News18 India World Cup 2019

'ಕೊಡಗು ಆಸ್ಪತ್ರೆ ಅಭಿಯಾನ'ಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ

ಇದಕ್ಕೂ ಮುನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ನಟಿಯರಾದ ದಿಶಾ ಪೂವಯ್ಯ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ ಬೆಂಬಲ ಸೂಚಿಸಿದ್ದರು. ಸ್ಯಾಂಡಲ್​ವುಡ್​ ತಾರೆಯರ ವ್ಯಾಪಕ ಬೆಂಬಲದಿಂದ ಸಿಪಾಯಿಗಳ ನಾಡಿನ ಅಭಿಯಾನವು ರಾಜ್ಯಾದ್ಯಂತ ಸದ್ದು ಮಾಡಿತ್ತು.

zahir | news18
Updated:June 14, 2019, 7:53 PM IST
'ಕೊಡಗು ಆಸ್ಪತ್ರೆ ಅಭಿಯಾನ'ಕ್ಕೆ ಕೈ ಜೋಡಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ
zahir | news18
Updated: June 14, 2019, 7:53 PM IST
ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಆನ್​ಲೈನ್ ಅಭಿಯಾನ ಜೋರಾಗಿಯೇ ಸದ್ದು ಮಾಡುತ್ತಿದೆ. #EmergencyHospitalinkodagu ಎಂಬ ಹ್ಯಾಶ್ ಟ್ಯಾಗ್​ ಅಭಿಯಾನಕ್ಕೆ ಇದೀಗ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಹ ಕೈ ಜೋಡಿಸಿದ್ದಾರೆ.

ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ಸುವ್ಯವಸ್ಥಿತ ಆಸ್ಪತ್ರೆಯ ಕೊರತೆ ಕೊಡಗಿನಲ್ಲಿದೆ. ಒಂದು ಚಿಕಿತ್ಸೆಗಾಗಿ ಜಿಲ್ಲೆಯ ಜನರು ದೂರದ ಊರಿಗೆ ಪ್ರಯಾಣಿಸಬೇಕಿದೆ. ಹೀಗಾಗಿ ಜಿಲ್ಲೆಯಲ್ಲೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿದ್ದರೆ ಜನರಿಗೆ ತುಂಬಾ ಅನುಕೂಲವಾಗಲಿದೆ. ದಯವಿಟ್ಟು ಸ್ಪಂದಿಸಿ ಎಂದು ಮುಖ್ಯಮಂತ್ರಿ ಅವರನ್ನು ಟ್ಯಾಗ್ ಮಾಡಿ ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿ ಅಪಾರ ಖ್ಯಾತಿಗಳಿಸಿರುವ ಕಿರಿಕ್ ಬೆಡಗಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸುವುದರೊಂದಿಗೆ ಕೊಡಗಿನ ಕೂಗು ದಕ್ಷಿಣ ಭಾರತದಲ್ಲಿ ಕೇಳಿಸಿದೆ. ಟಾಲಿವುಡ್ ಮತ್ತು ಕಾಲಿವುಡ್​ನಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವ ರಶ್ಮಿಕಾ ಪೋಸ್ಟ್​ ಈಗ ಭಾರೀ ವೈರಲ್ ಆಗಿದ್ದು, ಇದರಿಂದ # weneedEmergencyHospitalinkodagu ಹ್ಯಾಷ್ ಟ್ಯಾಗ್ ಅಭಿಯಾನಕ್ಕೆ ಮತ್ತಷ್ಟು ಬಲಬಂದಂತಾಗಿದೆ.




ಇದಕ್ಕೂ ಮುನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ನಟಿಯರಾದ ದಿಶಾ ಪೂವಯ್ಯ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ ಬೆಂಬಲ ಸೂಚಿಸಿದ್ದರು. ಸ್ಯಾಂಡಲ್​ವುಡ್​ ತಾರೆಯರ ವ್ಯಾಪಕ ಬೆಂಬಲದಿಂದ ಸಿಪಾಯಿಗಳ ನಾಡಿನ ಅಭಿಯಾನವು ರಾಜ್ಯಾದ್ಯಂತ ಸದ್ದು ಮಾಡಿತ್ತು.



 




View this post on Instagram




 

#WeNeedEmergencyHospitalInKodagu


A post shared by Dr.Shivarajkumar (@dr.shivarajkumar) on






ಹಲವು ವರ್ಷಗಳಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತಿರುವ ಕೊಡಗಿನ ಜನರು ತುರ್ತು ಚಿಕಿತ್ಸೆಗಾಗಿ ಮಂಗಳೂರು, ಮೈಸೂರು ಮತ್ತು ಬೆಂಗಳೂರಿನ ದೊಡ್ಡ ಆಸ್ಪತ್ರೆಗಳನ್ನು ಅವಲಂಭಿಸಿದ್ದಾರೆ. ಈ ಹಿಂದೆ ಹಲವು ಬಾರಿ ಉತ್ತಮ ಆಸ್ಪತ್ರೆಗೆ ಜಿಲ್ಲೆಯ ಜನರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೀಗಾಗಿ ಕೊಡಗಿನ ಜನರು ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಿಸಬೇಕೆಂಬ ಆನ್​ಲೈನ್ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇನ್ನಷ್ಟು ಜನರು ಯೋಧರ ನಾಡಿನ #WeNeedEmergencyHospitalInKodagu ಅಭಿಯಾನಕ್ಕೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಯೋಧರ ನಾಡಿನ ಬೇಡಿಕೆಗೆ ಕೈ ಜೋಡಿಸಿದ ನಟ ಶಿವಣ್ಣ: ಕೊಡಗಿನ ಜನರ 'ಆಸ್ಪತ್ರೆ' ಅಭಿಯಾನಕ್ಕೆ ವ್ಯಾಪಕ ಬೆಂಬಲ
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...