Rhea Chakraborty: ಎರಡು ವರ್ಷಗಳ ನಂತರ ಕೆಲಸಕ್ಕೆ ಮರಳಿದ ರಿಯಾ Thanks ಹೇಳಿದ್ಯಾರಿಗೆ?

ನಟಿ ರಿಯಾ ಅವರು ಸುಮಾರು ಎರಡು ವರ್ಷಗಳ ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಎಂದು ಸ್ವತಃ ಅವರೇ ಫೋಟೋ(Photo)ವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿ(Fans)ಗಳಿಗೆ ತಿಳಿಸಿದ್ದಾರೆ.

ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ

  • Share this:
ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರೇಯಸಿ ರಿಯಾ ಚಕ್ರವರ್ತಿ (Rhea Chakraborty) ತುಂಬಾ ದಿನಗಳ ನಂತರ ಮತ್ತೆ ಈಗ ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ನಿಧನವಾದ ಸಂದರ್ಭದಲ್ಲಿ ಹೊರಬಿದ್ದ ಡ್ರಗ್ಸ್ ಪ್ರಕರಣ(Drugs Case)ದಲ್ಲಿ ರಿಯಾ ಚಕ್ರವರ್ತಿ ಜೈಲು ವಾಸ ಸಹ ಅನುಭವಿಸಬೇಕಾಗಿದ್ದು ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಈಗ ಈ ನಟಿ ಸುದ್ದಿಯಲ್ಲಿರುವುದು ಒಂದು ಒಳ್ಳೆಯ ಕಾರಣಕ್ಕೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇನು ಎಂದರೆ ನಟಿ ರಿಯಾ ಅವರು ಸುಮಾರು ಎರಡು ವರ್ಷಗಳ ನಂತರ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ ಎಂದು ಸ್ವತಃ ಅವರೇ ಫೋಟೋ(Photo)ವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿ(Fans)ಗಳಿಗೆ ತಿಳಿಸಿದ್ದಾರೆ.

ರಿಯಾ ಚಕ್ರವರ್ತಿ ಅವರು ಧ್ವನಿ ರೆಕಾರ್ಡಿಂಗ್ (Voice Recording) ಮಾಡುತ್ತಿರುವ ವೀಡಿಯೋ(Video)ವೊಂದನ್ನು ಹಂಚಿ ಕೊಂಡಿದ್ದಾರೆ. ಎರಡು ವರ್ಷಗಳ ನಂತರ ಅವರು ಕೆಲಸಕ್ಕೆ ಮರಳಿದ್ದಾರೆ ಎಂದು ಈ ನಟಿ ಉಲ್ಲೇಖಿಸಿದ್ದಾರೆ. ಈ ವೀಡಿಯೋವನ್ನು ಹಂಚಿಕೊಂಡ ರಿಯಾ ಅವರು "ನಿನ್ನೆ, ನಾನು 2 ವರ್ಷಗಳ ನಂತರ ಮತ್ತೊಮ್ಮೆ ಕೆಲಸಕ್ಕೆ ಹೋಗಿದ್ದೆ.

ನನ್ನ ಕಠಿಣ ಸಮಯಗಳಲ್ಲಿ ನನ್ನೊಂದಿಗೆ ನಿಂತ ಎಲ್ಲಾ ಜನರಿಗೆ ದೊಡ್ಡ ಧನ್ಯವಾದಗಳು. ಏನೇ ಆಗಲಿ, ಸೂರ್ಯ ಯಾವಾಗಲೂ ಹೊಳೆಯುತ್ತಾನೆ. ನನ್ನನ್ನು ಎಂದಿಗೂ ಬಿಟ್ಟುಕೊಡಬೇಡಿ" ಎಂದು ಹೇಳಿ ಆ ವೀಡಿಯೋಗೆ ಶೀರ್ಷಿಕೆಯನ್ನು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ:  Kannada serial: ‘ಸಿಲ್ಲಿ ಲಲ್ಲಿ‘ ಸೂಜಿ ‘ಸಂತೂರ್​ ಮಮ್ಮಿ‘, ಪ್ರೇಕ್ಷಕರ ಕಾಮೆಂಟ್ಸ್​​ಗೆ ಏನಂತಾರೆ ಜ್ಯೋತಿ ಕಿರಣ್?

ರೇಡಿಯೋ ಚಾನೆಲ್ ನಲ್ಲಿ ರೆಕಾರ್ಡಿಂಗ್

ಈ ವೀಡಿಯೋದಲ್ಲಿ ನಟಿ ರಿಯಾ ಕೈಯಲ್ಲಿ ಒಂದು ಸ್ಕ್ರಿಪ್ಟ್ ಅನ್ನು ಹಿಡಿದುಕೊಂಡು ಓದುವುದನ್ನು ಮತ್ತು ರೇಡಿಯೋ ಚಾನೆಲ್ ನ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಹಾಗೆಯೇ ರೆಕಾರ್ಡ್ ಮಾಡುವ ಸಂದರ್ಭದಲ್ಲಿ ಒಂದು ಹಂತದಲ್ಲಿ, ಅವರು ಕ್ಯಾಮೆರಾವನ್ನು ನೋಡಿ ಮುಗುಳ್ನಕ್ಕಿದ್ದಾರೆ.
ಆಪ್ತ ವಲಯದ ಗೆಳೆಯರಿಂದ ಪ್ರತಿಕ್ರಿಯೆ

ರಿಯಾ ಅವರ ಆಪ್ತ ಸ್ನೇಹಿತ ಶಿಬಾನಿ ದಾಂಡೇಕರ್ ""ಯಸ್ಸ್ ಗರ್ಲ್ ಗೆಟಿ ಇಟ್"" ಎಂದು ಪ್ರತಿಕ್ರಿಯಿಸಿದ್ದಾರೆ. ಮಲ್ಲಿಕಾ ದುವಾ ಕಾಮೆಂಟ್ಸ್ ವಿಭಾಗದಲ್ಲಿ ಬಲವಾದ ತೋಳಿನ ಎಮೋಜಿಯನ್ನು ಹಾಕಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬ್ಲಾಗರ್ ತ್ರಿಶಾಲಾ ಸಿಕ್ಕಾ ಅವರು "ನೀವು ಹೇಗೆ ತುಂಬಾ ಸುಂದರವಾಗಿ ಮತ್ತು ನಿರಾಯಾಸವಾಗಿ ಕಾಣುತ್ತಿದ್ದೀರಿ" ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಒಬ್ಬ ಅಭಿಮಾನಿ ಈ ಪೋಸ್ಟ್ ಅನ್ನು ನೋಡಿ "ನೀವು ಕೆಲಸಕ್ಕೆ ಮರಳಿರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ. ನಿಮಗೆಲ್ಲರಿಗೂ ಯಶಸ್ಸನ್ನು ಹಾರೈಸುತ್ತೇನೆ. ಉಜ್ವಲ ಭವಿಷ್ಯ ನಿಮ್ಮದಾಗಲಿ" ಎಂದು ಹೇಳಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಹೊಸ ಹಾಡು ಬರುವುದಿದೀಯಾ" ಎಂದು ಕೇಳಿದ್ದಾರೆ. ಇನ್ನೊಬ್ಬರು "ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ನೀವು ಅತ್ಯಂತ ಬಲಶಾಲಿ ಹೆಣ್ಣುಮಗಳು" ಎಂದು ಬರೆದಿದ್ದಾರೆ.

ಚೆಹ್ರೆ ಸಿನಿಮಾದಲ್ಲಿ ರಿಯಾ ನಟನೆ

ರಿಯಾ ಕೊನೆಯ ಬಾರಿಗೆ ರುಮ್ಮಿ ಜಾಫ್ರಿ ಅವರ ‘ಚೆಹ್ರೆ’ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು, ಇದು 2021 ರಲ್ಲಿ ಬಿಡುಗಡೆಯಾಯಿತು ಮತ್ತು 2019 ಮತ್ತು 2020 ರಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಯಿತು. ಈ ಚಿತ್ರದಲ್ಲಿ ನಟರಾದ ಇಮ್ರಾನ್ ಹಾಶ್ಮಿ, ಅಮಿತಾಭ್ ಬಚ್ಚನ್, ಸಿದ್ಧಾಂತ್ ಕಪೂರ್, ರಘುಬೀರ್ ಯಾದವ್ ಮತ್ತು ಅನ್ನು ಕಪೂರ್ ನಟಿಸಿದ್ದಾರೆ.

ಇದನ್ನೂ ಓದಿ:  Urfi Javed: ಇವ್ಳ್​ ಅವತಾರ ನೋಡೋಕೆ ಆಗ್ತಿಲ್ಲ.. ವಿಚಿತ್ರ ಕಾಸ್ಟ್ಯೂಮ್​ ಕಂಡು ಫ್ಯಾಶನ್​ ಡಿಸಾಸ್ಟರ್​ ಅಂದ್ರು ನೆಟ್ಟಿಗರು!

ಜೂನ್ 14, 2020 ರಂದು ಮುಂಬೈನ ಬಾಂದ್ರಾ ಅಪಾರ್ಟ್ಮೆಂಟ್ ನಲ್ಲಿರುವ ಮನೆಯಲ್ಲಿ ತನ್ನ ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾದ ನಂತರ ಈ ನಟಿ ತುಂಬಾನೇ ಕಠಿಣವಾದ ಸಮಯವನ್ನು ಎದುರಿಸಬೇಕಾಯಿತು. ಅವರ ಸಾವು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಮತ್ತು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬಾಲಿವುಡ್ ನಲ್ಲಿ ಮಾದಕ ವಸ್ತು ಸಂಪರ್ಕದ ಬಗ್ಗೆ ತನಿಖೆ ಸೇರಿದಂತೆ ಅನೇಕ ಬೆಳವಣಿಗೆಗಳಿಗೆ ಕಾರಣವಾಯಿತು.

ರಿಯಾ ಜೈಲುವಾಸ 

ಸೆಪ್ಟೆಂಬರ್ 2020 ರಲ್ಲಿ, ರಿಯಾ ಮತ್ತು ಅವಳ ಕಿರಿಯ ಸಹೋದರ ಶೌವಿಕ್ ಚಕ್ರವರ್ತಿಯನ್ನು ಎನ್ ಸಿಬಿ ಬಂಧಿಸಿತ್ತು. ಇಬ್ಬರನ್ನು ಮುಂಬೈನ ಬೈಕುಲ್ಲಾ ಜೈಲಿಗೆ ಕಳುಹಿಸಲಾಯಿತು, ಅಲ್ಲಿ ರಿಯಾ ಒಂದು ತಿಂಗಳು ಕಳೆದರೆ, ಶೋವಿಕ್ ಮೂರು ತಿಂಗಳ ನಂತರ ಜಾಮೀನು ಪಡೆದನು.

ಕಳೆದ ವರ್ಷ, ತನಿಖೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾದ ರಿಯಾ ಅವರ ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಇತರ ಗ್ಯಾಜೆಟ್ ಗಳನ್ನು ಹಿಂದಿರುಗಿಸಲು ಮುಂಬೈ ನ್ಯಾಯಾಲಯ ಆದೇಶಿಸಿತು.
Published by:Mahmadrafik K
First published: