• Home
 • »
 • News
 • »
 • entertainment
 • »
 • Rashmika Mandanna: ಮನಸು ನೋಯಿಸಿದವರಿಗೆ ರಶ್ಮಿಕಾ ಬಹಿರಂಗ ಪತ್ರ! ಕೊಡಗಿನ ಕುವರಿ ಏನ್ ಹೇಳಿದ್ದಾರೆ?

Rashmika Mandanna: ಮನಸು ನೋಯಿಸಿದವರಿಗೆ ರಶ್ಮಿಕಾ ಬಹಿರಂಗ ಪತ್ರ! ಕೊಡಗಿನ ಕುವರಿ ಏನ್ ಹೇಳಿದ್ದಾರೆ?

ಮನಸ್ಸಿಗೆ ನೋವು ಮಾಡಿದವರ ವಿರುದ್ಧ ರಶ್ಮಿಕಾ ಮಂದಣ್ಣ ಬೇಸರ

ಮನಸ್ಸಿಗೆ ನೋವು ಮಾಡಿದವರ ವಿರುದ್ಧ ರಶ್ಮಿಕಾ ಮಂದಣ್ಣ ಬೇಸರ

ರಶ್ಮಿಕಾ ಅವರ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ. ಅದನ್ನು ಬಹಿರಂವಾಗಿ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಬೆಂಬಲಕ್ಕೆ ಹಲವರು ನಿಂತಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಸ್ಯಾಂಡಲ್‍ವುಡ್ (Sandalwood) ಸಾನ್ವಿ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್‍ನಲ್ಲಿ (Bollywood), ಟಾಲಿವುಡ್ ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಆರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಕಿರಿಕ್ ಪಾರ್ಟಿ ಸಾನ್ವಿ ಅವರ ಕಾಲ್ ಶೀಟ್ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲು ನಿಂತಿವೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ (Film) ಮಾಡ್ತಾ ಇದ್ದಾರೆ. ಆದ್ರೆ ರಶ್ಮಿಕಾ ಅವರ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ. ಅದನ್ನು ಬಹಿರಂವಾಗಿ ಇನ್‍ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದಾರೆ. ರಶ್ಮಿಕಾ ಬೆಂಬಲಕ್ಕೆ ಹಲವರು ನಿಂತಿದ್ದಾರೆ.


  ರಶ್ಮಿಕಾ ಮಂದಣ್ಣ ಬಹಿರಂಗ ಪತ್ರ ಇದು


  'ಕಳೆದ ಕೆಲವು ದಿನಗಳು ಅಥವಾ ವಾರಗಳು ಅಥವಾ ತಿಂಗಳುಳಿಂದ ಅಥವಾ ವರ್ಷಗಳಿಂದ ಒಂದೆರಡು ವಿಚಾರಗಳು ನನಗೆ ತೊಂದರೆ ನೀಡುತ್ತಿವೆ. ನಾನು ಈಗ ಅದನ್ನು ಪರಿಹರಿಸಬೇಕಾಗಿದೆ ಎಂದು ಅನಿಸುತ್ತಿದೆ. ನಾನು ನನಗಾಗಿ ಮಾತ್ರ ಮಾತನಾಡುತ್ತಿದ್ದೇನೆ. ನಾನು ಇದನ್ನು ವರ್ಷಗಳ ಹಿಂದೆ ಮಾಡಬೇಕಾಗಿತ್ತು.


  ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದಲೂ ನನ್ನನ್ನು ಬಹಳಷ್ಟು ಮಂದಿ ದ್ವೇಷಿಸಿದ್ದಾರೆ. ಸಾಕಷ್ಟು ಟ್ರೋಲ್‍ಗಳು ಆಗಿವೆ. ನೆಗೆಟಿವ್ ಕಾಮೆಂಟ್ ಹೆಚ್ಚು ಬಂದಿವೆ. ನಾನು ಆಯ್ಕೆ ಮಾಡಿದ ಜೀವನಕ್ಕೆ ಈ ಬೆಲೆ ಕೊಡಬೇಕಾಗುತ್ತದೆ ಎಂದು ತಿಳಿದಿದ್ದೇನೆ. ನಾನು ಪ್ರತಿಯೊಬ್ಬರಿಗೆ ಸಿಗುವವಳಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರೀತಿಸಲ್ಪಡಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ನನ್ನ ಬಗ್ಗೆ ನಿಮಗೆ ಒಪ್ಪಿಗೆ ಇಲ್ಲ ಎಂದಾಕ್ಷಣ, ನನ್ನ ಬಗ್ಗೆ ನೆಗೆಟಿವಿಟಿ ಹಬ್ಬಿಸಬಹುದು ಎಂದು ಅರ್ಥವಲ್ಲ.


  ಇದನ್ನೂ ಓದಿ: Shankar Nag Birthday: ಶಂಕರ್​​ ನಾಗ್ ಅವರಿಗೆ ಇನ್ನೂ ಎರಡು ಹೆಸರುಗಳಿವೆ! ಯಾವುದು ಗೊತ್ತೇ? 


  ನಿಮ್ಮೆಲ್ಲರನ್ನೂ ರಂಜಿಸಲು ನಾನು ಯಾವ ರೀತಿಯ ಕೆಲಸ ಮಾಡುತ್ತೇನೆ ಎಂದು ನನಗೆ ಮಾತ್ರ ತಿಳಿದಿದೆ. ನಾನು ಮಾಡಿದ ಕೆಲಸದಿಂದ ನೀವು ಅನುಭವಿಸುವ ಖುಷಿ ಬಗ್ಗೆ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ನೀವು ಮತ್ತು ನಾನು ಇಬ್ಬರೂ ಹೆಮ್ಮೆ ಪಡುವ ಕಂಟೆಂಟ್ ನೀಡಲು ನಾನು ನಿಜವಾಗಿಯೂ ಪ್ರಯತ್ನಿಸುತ್ತಿದ್ದೇನೆ.


  actress rashmika mandanna, rashmika mandanna share her own words about negativity comment, rashmika mandanna photo shoot, ನಟಿ ರಶ್ಮಿಕಾ ಮಂದಣ್ಣ, ರಶ್ಮಿಕಾ ಮಂದಣ್ಣ ಫೋಟೋ ಶೂಟ್, ಮನಸ್ಸಿಗೆ ನೋವು ಮಾಡಿದವರ ವಿರುದ್ಧ ಬೇಸರ, ಬಹಿರಂಗ ಪತ್ರದಲ್ಲಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?, kannada news, karnataka news,
  ರಶ್ಮಿಕಾ ಮಂದಣ್ಣ


  ನಾನು ಹೇಳದ ವಿಚಾರಗಳಿಗಾಗಿ ನೆಟ್ಟಿಗರು ನನ್ನನ್ನು ಅಪಹಾಸ್ಯಗೊಳಿಸಿದಾಗ ಅದು ನನ್ನ ಹೃದಯವನ್ನು ಚೂರು ಮಾಡುತ್ತದೆ. ಪ್ರಾಮಾಣಿಕವಾಗಿ ಸಾಕಷ್ಟು ಖಿನ್ನತೆಯನ್ನುಂಟುಮಾಡುತ್ತದೆ.


  ಸಂದರ್ಶನಗಳಲ್ಲಿ ನಾನು ಹೇಳಿದ ಕೆಲವು ವಿಷಯಗಳು ನನ್ನ ವಿರುದ್ಧ ತಿರುಗುತ್ತಿವೆ ಎಂದು ನಾನು ನೋಡಿದ್ದೇನೆ. ಅಂತರ್ಜಾಲದಲ್ಲಿ ಸುಳ್ಳು ವಿಚಾರ ಹರಡುತ್ತಿದ್ದು, ಅದು ನನಗೆ ಉದ್ಯಮದಲ್ಲಿ ಅಥವಾ ಹೊರಗೆ ನಾನು ಹೊಂದಿರುವ ಸಂಬಂಧಗಳಿಗೆ ತುಂಬಾ ತೊಂದರೆ ಉಂಟು ಮಾಡುವಂಥದ್ದಾಗಿದೆ. ಬಹಳ ಸಮಯದಿಂದ ನನಗೆ ನೆಗೆಟಿವ್ ಕಾಮೆಂಟ್‍ಗಳನ್ನು ನಿರ್ಲಕ್ಷಿಸುವಂತೆ ಹೇಳಲಾಗಿತ್ತು. ಆದರೆ ಅದರಿಂದ ಮನಸ್ಸಿಗೆ ತುಂಬಾ ನೋವಾಗಿದೆ.  ನಾನು ಉಳಿದವರಿಂದ ಸ್ವೀಕರಿಸುತ್ತಿರುವ ಎಲ್ಲಾ ಪ್ರೀತಿಯನ್ನು ಗುರುತಿಸುತ್ತೇನೆ. ಅಂಗೀಕರಿಸುತ್ತೇನೆ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವೇ ನನ್ನನ್ನು ಮುಂದುವರೆಸಿದೆ. ಮತ್ತು ಇದನ್ನು ಹೇಳಲು ನನಗೆ ಧೈರ್ಯವನ್ನು ನೀಡಿದೆ.


  ಇದನ್ನೂ ಓದಿ: Bigg Boss Kannada: ಈ ಬಾರಿ ಎಲಿಮಿನೇಷನ್ ಇಲ್ಲ; ಹೊಸ ಸದಸ್ಯರ ವೈಲ್ಡ್ ಕಾರ್ಡ್ ಎಂಟ್ರಿ ಪಕ್ಕಾನಾ?


  ನನ್ನ ಸುತ್ತಲಿರುವ ಎಲ್ಲರಿಗೂ ಪ್ರೀತಿ ಮಾತ್ರ ನೀಡಲು ಬಯಸುತ್ತೇನೆ. ನಾನು ಇಲ್ಲಿಯವರೆಗೆ ಕೆಲಸ ಮಾಡಿದ ವ್ಯಕ್ತಿಗಳನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನಿಮಗಾಗಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುತ್ತೇನೆ. ಏಕೆಂದರೆ ನಾನು ಹೇಳಿದಂತೆ, ನಿಮ್ಮನ್ನು ರಂಜಿಸುವುದು ನನಗೆ ಸಂತೋಷವನ್ನು ನೀಡುತ್ತದೆ ಎಂದು ನಟಿ ಬರೆದಿದ್ದಾರೆ. ಕೊನೆಯಲ್ಲಿ ಧನ್ಯವಾದಗಳು, ರಶ್ಮಿಕಾ ಎಂದು ಬರೆದಿದ್ದಾರೆ.

  Published by:Savitha Savitha
  First published: