ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಮೆರೆಯಾಗಿ ವರ್ಷ ಕಳೆದ್ರು. ಅವರ ನೆನಪು ಮಾತ್ರ ಕನ್ನಡಗರ ಮನದಲ್ಲಿ ಸದಾ ಶಾಶ್ವತವಾಗಿರುತ್ತದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika), ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ್ದ ಚಿತ್ರದ ಬಗ್ಗೆ ಮಾತಾಡುತ್ತಾ ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಟಾಲಿವುಡ್, ಬಾಲಿವುಡ್ಗಳಲ್ಲಿ ಸಾಲು ಸಾಲು ಸಿನಿಮಾ (Movie) ಮಾಡುತ್ತಾ ಬ್ಯುಸಿ ಆಗಿರುವ ಕೊಡಗಿನ ಕುಮರಿ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ ಚಿತ್ರ ಅಂಜನಿಪುತ್ರ ಸಿನಿಮಾ ಬಗ್ಗೆ ಟ್ಟೀಟ್ (Tweet) ಮಾಡಿದ್ದಾರೆ. ಜೊತೆಗೆ ಅಪ್ಪು ಜೊತೆ ಕಳೆದ ಕೆಲ ದಿನಗಳನ್ನು ಸಲ ರಶ್ಮಿಕಾ ನೆನಪು ಮಾಡಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಜೋಡಿಯಾಗಿ ರಶ್ಮಿಕಾ ನಟಿಸಿದ್ದ ಅಂಜನಿಪುತ್ರ ಸಿನಿಮಾ ತೆರೆಕಂಡು 5 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ರಶ್ಮಿಕಾ ಮಂದಣ್ಣ, ಪುನೀತ್ ರಾಜ್ಕುಮಾರ್ ಅವರ ಜೊತೆ ನಡೆದ ಮಾತುಕತೆ ನೆನಪಾಗುತ್ತಿದೆ ಎಂದು ಹೇಳಿದ್ದಾರೆ.
ಪುನೀತ್ ಕುರಿತು ರಶ್ಮಿಕಾ ಮಂದಣ್ಣ ಟ್ವೀಟ್
ಅಂಜನಿಪುತ್ರ ಚಿತ್ರಕ್ಕೆ 5 ವರ್ಷಗಳಾಯಿತು. ನಾನು ಪುನೀತ್ ರಾಜ್ಕುಮಾರ್ ಸರ್ ಜೊತೆ ನಡೆಸಿದ ಮಾತುಕತೆಯನ್ನು ನೆನಪು ಮಾಡಿಕೊಳ್ಳುತ್ತೇನೆ. ಅಪ್ಪು ಸರ್ ನನಗಿಂತ ಹೆಚ್ಚು ನನ್ನ ಮೇಲೆ ವಿಶ್ವಾಸ ಹೊಂದಿದ್ದರು. ಒಳ್ಳೆಯ ಹೃದಯ ಇದ್ದ ವ್ಯಕ್ತಿ. ನನ್ನ ಹೃದಯದಲ್ಲಿ ಅವರು ಸದಾ ಇರುತ್ತಾರೆ. ಅವರ ಜೊತೆ ಅಭಿನಯಿಸಲು ಅವಕಾಶ ಕೊಟ್ಟಿದ್ದಕ್ಕೆ ಹರ್ಷ ಸರ್ಗೆ ಧನ್ಯವಾದ ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
It’s #5YearsForAnjaniPutra already🤍
I keep thinking about the conversations with @PuneethRajkumar sir and he was more confident in me than myself always. He has the best heart, forever will be irreplaceable in my heart. Thankyou Harsha sir for this film,it means a lot to me.🌸
— Rashmika Mandanna (@iamRashmika) December 21, 2022
2017ರಲ್ಲಿ ಬಿಡುಗಡೆಯಾದ ಅಂಜನಿಪುತ್ರ ಸಿನಿಮಾಗೆ ಎ. ಹರ್ಷ ಆ್ಯಕ್ಷನ್ ಕಟ್ ಹೇಳಿದ್ರು. ಅಂಜನಿಪುತ್ರ ಚಿತ್ರ ತಮಿಳಿನ ಪೂಜೈ ಸಿನಿಮಾ ರೀಮೆಕ್ ಆಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಅದರಲ್ಲೂ 'ಚೆಂದ ಚೆಂದ' ಸಾಂಗ್ನಲ್ಲಿ ಅಪ್ಪು-ರಶ್ಮಿಕಾ ಜೋಡಿ ಮ್ಯಾಜಿಕ್ ಮಾಡಿತ್ತಿ. ರಮ್ಯಾಕೃಷ್ಣ, ಆರ್ಮುಗ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ರವಿ ಬಸ್ರೂರು ಮ್ಯೂಸಿಕ್ನಲ್ಲಿ ಚಿತ್ರದ ಸಾಂಗ್ಸ್ ಕೂಡ ಸೂಪರ್ ಹಿಟ್ ಆಗಿತ್ತು.
ಇದನ್ನೂ ಓದಿ: KGF Chapter-1: ಕೆಜಿಎಫ್ ಚಿತ್ರಕ್ಕೆ 4 ವರ್ಷ; ವಿಶೇಷ ಪೋಸ್ಟ್ ಶೇರ್ ಮಾಡಿದ ಹೊಂಬಾಳೆ ಫಿಲ್ಮ್ಸ್
ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾ
ಟಾಲಿವುಡ್, ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು' ನೇರವಾಗಿ ಓಟಿಟಿಗೆ ಬರ್ತಿದೆ. ಇನ್ನು ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಚಿತ್ರದಲ್ಲಿ ಮತ್ತೆ ಶ್ರೀವಲ್ಲಿ ಆಗಿ ಮೋಡಿ ಮಾಡಲು ಬರ್ತಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರುವ 'ವಾರೀಸು' ಚಿತ್ರದಲ್ಲಿ ದಳಪತಿ ವಿಜಯ್ ಜೋಡಿಯಾಗಿ ರಶ್ಮಿಕಾ ಮಿಂಚುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ