“ಆಕೆ ಇನ್ನು ನಿಮ್ಮ ತಲೆನೋವು” ಎಂದು ಗೆಳತಿ ಪತಿಗೆ ಸಂದೇಶ ಬರೆದ Rhea Chakraborty

ಕಳೆದ ವಾರ, ಸ್ವತಃ ಶಿಬಾನಿ ದಾಂಡೇಕರ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ, ತಮ್ಮ ಮದುವೆಯ ಒಂದಷ್ಟು ಫೋಟೋಗಳನ್ನು ಹಂಚಿಕೊಂಡು, “ಮಿಸ್ಟರ್ ಅಂಡ್ ಮಿಸಸ್‌” ಎಂಬ ಶೀರ್ಷಿಕೆ ನೀಡಿದ್ದರು.

ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ

  • Share this:
ಫೇರಿಟೇಲ್‍(Fairytale)ಗಳು ನಿಜವಾಗುತ್ತವೆ ಹೀಗೆಂದು ಬರೆದುಕೊಂಡಿದ್ದಾರೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Actress Rhea Chakraborty). ಹಾಗಂತ ಅವರು ಈ ವಾಕ್ಯವನ್ನು ಹಾಗೇ ಸುಮ್ಮನೇ ಬರೆದುಕೊಂಡದ್ದಲ್ಲ, ಅವರ ಕಣ್ಣ ಮುಂದೆಯೇ ಗೆಳತಿಯ ನನಸಾದ ಫೇರಿಟೇಲ್‍ ನಂತದ್ದೇ ಸುಂದರ ಪ್ರೇಮ ಕಥೆ(Love Story)ಯಿದೆ. ಹೌದು, ತನ್ನ ಆಪ್ತ ಸ್ನೇಹಿತೆ ಶಿಬಾನಿ ದಾಂಡೇಕರ್ (Shibani Dandekar) ಅವರ ಮದುವೆಯ ಸಂಗತಿಯನ್ನು ಉಲ್ಲೇಖಿಸಿಯೇ ರಿಯಾ “ಫೇರಿಟೇಲ್‍ಗಳು ನಿಜವಾಗುತ್ತವೆ” ಎಂಬುದನ್ನು ಮನಸಾರೆ ಬರೆದುಕೊಂಡಿದ್ದು. ಹಲವು ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ನಟ, ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ (Farhan Akhtar) ಅವರನ್ನು ಶಿಬಾನಿ ಇತ್ತೀಚೆಗೆ ಮದುವೆಯಾದರು.

ಗೆಳತಿಯ ಮದುವೆಯ ಹಲವು ಸುಂದರ ಕ್ಷಣಗಳ ಫೋಟೋಗಳನ್ನು ಇನ್‍ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಿಯಾ ಚಕ್ರವರ್ತಿ, “ಶ್ರೀ ಮತ್ತು ಶ್ರೀಮತಿ ಅಖ್ತರ್. ಪ್ರೀತಿ ಸಾಂಕ್ರಾಮಿಕ, ನಿಮ್ಮ ವಿಶೇಷ ದಿನದಂದು ಇಷ್ಟೊಂದು ಪ್ರೀತಿಯನ್ನು ಹಂಚಿದ್ದಕ್ಕೆ ಧನ್ಯವಾದಗಳು. ಶಿಬಾನಿ ದಾಂಡೇಕರ್, ನೀನು ವಿಶ್ವದ ಅತ್ಯಂತ ಸುಂದರ ಮಧು ಮಗಳು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಬರೆದಿದ್ದಾರೆ.

ಪ್ರೀತಿಯಿಂದ ಶುಭ ಹಾರೈಕೆಗಳು

ಹೀಗೆ ಗೆಳತಿಗೆ ಸುಂದರ ಸಂದೇಶ ಬರೆದಿರುವ ರಿಯಾ, ಗೆಳತಿಯ ಪತಿಗೂ ಸಂದೇಶವನ್ನು ಬರೆಯಲು ಮರೆತಿಲ್ಲ. “ಫರ್ಹಾನ್ ಅಖ್ತರ್, ಅವಳು ಇನ್ನು ನಿಮ್ಮ ತಲೆನೋವು, ತುಂಬ ಹೃದಯದ ಪ್ರೀತಿಯಿಂದ ಶುಭ ಹಾರೈಕೆಗಳು” ಎಂದು ಫರ್ಹಾನ್ ಅಖ್ತರ್‌ಗೆ ಛೇಡಿಸುವ ಸಂದೇಶವನ್ನು ಬರೆದಿದ್ದಾರೆ ಅವರು.

ಕಳೆದ ವಾರ, ಸ್ವತಃ ಶಿಬಾನಿ ದಾಂಡೇಕರ್ ಅವರೇ ಸಾಮಾಜಿಕ ಮಾಧ್ಯಮದಲ್ಲಿ, ತಮ್ಮ ಮದುವೆಯ ಒಂದಷ್ಟು ಫೋಟೋಗಳನ್ನು ಹಂಚಿಕೊಂಡು, “ಮಿಸ್ಟರ್ ಅಂಡ್ ಮಿಸಸ್‌” ಎಂಬ ಶೀರ್ಷಿಕೆ ನೀಡಿದ್ದರು.
ಮದುವೆ ಬಗ್ಗೆ ಬರೆದುಕೊಂಡ ಫರ್ಹಾನ್ ಅಖ್ತರ್

ಫರ್ಹಾನ್ ಅಖ್ತರ್ ಕೂಡ, ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, “ಶಿಬಾನಿ ದಾಂಡೇಕರ್ ಮತ್ತು ನಾನು, ನಮ್ಮ ಮದುವೆಯ ಸಮಾರಂಭವನ್ನು ಆಚರಿಸಿಕೊಂಡೆವು ಮತ್ತು ಆ ದಿನದಂದು ನಮಗೆ ಖಾಸಗಿತನದ ಅಗತ್ಯವಿತ್ತು ಎಂಬುದನ್ನು ಗೌರವಿಸಿದ ಪ್ರತಿಯೊಬ್ಬರಿಗೂ ನಾವು ಆಭಾರಿಗಳಾಗಿದ್ದೇವೆ. ಆದರೆ, ಆ ದಿನದ ಕೆಲವು ಅಮೂಲ್ಯ ಕ್ಷಣಗಳ ಪೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ ಮತ್ತು ನಮ್ಮ ಹೊಸ ಪಯಣವನ್ನು ಆರಂಭಿಸುವ ಮುನ್ನ ನಿಮ್ಮೆಲ್ಲರ ಆಶೀರ್ವಾದವನ್ನು ಪಡೆಯದ ಹೊರತು ಈ ಆಚರಣೆ ಅಪೂರ್ಣ ಎನಿಸುತ್ತದೆ. ನಿಮಗಾಗಿ ಪ್ರೀತಿಯಿಂದ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:  Salman Khan: ಕೇಳ್ರಪ್ಪೋ ಕೇಳಿ.. ಖ್ಯಾತ ನಟಿ ಜೊತೆ ಗುಟ್ಟಾಗಿ ಮದ್ವೆಯಾಗ್ಬಿಟ್ರಂತೆ ಸಲ್ಲು! ಫೋಟೋಗಳು ಸಿಕ್ಕಾಪಟ್ಟೆ ವೈರಲ್​

ಮದುವೆಯಲ್ಲಿ ಹಲವು ತಾರೆಯರು ಭಾಗಿ

ಫೆಬ್ರವರಿ 19 ರಂದು ನಡೆದ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರ ಮದುವೆಯಲ್ಲಿ ಹತ್ತಿರದ ಸಂಬಂಧಿಗಳು ಸೇರಿದಂತೆ, ಅತ್ಯಂತ ಆತ್ಮೀಯ ಸ್ನೇಹಿತರಾದ ಹೃತಿಕ್ ರೋಶನ್, ರಿಯಾ ಚಕ್ರವರ್ತಿ, ಗೌರವ್ ಕಪೂರ್, ಸಮೀರ್ ಕೊಚ್ಚಾರ್, ಮೋನಿಕಾ ಡೋಗ್ರಾ, ಶಂಕರ್ ಮಹದೇವನ್ ಮತ್ತು ಎಹಸಾನ್ ನೂರಾನಿ ಮುಂತಾದವರು ಭಾಗವಹಿಸಿದ್ದರು.

ರೆಡ್ ಗೌನ್ ತೊಟ್ಟ ಶಿಬಾನಿ ದಾಂಡೇಕರ್ ಥೇಟ್ ಫೇರಿಟೇಲ್‍ ಗಳಲ್ಲಿ ಬರುವ ರಾಜಕುಮಾರಿಯಂತೆ ಕಂಗೊಳಿಸಿದರೆ, ಫರ್ಹಾನ್ ಅಖ್ತರ್ ಕಪ್ಪು ಧಿರಿಸಿನಲ್ಲಿ ಮಿಂಚಿದ್ದರು.

2015ರಲ್ಲಿ ಫರ್ಹಾನ್, ಶಿವಾನಿ ಭೇಟಿ

ಫರ್ಹಾನ್ ಮತ್ತು ಶಿಬಾನಿ ದಾಂಡೇಕರ್ ಮೊದಲ ಬಾರಿಗೆ ಭೇಟಿಯಾಗಿದ್ದು, 2015 ರಲ್ಲಿ ಪ್ರದರ್ಶನಗೊಂಡಿದ್ದ, ‘ಐ ಕ್ಯಾನ್ ಡು ಇಟ್’ ಎಂಬ ರಿಯಾಲಿಟಿ ಶೋ ಸೆಟ್‍ನಲ್ಲಿ. ಆ ಬಳಿಕ ಪರಸ್ಪರ ಆತ್ಮೀಯರಾಗಿದ್ದ ಅವರಿಬ್ಬರು, 2018 ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದರು.

ಕಳೆದ ವರ್ಷ, ಫರ್ಹಾನ್ ಅಖ್ತರ್ ಹೆಸರಿನ ಟ್ಯಾಟೂವನ್ನು ತನ್ನ ಕತ್ತಿನ ಮೇಲೆ ಹಾಕಿಸಿಕೊಳ್ಳುವ ಮೂಲಕ ಶಿಬಾನಿ ದಾಂಡೇಕರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಅವರಿಬ್ಬರ ಪ್ರೇಮ ಸಂಬಂಧದ ಕುರಿತ ಊಹಾಪೋಹಗಳು ಕೂಡ ಆರಂಭವಾಗಿದ್ದವು.

ಇದನ್ನೂ ಓದಿ:  Ranveer Singh: ಮಾವನ ಮನೆಯಲ್ಲಿ ಚಿರೋಟಿ ತಿಂದು ರಣವೀರ್ ಸಿಂಗ್ ಫುಲ್ ಖುಷ್, ಯಾವತ್ತೂ ಇದರ ರುಚಿ ನೋಡಿರ್ಲಿಲ್ವಂತೆ!

ಅವೆಲ್ಲದಕ್ಕೆ, ಪೂರ್ಣ ವಿರಾಮ ಇಡುವ ಉದ್ದೇಶದಿಂದ ಸ್ವತಃ ಫರ್ಹಾನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮಿಬ್ಬರ ಫೋಟೊಗಳನ್ನು ಹಂಚಿಕೊಂಡು, ತಮ್ಮ ನಡುವಿನ ಸಂಬಂಧ ಏನೆಂಬುದನ್ನು ಸ್ಪಷ್ಟಪಡಿಸಿದ್ದರು. ಅವರಿಬ್ಬರ ಮದುವೆ ಖಂಡಾಲಾದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಿತು.
Published by:Mahmadrafik K
First published: