ನಟಿ ಸಾಯಿ ಪಲ್ಲವಿ (Sai Pallavi) ಅಂತ ಹೇಳಿದ್ರೆ ಸಿನಿ ಪ್ರೇಕ್ಷಕರಿಗೆ ಮೊದಲಿಗೆ ಅವರ ಕಣ್ಣ ಮುಂದೆ ಬರುವುದು ಅವರ ತೆಲುಗಿನ ‘ಫಿದಾ’ ಚಿತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ಚಿತ್ರವನ್ನು ಯಾರಿಂದ ತಾನೇ ಮರೆಯಲು ಸಾಧ್ಯ ಹೇಳಿ? ಆ ಚಿತ್ರದಲ್ಲಿ ಸಾಯಿ ಪಲ್ಲವಿ ಅಚ್ಚ ತೆಲಂಗಾಣ ಭಾಷೆಯ ಶೈಲಿಯಲ್ಲಿ ಮಾತಾಡಿದ್ದು, ಚಿತ್ರದ ಕಥೆಯು ಅನೇಕ ಸಿನಿ ಪ್ರೇಕ್ಷಕರನ್ನು (Cinema audience) ಸಾಯಿ ಪಲ್ಲವಿಯ ಅಭಿಮಾನಿಯಾಗುವಂತೆ ಪ್ರೇರೇಪಿಸಿದವು ಎಂದು ಹೇಳಬಹುದು. ಇತ್ತೀಚೆಗೆ ಇವರು ‘ವಿರಾಟ ಪರ್ವಂ' (Virata Parvam) ಎಂಬ ತೆಲುಗು ಚಿತ್ರದಲ್ಲಿಯೂ ಸಹ ಕವಿತೆಗಳು ಇಷ್ಟವಾಗಿ ಅದನ್ನು ಬರೆದ ವ್ಯಕ್ತಿಯನ್ನು ಹುಡುಕಿಕೊಂಡು ಜೀವನದ ತುಂಬಾನೇ ಒಂದು ಕಠಿಣವಾದ ಮಾರ್ಗದಲ್ಲಿ ಹೋಗುವ ಪ್ರಿಯತಮೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತುಂಬಾನೇ ಪ್ರೇಕ್ಷಕರ ಮನ ಮುಟ್ಟುವಂತೆ ಅಭಿನಯಿಸಿದ್ದು, ಈ ಪಾತ್ರವು ನಟಿಯ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚು ಆಗಿಸಿರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.
ಈಗೇಕೆ ಈ ನಟಿಯ ಬಗ್ಗೆ ಮಾತು ಅಂತೀರಾ? ಈ ನಟಿ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ ತನ್ನ ಜೀವನದಲ್ಲಿ ನಡೆದಂತಹ ಒಂದು ಘಟನೆಯ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ ನೋಡಿ. ಸಾಮಾನ್ಯವಾಗಿ ಬಹುತೇಕರು ಕಾಲೇಜಿನಲ್ಲಿ ಓದುತ್ತಿರುವಾಗ ಯಾರಾದರೂ ತುಂಬಾ ಇಷ್ಟವಾದರೆ ಅವರಿಗೆ ಗೊತ್ತಿರಲಾರದಂತೆ ಅವರನ್ನು ಹಿಂಬಾಲಿಸಿಕೊಂಡು ಹೋಗುವುದು ಮತ್ತು ಅವರಿಗೆ ಪ್ರೇಮ ಪತ್ರಗಳನ್ನು ಬರೆಯುವುದನ್ನು ಮಾಡಿರುತ್ತಾರೆ.
7ನೇ ತರಗತಿಯಲ್ಲೇ ಹುಡುಗನಿಗೆ ಲವ್ ಲೆಟರ್ ಬರೆದಿದ್ರಂತೆ ನಟಿ
ಈ ನಟಿಯೂ ಸಹ ಶಾಲೆಯಲ್ಲಿರುವಾಗ ಒಬ್ಬ ಹುಡುಗನಿಗೆ ಪ್ರೇಮ ಪತ್ರವನ್ನು ಬರೆದಿದ್ದರಂತೆ. ಆನಂತರ ಏನಾಯ್ತು ಅಂತ ತಿಳಿದುಕೊಳ್ಳುವುದಕ್ಕೆ ನೀವು ಮುಂದೆ ಓದಿ. ನಟಿ ಸಾಯಿ ಪಲ್ಲವಿ ಅವರು 7ನೇ ತರಗತಿಯಲ್ಲಿದ್ದಾಗ ಒಬ್ಬ ಹುಡುಗನು ಅವರಿಗೆ ತುಂಬಾನೇ ಇಷ್ಟವಾಗಿ ಅವನಿಗೆ ಒಂದು ಪ್ರೇಮ ಪತ್ರವನ್ನು ಬರೆದಿದ್ದರಂತೆ. ನಂತರ ಅದು ಹೇಗೋ ತನ್ನ ಪೋಷಕರಿಗೆ ವಿಷಯ ತಿಳಿದು ನನ್ನನ್ನು ಚೆನ್ನಾಗಿ ಹೊಡೆದಿದ್ದರು ಎಂದು ಖುದ್ದು ನಟಿಯೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rhea Chakraborty: ನಟಿ ರಿಯಾ ಚಕ್ರವರ್ತಿಗೆ ಗಾಂಜಾ ಕೇಸ್ನಡಿ 10 ವರ್ಷ ಜೈಲು ಶಿಕ್ಷೆ?
‘ವಿರಾಟ ಪರ್ವಂ’ ಸಿನೆಮಾದ ಬಗ್ಗೆ ನಟಿ ಹೇಳಿದ್ದೇನು
ಪಲ್ಲವಿ ಅವರ ಇತ್ತೀಚಿನ ಚಿತ್ರವಾದ ‘ವಿರಾಟ ಪರ್ವಂ’ ನಲ್ಲಿ ಅವರು ಪತ್ರವನ್ನು ತಲುಪಿಸುವ ಪ್ರಯತ್ನದಲ್ಲಿ ತನ್ನ ಜೀವವನ್ನೇ ಪಣಕ್ಕಿಡುವ ಪಾತ್ರದಲ್ಲಿ ನಟಿಸಿದ್ದನ್ನು ನಾವು ನೋಡಬಹುದು. ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾದ ಯೂಟ್ಯೂಬ್ ಚಾನೆಲ್ ನ ‘ಮೈ ವಿಲೇಜ್ ಶೋ’ ಗೆ ಚಿತ್ರದ ಬಗ್ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಟಿ ತನ್ನ ನಿಜ ಜೀವನದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು ಆದರೆ ಸ್ವಲ್ಪ ವಿಭಿನ್ನವಾಗಿತ್ತು ಎಂದು ವಿವರಿಸಿದ್ದಾರೆ.
ಹೆತ್ತವರಿಂದ ಪೆಟ್ಟು ತಿಂಡಿದ್ರಂತೆ ನಟಿ ಸಾಯಿ
ಚಿತ್ರದಲ್ಲಿ ಅವರು ಕಳುಹಿಸಿದ ಪತ್ರಗಳು ನಿಜವೇ ಅಥವಾ ಅವರು ನಟಿಸುತ್ತಿದ್ದೀರಾ ಎಂದು ಕೇಳಿದಾಗ, "ಈ ಚಿತ್ರದಲ್ಲಿ, ನಿರ್ದೇಶಕರ ಸೂಚನೆಯಂತೆ ನಾನು ಅವುಗಳನ್ನು ಬರೆದಿದ್ದೇನೆ. ಆದರೆ ನಿಜ ಜೀವನದಲ್ಲಿ, ನಾನು ಒಮ್ಮೆ ಮಾತ್ರ ಪತ್ರವನ್ನು ಬರೆದಿದ್ದೇನೆ. ನಾನು ಒಬ್ಬ ಹುಡುಗನಿಗೆ ಪತ್ರ ಬರೆದೆ, ಅದು ನನ್ನ ಬಾಲ್ಯದಲ್ಲಿ. ಬಹುಶಃ ನಾನು ನನ್ನ 7ನೇ ತರಗತಿಯಲ್ಲಿದ್ದಾಗ ಅಂತ ಅನ್ನಿಸುತ್ತದೆ. ನಂತರ ನಾನು ನನ್ನ ಹೆತ್ತವರ ಬಳಿ ಸಿಕ್ಕಿಬಿದ್ದೆ. ನನ್ನ ಹೆತ್ತವರು ನನಗೆ ತುಂಬಾ ಹೊಡೆದಿದ್ದರು" ಎಂದು ಹೇಳಿಕೊಂಡರು.
ಇದನ್ನೂ ಓದಿ: KL Rahul: ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಮದುವೆಗೆ ಫಿಕ್ಸ್ ಆಯ್ತಾ ಮುಹೂರ್ತ? ಇನ್ನು ಮೂರು ತಿಂಗಳೊಳಗೆ ಪೆಪೆಪೇ ಡುಂಡುಂಡುಂ!
‘ವಿರಾಟ ಪರ್ವಂ’ ಚಿತ್ರವು ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಲನಚಿತ್ರದಲ್ಲಿ ನಟ ರಾಣಾ ದಗ್ಗುಬಾಟಿ ಮತ್ತು ನಟಿ ಪ್ರಿಯಾಮಣಿ ಸಹ ನಟಿಸಿದ್ದರು. ಆದರೆ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ಜುಲೈ 1 ರಂದು ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಿತು. ನಟಿ ಸಾಯಿ ಪಲ್ಲವಿ ಅವರು ‘ಗಾರ್ಗಿ’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಜುಲೈ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ