಿಸಿದ್ದಾರೆ ಸಾಯಿ ಪಲ್ಲವಿ. ತಮಿಳು (Tamil), ಮಲಯಾಳಂ (Malayalam) ಮತ್ತು ತೆಲುಗು (Telugu) ಚಿತ್ರರಂಗದಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಭರಪೂರ ಶುಭಾಶಯಗಳು ಹರಿದುಬರುತ್ತಿದೆ. ಚಿತ್ರರಂಗದ ಪ್ರಮುಖ ನಾಯಕ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇಂದು ಮತ್ತೊಂದು ವಿಚಾರಕ್ಕೆ ಸಾಯಿ ಪಲ್ಲವಿ ಸುದ್ದಿಯಾಗುತ್ತಿದ್ದಾರೆ.

ಕನ್ನಡ ಕಲಿತು ಮಾತನಾಡಿದ ಸಾಯಿ ಪಲ್ಲವಿ!

ಕೆಲ ನಟಿಯರು ಕನ್ನಡ ಬಂದರು ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಕನ್ನಡ ಬಿಟ್ಟು ಇಂಗ್ಲಿಷ್ ಮಾತನಾಡುವ ಕೆಲ ಕಲಾವಿದರ ಬಗ್ಗೆ ಕನ್ನಡಿಗರು ಅನೇಕ ಬಾರಿ ಮುನಿಸಿಕೊಂಡಿದ್ದೂ ಇದೆ. ಆದರೆ ಕನ್ನಡ ಭಾಷೆ ಗೊತ್ತಿರದ ಸಾಯಿ ಪಲ್ಲವಿ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸಾಯಿ ಪಲ್ಲವಿ (Sai Pallavi) ಅವರ ಮುಂಬರುವ 'ಗಾರ್ಗಿ' (Gargi Movie) ಸಿನಿಮಾದ ಮೆಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೂರು ಭಾಷೆಯಲ್ಲಿ 'ಗಾರ್ಗಿ' ರಿಲೀಸ್

"ಈ ಸಿನಿಮಾ ಬಗ್ಗೆ ಹೇಳಬೇಕು ಎಂದು ನಾನು ಕೆಲ ತಿಂಗಳುಗಳ ಕಾಲ ಕಾದೆ. ಕೊನೆಗೂ ನನ್ನ ಹುಟ್ಟುಹಬ್ಬದ ದಿನ ಈ ವಿಷಯ ಹೇಳಲು ಚಿತ್ರತಂಡ ಅನುಮತಿ ನೀಡಿದೆ. ಗಾರ್ಗಿ ನಿಮ್ಮ ಮುಂದೆ ಇದೆ" ಎಂದು ಸಾಯಿ ಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪೋಸ್ಟ್ ಹಾಕಿದ್ದಾರೆ. ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ 'ಗಾರ್ಗಿ' ರಿಲೀಸ್ ಆಗುತ್ತಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆಯಂತೆ.



ಇದನ್ನೂ ಓದಿ: ತೂಕ ಇಳಿಸಿದ ನಿಧಿ ಸುಬ್ಬಯ್ಯ - ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡ್ತಾರಾ ಪಂಚರಂಗಿ ಬೆಡಗಿ?

ನಟಿ ಕನ್ನಡ ಮಾತನಾಡಿದ ವಿಡಿಯೋ ವೈರಲ್​!

ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ. ಎಡೆಬಿಡದೆ ಪ್ರಯತ್ನ ಹಾಕಿ ಸಾಯಿ ಪಲ್ಲವಿ ಅವರು ಪದೇ ಪದೇ ಉಚ್ಛಾರ ಮಾಡಿ ಕನ್ನಡ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರು ಹೇಗೆ ಕನ್ನಡ ಕಲಿತರು ಎಂಬ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿನಿಮಾಕ್ಕಾಗಿ ಕನ್ನಡ ಕಲಿತು ಮಾತನಾಡುವ ಶ್ರಮ ಹಾಕಿದ ಸಾಯಿ ಪಲ್ಲವಿ ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bollywood ಗೆ ನನ್ನ ಮೆಂಟೈನ್ ಮಾಡೋ ಅಷ್ಟು ಕೆಪಾಸಿಟಿ ಇಲ್ಲ! ಟೈಮ್​ ವೇಸ್ಟ್​ ಮಾಡಲ್ಲ ಎಂದ ತೆಲುಗು ಸೂಪರ್ ಸ್ಟಾರ್​

ಕೇವಲ ನಟಿಯಷ್ಟೇ ಅಲ್ಲ ಸಾಯಿ ಪಲ್ಲವಿ!

2015ರಲ್ಲಿ ಮೊದಲ ಬಾರಿಗೆ ಸಾಯಿ ಪಲ್ಲವಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಮಲಯಾಳಂನ ಫೇಮಸ್‌ ಸಿನಿಮಾ ʼಪ್ರೇಮಂʼ ಮೂಲಕ ಚಿತ್ರರಂಗಕ್ಕೆ ಸಾಯಿ ಪಲ್ಲವಿ ಎಂಟ್ರಿಯಾಗಿದ್ದರು.  ಈ ಚಿತ್ರದಲ್ಲಿ ಮಲರ್‌ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಆ ಬಳಿಕ ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದರು. ಬಳಿಕ ದುಲ್ಕರ್‌ ಸಲ್ಮಾನ್‌ ಅಭಿನಯದ ಕಾಳಿ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇನ್ನು 2018ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಲ್ಲವಿ, ದಿಯಾ ಸಿನಿಮಾದಲ್ಲಿ ಅಭಿನಯಿಸಿದರು. ನಟಿಸಿದ ಎಲ್ಲಾ ಸಿನಿಮಾಗಳು ಭರ್ಜರಿ ಹಿಟ್‌ ಸಾಧಿಸಿದೆ.
Published by:Vasudeva M
First published: