Rashmika Mandanna: ರಶ್ಮಿಕಾ ಮಂದಣ್ಣ ಹಂಚಿಕೊಂಡ ಕ್ರೇಜಿ ಡ್ಯಾನ್ಸ್​ ವಿಡಿಯೋ ವೈರಲ್​..!

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

Rashmika Mandanna Dancing Video: ಟಾಲಿವುಡ್​ನಲ್ಲಿ ಸಿನಿಮಾ ಅವಕಾಶಗಳು ಹೆಚ್ಚಾಗಿ ಅರಸಿ ಬರುತ್ತಿರುವ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದರಿಂದಾಗಿ ಅಲ್ಲಿ ಅವರದ್ದೇ ಆದ ಸ್ನೇಹಿತರ ಗುಂಪೂ ಇದೆ. ರಶ್ಮಿಕಾ ಮನೆಗೆ ಬಂದಾಗಲೆಲ್ಲ ಅವರು ಲಿಲ್ಲಿಯನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ.

ಮುಂದೆ ಓದಿ ...
  • Share this:

ರಶ್ಮಿಕಾ ಮಂದಣ್ಣ ಅವರಿಗೆ ಸ್ಯಾಂಡಲ್​ವುಡ್​ಗಿಂತ ಹೆಚ್ಚಾಗಿ ಟಾಲಿವುಡ್​ನಲ್ಲೇ ಸ್ನೇಹಿತರು ಹೆಚ್ಚು ಅಂದರೆ ತಪ್ಪಾಗದು. ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ ಎಲ್ಲವೂ ಸ್ಟಾರ್ ನಟರೊಂದಿಗೆ. ಆದರೆ ಟಾಲಿವುಡ್​ನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ.


ಟಾಲಿವುಡ್​ನಲ್ಲಿ ಸಿನಿಮಾ ಅವಕಾಶಗಳು ಹೆಚ್ಚಾಗಿ ಅರಸಿ ಬರುತ್ತಿರುವ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದರಿಂದಾಗಿ ಅಲ್ಲಿ ಅವರದ್ದೇ ಆದ ಸ್ನೇಹಿತರ ಗುಂಪೂ ಇದೆ. ರಶ್ಮಿಕಾ ಮನೆಗೆ ಬಂದಾಗಲೆಲ್ಲ ಅವರು ಲಿಲ್ಲಿಯನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ.


rA big hug to all lovely people out there♥️,,





ಈಗ ರಶ್ಮಿಕಾರ ಟಾಲಿವುಡ್​ ಫ್ರೆಂಡ್ಸ್​ ಬಗ್ಗೆ ವಿಷಯ ಏಕೆ ಅಂತೀರಾ..? ಅದಕ್ಕೂ ಕಾರಣ ಇದೆ. ಲಿಲ್ಲಿ ತಮ್ಮ ಸ್ನೇಹಿತೆ ಜೊತೆ ಸಖತ್​ ಸ್ಟೆಪ್​ ಹಾಕಿರುವ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್​ ಆಗುತ್ತಿದೆ.





ಟಾಲಿವುಡ್​ನಲ್ಲಿ ವಸ್ತ್ರ ವಿನ್ಯಾಸಕಿ ಆಗಿರುವ ಶ್ರಾವ್ಯಾ ವರ್ಮಾ ರಶ್ಮಿಕಾರ ಆತ್ಮೀಯ ಸ್ನೇಹಿತೆ. ಅವರ ಹುಟ್ಟುಹಬ್ಬದಂದು ಈ ವಿಡಿಯೋ ಹಂಚಿಕೊಂಡು  ಶ್ರಾವ್ಯಾ ಅವರಿಗೆ ಹುಟ್ಟುಹಬ್ಬದ ವಿಶ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶ್ರಾವ್ಯಾ ಹಾಗೂ ರಶ್ಮಿಕಾ ಡ್ಯಾನ್ಸ್​ ಮಾಡಿದ್ದಾರೆ. ರಶ್ಮಿಕಾ ಮಾಡಿರುವ ಟ್ವೀಟ್​ ನೋಡಿದ ಶ್ರಾವ್ಯಾ, ಸಖತ್ ಮಜವಾಗಿ ಕಮೆಂಟ್​ ಮಾಡಿದ್ದಾರೆ. ನನ್ನನ್ನು ಕರಗಿಸುವ ಏಕೈಕ ವ್ಯಕ್ತಿ ನೀನೇ ರಶ್ಮಿಕಾ ಎಂದು ಬರೆದಿದ್ದಾರೆ.



ಇದನ್ನೂ ಓದಿ: ಕೈದಿ ಪಾತ್ರದಲ್ಲಿ ರಕ್ಷಿತ್​ ಶೆಟ್ಟಿ: ರಿವೀಲ್​ ಆಯ್ತು ಹೊಸ ಸಿನಿಮಾದ ಲುಕ್​..!


ಇನ್ನು ಕಳೆದ ವರ್ಷವೂ ಶ್ರಾವ್ಯಾ ಅವರ ಹುಟ್ಟುಹಬ್ಬವನ್ನು ಗೋವಾದಲ್ಲಿ ಆಚರಿಸಲಾಗಿತ್ತು. ಆಗಲೂ ರಶ್ಮಿಕಾ ಹಾಗೂ ಅವರ ಟಾಲಿವುಡ್​ ಸ್ನೇಹಿತರು ಗೋವಾದಲ್ಲಿ ಸಖತ್ ಎಂಜಾಯ್​ ಮಾಡಿದ್ದರು.









View this post on Instagram





One more from my birthday night 🤓🤟🏽


A post shared by Shravya Varma (@shravyavarma) on





ಟಾಲಿವುಡ್​ ಫ್ರೆಂಡ್ಸ್​ ಎಂದಾಗ ವಿಜಯ್​ ದೇವರಕೊಂಡ ಅವರ ಹೆಸರು ಅಲ್ಲಿ ಬಾರದೆ ಇರದು. ಈ ಹಿಂದೆ ವಿಜಯ್​ ದೇವರಕೊಂಡ ರಶ್ಮಿಕಾಗೆ ಟ್ವೀಟ್​ ಮೂಲಕ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದರು. ಆಗ ಶ್ರಾವ್ಯಾ ಹಾಗೂ ವಿಜಯ್​ ದೇವರಕೊಂಡ ರಶ್ಮಿಕಾರನ್ನು ಬಿಟ್ಟು ಪಾರ್ಟಿ ಮಾಡುತ್ತಿರುವುದಾಗಿಯೂ ಬರೆದುಕೊಂಡಿದ್ದರು.


HDB Rakshit Shetty: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ..!


Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು