ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಬಾಲಿವುಡ್ ನಲ್ಲೂ (Bollywood) ಬಹು ಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಬಿಗ್ ಸ್ಕ್ರೀನ್ಗಳಲ್ಲಿ ಮಿಂಚುತ್ತಿದ್ದಾರೆ. ಚಲೋ ಸಿನಿಮಾ ಮೂಲಕ ಟಾಲಿವುಡ್ (Tollywood) ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗೀತಾ ಗೋವಿಂದಂ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda), ರಶ್ಮಿಕಾ ಜೋಡಿ ಟಾಲಿವುಡ್ ಜನರನ್ನು ಮೋಡಿ ಮಾಡಿತು ಬಳಿಕ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿಯಾಗಿ ಪುಪ್ಪ ಸಿನಿಮಾದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಲೆವೆಲ್ ಬದಲಾಗಿ ಹೋಯ್ತು. ಪುಪ್ಪ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು ಬಾಲಿವುಡ್ಗೆ ಹಾರಿದ ನಟಿ ರಶ್ಮಿಕಾಗೆ ಈಗ ಕನ್ನಡದ ನಟ ಯಶ್ (Yash) ಜೊತೆ ನಟಿಸುವ ಆಸೆಯಾಗಿದೆಯಂತೆ.
ರಾಕಿ ಭಾಯ್ ಜೊತೆ ರಶ್ಮಿಕಾಗೆ ನಟಿಸುವ ಆಸೆ!
ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾಗೆ ಮೊದಲ ಚಿತ್ರದಲ್ಲೇ ಬಿಗ್ ಬಿ ಅಮಿತಾಭ್ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ರು. ಮತ್ತೊಂದು ಸಿನಿಮಾ ಮಿಷನ್ ಮಜ್ನು ಸಹ ರಿಲೀಸ್ಗೆ ರೆಡಿಯಾಗಿದೆ. ಈ ನಡುವೆ ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಇದೀಗ ತಮಿಳಿನ ವಾರಿಸು ಚಿತ್ರದ ಪ್ರಚಾರ ನಡೆಸುತ್ತಾರೆ. ಅನೇಕ ಚಾನೆಲ್ಗಳಿಗೆ ಸಂದರ್ಶನ ನೀಡಿದ್ದಾರೆ. ಗುಲ್ಟೆ ವೆಬ್ ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರಶ್ಮಿಕಾ ಮಂದಣ್ಣ, ರಾಕಿ ಭಾಯ್ ಜೊತೆಯೂ ನಟಿಸಬೇಕು ಎಂದು ಹೇಳಿದ ವಿಡಿಯೋ ಇದೀಗ ವೈರಲ್ ಆಗಿದೆ.
ಸ್ಟಾರ್ ನಟರೊಂದಿಗೆ ನಟಿಸಬೇಕು
ಸಂದರ್ಶನದಲ್ಲಿ ಮಾತಾಡಿದ ರಶ್ಮಿಕಾ ಮಂದಣ್ಣ ನನಗೆ ದಕ್ಷಿಣ ಭಾರತದ ಪ್ರಮುಖ ಸ್ಟಾರ್ ನಟರೊಂದಿಗೆ ಕೆಲಸ ಮಾಡಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ. ಇನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಜೊತೆ ಕೂಡ ನಟಿಸುವ ಆಸೆಯಿದೆ ಎಂದು ರಶ್ಮಿಕಾ ಹೇಳಿದ್ದಾರೆ.
ಯಶ್ ಸರ್ ಜೊತೆ ಕೆಲಸ ಮಾಡ್ಬೇಕು
ನಾನು ದಕ್ಷಿಣ ಕನ್ನಡದ ಸ್ಟಾರ್ ನಟರೊಂದಿಗೆ ಕೆಲಸ ಮಾಡಬೇಕಿದೆ. ರಾಮ್ ಚರಣ್ ಸರ್ ಜೊತೆ , ಪ್ರಭಾಸ್ ಸರ್ , ಬನ್ನಿ (ಅಲ್ಲು ಅರ್ಜುನ್) ಸರ್ ಹಾಗೂ ನಮ್ಮ ಯಶ್ ಸರ್ ಜೊತೆ ಕೂಡ ಕೆಲಸ ಮಾಡಬೇಕು. ಹಾಗೇ ಮಲಯಾಳಂ ನಟ ದುಲ್ಖರ್ ಸಲ್ಮಾನ್ ಜೊತೆಯೂ ಕೆಲಸ ಮಾಡುವ ಆಸೆ ಇದೆ ಎಂದು ರಶ್ಮಿಕಾ ಹೇಳಿದ್ದಾರೆ.
ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ಯಶ್ ವಿಚಾರವಾಗಿ ಆರಂಭದಲ್ಲೇ ವಿವಾದಕ್ಕೆ ಸಿಲುಕಿದ್ರು. ಸಂದರ್ಶನವೊಂದರಲ್ಲಿ ಕನ್ನಡದಲ್ಲಿ ಶೋ ಆಫ್ ನಟ ಯಾರು? ಅಂತ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ ಮಂದಣ್ಣ, ಯಶ್ ಎಂದು ಹೇಳಿದ್ರು.
ಇದನ್ನೂ ಓದಿ: Rashmika-Vijay Deverakonda: ಲೈವ್ ಮಾಡಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ! ವಿಜಯ್ ದೇವರಕೊಂಡ ಜೊತೆ ಫುಲ್ ಡೇಟಿಂಗ್!?
ರಶ್ಮಿಕಾ ಹೇಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ರು. ಈ ಸಂಬಂಧ ರಶ್ಮಿಕಾ ಮಂದಣ್ಣ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ರಶ್ಮಿಕಾ ಮಂದಣ್ಣ ಹೇಳಿಕೆ ಸಖತ್ ಟ್ರೋಲ್ ಆಗಿತ್ತು. ಯಶ್ ಅಭಿಮಾನಿಗಳನ್ನು ಸಮಾಧಾನ ಮಾಡಲು ಸ್ವತಃ ಯಶ್ ಅವರೇ ಮಧ್ಯಪ್ರವೇಶಿಸಿದ್ರು. ರಶ್ಮಿಕಾ ಬಗ್ಗೆ ನಂಗೆ ಗೊತ್ತಿಲ್ಲ. ಅವರನ್ನು ನಾನು ಎಂದು ಭೇಟಿಯಾಗಿ ಅವರ ಅಭಿಪ್ರಾಯ ಅವರಿಗೆ ಅವರನ್ನು ಯಾರು ಹೀಯಾಳಿಸಬಾರದು ಎಂದು ಯಶ್ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ