Video: ಲೀಕ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಕಿಸ್ಸಿಂಗ್​ ವಿಡಿಯೋ..!

news18
Updated:August 13, 2018, 4:30 PM IST
Video: ಲೀಕ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಕಿಸ್ಸಿಂಗ್​ ವಿಡಿಯೋ..!
news18
Updated: August 13, 2018, 4:30 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ, ವಿಜಯ್​ ದೇವರಕೊಂಡ ಹಾಗೂ ರಕ್ಷಿತ್​ ಶೆಟ್ಟಿ ಅವರೇ ಸಾಮಾಜಿಕ ಜಾಲತಾಣದ ತುಂಬ ತುಂಬಿಕೊಂಡಿದ್ದಾರೆ. ಹೌದು ಯಾವ ತಾಣದಲ್ಲಿ ನೋಡಿದರೂ ಕೇವಲ ರಶ್ಮಿಕಾ-ರಕ್ಷಿತ್​ ಸಂಬಂಧ ಮುರಿದು, ಇವರಿಬ್ಬರ ಮಧ್ಯ ವಿಜಯ್ ದೇವರಕೊಂಡ ಬಂದಿದ್ದಾರೆ ಅನ್ನೋ ಸುದ್ದಿಯೇ ಇದೆ.

ರಶ್ಮಿಕಾ ತೆಲುಗಿನಲ್ಲಿ ವಿಜಯ್​ ದೇವಕೊಂಡ ಅವರೊಂದಿಗೆ ಸಿನಿಮಾಗೆ ಸಹಿ ಹಾಕಿದ್ದೇ, ಈ ಎಲ್ಲ ಸುದ್ದಿಗಳಿಗೆ ಮೂಲವಾಯಿತು. ಹೌದು 'ಗೀತ ಗೋವಿಂದಂ' ಸಿನಿಮಾದ ಟ್ರೇಲರ್​ನಲ್ಲಿ ರಶ್ಮಿಕಾ ಹಾಗೂ ವಿಜಯ್​ ಅವರ ಕೆಮಿಸ್ಟ್ರಿ ನೋಡಿದವರು, ರಶ್ಮಿಕಾ, ರಕ್ಷಿತ್​ ಶೆಟ್ಟಿಗೆ ಟಾಟಾ ಹೇಳಿದ್ದಾರೆ ಎಂದೆಲ್ಲ ಟ್ರೋಲ್​ ಮಾಡಿದ್ದರು.

ಆಗ ಅದಕ್ಕೆ ರಕ್ಷಿತ್​ ಶೆಟ್ಟಿ ಅವರ ತಾಯಿ ಸಹ ಪ್ರತಿಕ್ರಿಯಿಸಿ, ರಶ್ಮಿಕಾ ನಮ್ಮ ಮನೆಯ ಸೊಸೆಯೇ, ಗಾಳಿ ಮಾತುಗಳಿಗೆ ಕಿವಿಗೊಡಬೇಡಿ ಎಂದಿದ್ದರು. ಇದಾದ ನಂತರ ಈ ವಿಷಯವಾಗಿ ಮೌನ ಮುರಿದ ರಕ್ಷಿತ್​ ಶೆಟ್ಟಿ, ನಾನು-ಅವಳು ಬಿಟ್ಟಿರದಷ್ಟು ಹತ್ತಿರವಿದ್ದೇವೆ. ನಾವೂ ಮದುವೆ ಆಗುವವರೆಗೂ ಈ ರೀತಿಯ ವಿಚಾರಗಳು ಬರುತ್ತಿರುತ್ತವೆ. ಚಿತ್ರೀಕರಣದಲ್ಲಿ ಎಷ್ಟೇ ಬ್ಯುಸಿ ಇದ್ದರೂ ವಾರಕ್ಕೊಮ್ಮೆ ಆದರೂ ಭೇಟಿ ಮಾಡುತ್ತೇವೆ. ಮುಂದಿನ ವರ್ಷ ಇಬ್ಬರ ಸಿನಿಮಾಗಳ ದಿನಾಂಕ  ನೋಡಿಕೊಂಡು ಮದುವೆ ಆಗುವ ಯೋಜನೆ ಇದೆ. ಇನ್ನೂ ಒಟ್ಟಿಗೆ ತೆರೆ ಹಂಚಿಕೊಳ್ಳುವ ವಿಷಯಕ್ಕೆ ಬಂದರೆ, ಇಬ್ಬರಿಗೂ ಹೊಂದುವ ಪಾತ್ರಕ್ಕಾಗಿ ಕಾಯುತ್ತಿದ್ದೇವೆ, ಸಿಕ್ಕರೆ ಖಂಡಿತ ವಾಗಿಯೂ ಅಭಿನಯಿಸುತ್ತೇವೆ' ಎಂದಿದ್ದಾರೆ.

ಆದರೆ ಈಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ರಶ್ಮಿಕಾ ಹಾಗೂ ವಿಜಯ್​ ದೇವಕೊಂಡ ಅವರ ಚುಂಬನದ ಹಸಿಬಿಸಿ ವಿಡಿಯೋ ಒಂದು ಲೀಕಾಗಿದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅದು ಸಹ ಇನ್ನೇನು ತೆರೆಗೆ ಸಿದ್ಧವಾಗಿರುವ 'ಗೀತ ಗೋವಿಂದಂ' ಸಿನಿಮಾದ ವಿಡಿಯೋ. ಈ ವಿಡಿಯೋ ನಿಮಗಾಗಿ...



ಕನ್ನಡದ ನಟಿಯಾಗಿ ಹೀಗೆಲ್ಲ ಮಾಡುವುದು ಸರಿಯಲ್ಲ. ಅದರಲ್ಲೂ ನಿಶ್ಚಿತಾರ್ಥವಾಗಿರುವ ಹುಡುಗಿಯಾಗಿ ಇಂತಹ ದೃಶ್ಯಗಳಲ್ಲಿ ಅಭಿನಯಿಸುವುದು ಸರಿಯಲ್ಲ ಎಂದು ಕೆಲ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಇದೆಲ್ಲ ಸಿನಿಮಾ ಪ್ರಚಾರಕ್ಕಾಗಿ ಇದನ್ನು ಲೀಕ್​ ಮಾಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್​ ವೈರಲ್​ ಆಗುತ್ತಿದೆ.

ಏನೇ ಆಗಲಿ ಈ ಸಿನಿಮಾದ ಗಾಸಿಪ್​ ನಡುವೆ ಈ ಕಿರಿಕ್​ ಜೋಡಿಯ ವೈಯಕ್ತಿಕ ಸಂಬಂಧ ಯಾವ ಹಂತಕ್ಕೆ ಬಂದು ನಿಲ್ಲುತ್ತದೆಯೋ ಎಂದು ಅಭಿಮಾನಿಗಳಲ್ಲಿ ಆತಂಕ ಮೂಡಿದೆ.





First published:August 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ