HOME » NEWS » Entertainment » ACTRESS SAI PALLAVI PUTTING MEHENDI FOR KIDS IN PEPRI UTTARPRADESH SESR

Sai Pallavi: ಉತ್ತರ ಪ್ರದೇಶದ ಚಿಣ್ಣರಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ನಟಿ ಸಾಯಿಪಲ್ಲವಿ

Actress Sai Pallavi : ಪೆಪ್ರಿ ನಗರಕ್ಕೆ ತೆರಳಿರುವ ಸಹಜ ಸುಂದರಿ ಸಾಯಿ ಪಲ್ಲವಿ ಇಲ್ಲಿನ ಚಿಣ್ಣರಿಗೆ ಮೆಹಂದಿ ಹಚ್ಚಿ ಸಂಭ್ರಮಿಸಿದ್ದಾರೆ.

news18-kannada
Updated:October 25, 2020, 6:22 PM IST
Sai Pallavi: ಉತ್ತರ ಪ್ರದೇಶದ ಚಿಣ್ಣರಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ನಟಿ ಸಾಯಿಪಲ್ಲವಿ
ಮಕ್ಕಳಿಗೆ ಮೆಹಂದಿ ಹಾಕುತ್ತಿರುವ ಸಾಯಿಪಲ್ಲವಿ
  • Share this:
ಉತ್ತರ ಪ್ರದೇಶ ಕಳೆದೆರಡು ತಿಂಗಳಿನಿಂದ ಸುದ್ದಿಯಲ್ಲಿರುವ ರಾಜ್ಯ. ಆದರೆ, ಈ ಬಾರಿ ಈ ರಾಜ್ಯದ ಮಕ್ಕಳು ನಟಿ ಸಾಯಿ ಪಲ್ಲವಿ ಖುಷಿಗೆ ಕಾರಣವಾಗಿದ್ದಾರೆ. ಇಲ್ಲಿನ ಸೋನ್ಭದ್ರದ ಪೆಪ್ರಿ ನಗರಕ್ಕೆ ತೆರಳಿರುವ ಸಹಜ ಸುಂದರಿ ಸಾಯಿ ಪಲ್ಲವಿ ಇಲ್ಲಿನ ಚಿಣ್ಣರಿಗೆ ಮೆಹಂದಿ ಹಚ್ಚಿ ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, 'ಪೆಪ್ರಿ ಪಿಲ್ಲಸ್'​ (ಪೆಪ್ರಿ ಮಕ್ಕಳು) ಎಂದು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ತಮ್ಮ ಚಿತ್ರ 'ಲವ್​ ಸ್ಟೋರಿ' ಚಿತ್ರದ ಚಿತ್ರೀಕರಣಕ್ಕಾಗಿ ಇಲ್ಲಿಗೆ ತೆರಳಿದ್ದಾರೆ. ಈ ವೇಳೆ ಸಿಕ್ಕ ಬಿಡುವಿನ ಸಮಯದಲ್ಲಿ ಚಿಕ್ಕ ಮಕ್ಕಳಿಗೆ ಮೆಹಂದಿ ಹಾಕಿ ಸಂತೋಷ ಪಟ್ಟಿದ್ದಾರೆ.








View this post on Instagram





Happy Clients♥️Pipri Pillas♥️


A post shared by Sai Pallavi (@saipallavi.senthamarai) on






ನೇರ, ನಿರ್ಭಿತ ನಡೆಯಿಂದ ಚಿತ್ರರಂಗದಲ್ಲಿ ಸಾಯಿ ಪಲ್ಲವಿ ಹೆಸರು ಗಳಿಸಿದವರು. ಈ ಹಿಂದೆ ಕೋಟಿ ಕೊಟ್ಟರೂ ಫೇರ್​ನೆಸ್​ ಕ್ರೀಂ ಜಾಹೀರಾತಲ್ಲಿ ನಟಿಸುವುದಿಲ್ಲ ಎಂದು ಸುದ್ದಿಯಾಗಿದ್ದರು. ವೈದ್ಯೆ ಪದವಿ ಪಡೆದಿರುವ ಸಾಯಿ ಪಲ್ಲವಿ, ತೂಕದ ಪಾತ್ರಗಳಲ್ಲಿ ಮಾತ್ರ ನಟಿಸುವ ಮೂಲಕ ಗಮನ ಸೆಳೆದವರು.

ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸದ್ಯ ಶೂಟಿಂಗ್​ ಆರಂಭಿಸಿರುವ ಸಾಯಿ ಪಲ್ಲವಿ ಮಾಸ್ಕ್​ ಧರಿಸಿ ಮಕ್ಕಳಿಗೆ ಗೋರಂಟಿ ಹಾಕಿದ್ದಾರೆ. ಇದೇ ವೇಳೆ ತಮ್ಮ ಈ ಕೆಲಸಕ್ಕೆ ಮಕ್ಕಳು ಖುಷಿ ಪಟ್ಟಿದ್ದಾರೆ ಎಂದು ಕೂಡ ಇನ್ಸ್ಟಾಗ್ರಾಂನಲ್ಲಿ ಬರೆದು ಕೊಂಡಿದ್ದಾರೆ.
ಸಾಯಿ ಪಲ್ಲವಿಯ ಈ ಫೋಟೋಗೆ ನಟಿ ಸಮಂತಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








View this post on Instagram





I came in like a wrecking ball !!! Cam B


A post shared by Sai Pallavi (@saipallavi.senthamarai) on






ನಟಿ ಅನುಪಮಾ ಪರಮೇಶ್ವರ್​ ಕೂಡ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಟ ನಾಗಾ ಚೈತನ್ಯ ಜೊತೆ ಇದೇ ಮೊದಲ ಬಾರಿ ಸಾಯಿ ಪಲ್ಲವಿ 'ಲವ್​ ಸ್ಟೋರಿ' ಸಿನಿಮಾ ಮೂಲಕ ಜೊತೆಯಾಗಿದ್ದಾರೆ.
Published by: Seema R
First published: October 25, 2020, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories