ಸೋಶಿಯಲ್​ ಮೀಡಿಯಾದಲ್ಲಿ ನಾನು ರಿಯಲ್​ ಆಗಿಯೇ ಇದ್ದೇನೆ ಎಂದ Rashmika Mandanna

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಮಾಧ್ಯಮದ ಜನಪ್ರಿಯತೆ ಮತ್ತು ಎಲ್ಲವನ್ನೂ ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

  • Share this:
ಕನ್ನಡ ಚಿತ್ರರಂಗದ ನಟಿ (Sandalwood Actress) ರಶ್ಮಿಕಾ ಮಂದಣ್ಣ (Rashmika Mandanna) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಬರೀ ಕನ್ನಡ ಚಿತ್ರರಂಗವಲ್ಲದೆ ತೆಲುಗು ಚಿತ್ರರಂಗದಲ್ಲಿಯೂ ಸಹ ಹಿಟ್ ಚಿತ್ರಗಳನ್ನು ನೀಡುವುದರ ಮೂಲಕ ಅಭಿಮಾನಿಗಳ ಮನ ಗೆದ್ದ ನಟಿ ಎಂದರೆ ಅತಿಶಯೋಕ್ತಿಯಲ್ಲ.ಒಟ್ಟಾರೆ ಹೇಳಬೇಕೆಂದರೆ ದಕ್ಷಿಣ ಭಾರತ ಚಿತ್ರೋದ್ಯಮದ ಅತ್ಯಂತ ಸುಂದರ ಮತ್ತು ಜನಪ್ರಿಯ ನಟಿಯರಲ್ಲಿ ಇವರು ಒಬ್ಬರು. ಕೆಲವೇ ಕೆಲವು ಚಿತ್ರಗಳೊಂದಿಗೆ, ನಟಿ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನಗಳಿಸಿದ್ದಾರೆ ಮತ್ತು ವಿಶ್ವಾದ್ಯಂತ ಅಭಿಮಾನಿ ಬಳಗವನ್ನೂ ಹೊಂದಿರುವುದು ವಿಶೇಷ. ಇವರು ಈಗ ಬಾಲಿವುಡ್‌ನಲ್ಲಿಯೂ  (Bollywood) ತಮ್ಮ ಖಾತೆ ತೆರೆದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ.  ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಲಿಲ್ಲಿ, ಅಭಿಮಾನಿಗಳೊಂದಿಗೆ ಈ ಮೂಲಕ ಸದಾ ಸಂಪರ್ಕದಲ್ಲಿದ್ದಾರೆ. ಅಷ್ಟೇ ಅಲ್ಲ, ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂ ಖಾತೆ ನೋಡಿದರೆ, ಅವರ ಸುಂದರವಾದ ನಗು ಮತ್ತು ಸಕಾರಾತ್ಮಕ ಪೋಸ್ಟ್‌ಗಳು ಮನಸ್ಸಿಗೆ ಮುದ ನೀಡುತ್ತವೆ.

ಮುದ್ದಿನ ಸಾಕು ನಾಯಿ ಔರಾ ಜತೆ ರಶ್ಮಿಕಾ ಮಂದಣ್ಣ


ಇಂತಹ ಸಕರಾತ್ಮಕ ಪೋಸ್ಟ್‌ಗಳು ಸಹ ಅಭಿಮಾನಿಗಳು ಇವರನ್ನು ಪ್ರೀತಿಸಲು ಕಾರಣವಾಗಿವೆ. ವೆಬ್​ ಸೈಟ್​ ಒಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಮಾಧ್ಯಮದ ಜನಪ್ರಿಯತೆ ಮತ್ತು ಎಲ್ಲವನ್ನೂ ಹೇಗೆ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.

"ಜನಪ್ರಿಯತೆ ನಾವು ಮಾಡುವಂತಹ ಕೆಲಸದಿಂದ ಬರುತ್ತದೆ ಮತ್ತು ನಾನು ಬರೀ ಒಳ್ಳೆಯ ಚಿತ್ರಗಳನ್ನು ಮಾಡುವತ್ತ ಗಮನ ಹರಿಸುತ್ತೇನೆ. ಅದು ಯಾವುದೇ ಭಾಷೆಯ ಚಿತ್ರವಾಗಲಿ... ಬಂಗಾಳಿ, ಮರಾಠಿ ಅಥವಾ ಇತರ ಯಾವುದೇ ಭಾಷೆಯಾಗಿರಲಿ, ವಿಭಿನ್ನ ಚಲನಚಿತ್ರಗಳನ್ನು ಮಾಡಲು ನಾನು ಇಷ್ಟಪಡುತ್ತೇನೆ. ಸಾಮಾಜಿಕ ಮಾಧ್ಯಮದಲ್ಲಿ, ನಾನು ಮೇಕಪ್ ಇಲ್ಲದೆ ತೆಗೆಸಿಕೊಂಡ, ತಮಾಷೆಯಾಗಿ ನಕ್ಕಿದ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ. ಹಾಗೆಯೇ ನನಗೆ ತೋಚಿದ್ದನ್ನ ಅಲ್ಲಿ ಹಂಚಿಕೊಳ್ಳುತ್ತೇನೆ. ಜನರು ಅದನ್ನೇ ಇಷ್ಟಪಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: 51 ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿರಯೌವ್ವನೆ Ramya Krishnan..!

“ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನಿಜವಾಗಿರುವುದನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ. ಬಣ್ಣ ಹಚ್ಚಿದ್ದನ್ನ ನೋಡಲು ಹೆಚ್ಚು ಇಷ್ಟ ಪಡುವುದಿಲ್ಲ” ಎಂದೂ ವಿವರಿಸಿದ್ದಾರೆ ರಶ್ಮಿಕಾ ಮಂದಣ್ಣ.

ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್​ಗಳ ವಿಷಯಕ್ಕೆ ಬಂದಾಗ ಅವರು ಹೇಗೆ ತಮ್ಮನ್ನು ತಾವು ಕಾಪಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ರಶ್ಮಿಕಾ "ನಾನು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಆರಂಭದ ದಿನಗಳಲ್ಲಿ, ನಾನು ಸಾಕಷ್ಟು ಟ್ರೋಲ್‌ಗಳನ್ನು ಎದುರಿಸಬೇಕಾಯಿತು. ಆಗ ಮನಸ್ಸಿಗೆ ತುಂಬಾ ಕಷ್ಟ ಹಾಗೂ ನೋವು ಕೊಡುತ್ತಿತ್ತು. ಆದರೆ, ವರ್ಷಗಳು ಕಳೆದಂತೆ ನಾನು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಲು ಕಲಿತಿದ್ದೇನೆ" ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: ಪತಿ Andrei Koscheev ಜತೆ ತಿರುಪತಿ-ಶ್ರೀಕಾಳಹಸ್ತಿಗೆ ಭೇಟಿ ಕೊಟ್ಟ ನಟಿ Shriya Saran​..!

ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲಿ ತಮ್ಮ ಪದಾರ್ಪಣೆ ಮಾಡಿದ್ದು, ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಯಲ್ಲಿ ‘ಮಿಷನ್ ಮಜ್ನು’ (Mission Majnu)  ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಅದೇ ಖುಷಿಯಲ್ಲಿ ಚಿತ್ರತಂಡ ಪಾರ್ಟಿ ಸಹ ಆಯೋಜಿಸಿತ್ತು. ಇಷ್ಟೇ ಅಲ್ಲದೆ ಅಮಿತಾಭ್ ಬಚ್ಚನ್‌ರೊಂದಿಗೆ ‘ಗುಡ್‌ ಬೈ’ (Good Bye) ಎಂಬ ಮತ್ತೊಂದು ಹಿಂದಿ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ತೆಲುಗಿನಲ್ಲಿ ಆಡವಾಳ್ಳು ಮೀಕು ಜೋಹಾರುಲು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
Published by:Anitha E
First published: