ರಕ್ಷಿತ್​ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದಿದ್ದೇ ಒಳ್ಳೆಯದಾಯಿತು: ರಶ್ಮಿಕಾ ಮಂದಣ್ಣ

Rashmika and Rakshith Shetty Love Story: ಸದ್ಯ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಸಿಕ್ಕಾಪಟ್ಟೆ ಟಾಕ್​ನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಹಳೇ ಪ್ರೇಮಕತೆ ಹಾಗೂ ಸದ್ಯದ ಡೇಟಿಂಗ್​ ಕುರಿತಂತೆ ತಿಳಿದುಕೊಳ್ಳೋಕೆ ಅವರ ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಿರುವಾಗಲೇ ರಶ್ಮಿಕಾ ಇತ್ತೀಚೆಗೆ ತಮ್ಮ ಪ್ರೇಮ ವೈಫಲ್ಯದ ಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. 

Anitha E | news18-kannada
Updated:October 23, 2019, 12:04 PM IST
ರಕ್ಷಿತ್​ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದಿದ್ದೇ ಒಳ್ಳೆಯದಾಯಿತು: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್​ ಶೆಟ್ಟಿ
  • Share this:
ಬೆಳ್ಳಿ ತೆರೆ ಮೇಲೆ ಮೂಡಿ ಬರುವ ಪ್ರೇಮಕತೆಗಳು ಮಾತ್ರವಲ್ಲ, ಅಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಲವ್ ಸ್ಟೋರಿ ಬಗ್ಗೆ ತಿಳಿದುಕೊಳ್ಳೋಕೆ ಪ್ರೇಕ್ಷಕರು ಸದಾ ಉತ್ಸುಕರಾಗಿರುತ್ತಾರೆ.

ಅದರಲ್ಲೂ ಸದ್ಯ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಸಿಕ್ಕಾಪಟ್ಟೆ ಟಾಕ್​ನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಹಳೇ ಪ್ರೇಮಕತೆ ಹಾಗೂ ಸದ್ಯದ ಡೇಟಿಂಗ್​ ಕುರಿತಂತೆ ತಿಳಿದುಕೊಳ್ಳೋಕೆ ಅವರ ಅಭಿಮಾನಿಗಳು ಕಾತರರಾಗಿದ್ದಾರೆ. ಹೀಗಿರುವಾಗಲೇ ರಶ್ಮಿಕಾ ಇತ್ತೀಚೆಗೆ ತಮ್ಮ ಪ್ರೇಮ ವೈಫಲ್ಯದ ಕತೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

rashmika rakshit
ರಶ್ಮಿಕಾ ಮಂದಣ್ಣ-ರಕ್ಷಿತ್​ ಶೆಟ್ಟಿ


ಸದ್ಯ ಮಹೇಶ್​ ಬಾಬು ಜತೆ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಅಲ್ಲಿ ತಮ್ಮ ಹಳೇ ಪ್ರೇಮ ವೈಫಲ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆಗಿನ ಪ್ರೀತಿ, ನಿಶ್ಚಿತಾರ್ಥ ಹಾಗೂ ಅದು ಮುರಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

rakshit-shetty-rashmika-mandanna
ರಕ್ಷಿತ್​ ಎಂಗೇಜ್​ಮೆಂಟ್​ ಫೋಟೋ


''ನನಗೆ ಅಮ್ಮ ಸ್ನೇಹಿತೆಯಂತೆ. ಅವರ ಬಳಿ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ. ಅಪ್ಪ-ಅಮ್ಮನಿಗೆ ನನ್ನ ಮೇಲೆ ನಂಬಿಕೆ ಜಾಸ್ತಿ, ನನ್ನ ನಿರ್ಧಾರಗಳನ್ನು ಗೌರವಿಸುತ್ತಾರೆ. ಅದರಲ್ಲೂ ಅಮ್ಮ ಸದಾ ನನಗೆ ಬಾಯ್​ಫ್ರೆಂಡ್​ ಇಲ್ಲವಾ ಎಂದು ಕೇಳುತ್ತಿದ್ದರು. ನಿನ್ನ ವಯಸ್ಸಿನವರಿಗೆಲ್ಲ ಇದ್ದಾರೆ ನಿನಗೆ ಏಕೆ ಇಲ್ಲ ಎನ್ನುತ್ತಿದ್ದರು. 'ಕಿರಿಕ್​ ಪಾರ್ಟಿ' ಸಿನಿಮಾದಲ್ಲಿ ಕೆಲಸ ಮಾಡುವಾಗ ರಕ್ಷಿತ್​ ಶೆಟ್ಟಿ ಅವರ ಬಗ್ಗೆ ಅಭಿಮಾನ ಇತ್ತು. ಅದು ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ಬದಲಾಗಲು ತುಂಬಾ ಸಮಯ ಬೇಕಾಗಲಿಲ್ಲ. ಈ ಬಗ್ಗೆ ಅಮ್ಮನ ಬಳಿ ಹೇಳಿಕೊಂಡಿದ್ದೆ. ಅದಕ್ಕೆ ಅಮ್ಮ ನಿನ್ನ ಇಷ್ಟ ಎಂದಿದ್ದರು. ಆಗ ನನ್ನ ನಿರ್ಧಾರವನ್ನು ಗೌರವಿಸಿದ್ದರು'' ಎಂದಿದ್ದಾರೆ ರಶ್ಮಿಕಾ.

ರಕ್ಷಿತ್​ ಜತೆ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಮಾತನಾಡುತ್ತಾ... 'ಎಲ್ಲ ಚೆನ್ನಾಗಿದ್ದರೆ ಆ ಸಂಬಂಧವನ್ನು ಮುಂದುವರೆಸಬಹುದು. ಆದರೆ ಸಂಬಂಧದಲ್ಲಿ ಜಗಳ, ವ್ಯತ್ಯಾಸಗಳು ಬಂದಾಗ ಅದನ್ನು ಅಲ್ಲಿಗೆ ಬಿಡುವುದು ಒಳ್ಳೆಯದು. ಇಲ್ಲವಾದರೆ ಭವಿಷ್ಯದಲ್ಲಿ ತುಂಬಾ ಕಳೆದು ಕೊಳ್ಳಬೇಕಾಗುತ್ತದೆ. ಅದಕ್ಕೆ ಆ ಸಂಬಂಧವನ್ನು ಬಿಡುವುದೇ ಉತ್ತಮ ನಿರ್ಧಾರ' ಎಂದಿದ್ದಾರೆ ಕಿರಿಕ್​ ಹುಡುಗಿ.ಇದನ್ನೂ ಓದಿ: ಅಕ್ಷಯ್​ ಕುಮಾರ್​ ಹಿಂದೆ ಬಿದ್ದ ಸ್ಟಾರ್​ ನಟ: ಕಿಲಾಡಿ ಕೈ ತಪ್ಪಿದ ಎರಡು ಸಿನಿಮಾ.!

ಇಷ್ಟೆಲ್ಲ ಆದ ಕಾರಣಕ್ಕೆ ರಶ್ಮಿಕಾಗೆ ಪ್ರೀತಿ-ಪ್ರೇಮದ ಬಗ್ಗೆ ಇರುವ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲವಂತೆ. ಯಾವುದೇ ವಿಷಯವಾದರೂ ನೋಡುವ ದೃಷ್ಟಿಯನ್ನು ಆಧರಿಸಿರುತ್ತದೆ ಅನ್ನೋದು ರಶ್ಮಿಕಾರ ಅಭಿಪ್ರಾಯ.

Shraddha Srinath: ಹೇಗಿದ್ದ ಶ್ರದ್ಧಾ ಶ್ರೀನಾಥ್​ ಹೀಗಾಗಿದ್ದು ಹೇಗೆ ಗೊತ್ತಾ..? 

 
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading