Rashmika Mandanna: ಮತ್ತೊಂದು ಬೋಲ್ಡ್ ​ಫೋಟೋಶೂಟ್​ನಲ್ಲಿ ಕಿರಿಕ್​ ಹುಡುಗಿ: ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೂ ಅದು ವೈರಲ್​ ಆಗುತ್ತದೆ. ಕೆಲವರು ಅವರ ಚಿತ್ರಗಳನ್ನು ಟ್ರಾಲ್​ ಮಾಡಿದರೂ ಈ ನಟಿ ಮಾತ್ರ ತಲೆರ ಕಡೆಸಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೆ ಅವರು ತಮ್ಮ ತಂಗಿಯೊಂದಿಗೆ ಬೀಚ್​​ನಲ್ಲಿ ಆಡುತ್ತಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿತ್ತು. ಈಗ ಮೂರು ದಿನಗಳ ಹಿಂದೆ ರಶ್ಮಿಕಾ ಹಂಚಿಕೊಂಡಿರುವ ಅವರ ಹೊಸ ಫೋಟೋಶೂಟ್​ನ ಚಿತ್ರಗಳು ವೈರಲ್​ ಆಗುತ್ತಿವೆ.

Anitha E | news18-kannada
Updated:September 6, 2019, 9:34 AM IST
Rashmika Mandanna: ಮತ್ತೊಂದು ಬೋಲ್ಡ್ ​ಫೋಟೋಶೂಟ್​ನಲ್ಲಿ ಕಿರಿಕ್​ ಹುಡುಗಿ: ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ಮಂದಣ್ಣ ಸಿನಿಮಾಗಳ ಜತೆ ಜತೆಗೆ ಸಿಕ್ಕಾ ಪಟ್ಟೆ ಫೋಟೋಶೂಟ್​ಗಳಿಗೂ ಪೋಸ್​ ನೀಡುತ್ತಿರುತ್ತಾರೆ. ಅಭಿನಯದ ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸರೆಯಾಗಿ ಫ್ರೇಮಿನೊಳಿಗಿನ ಚಿತ್ರವಾಗುವುದು ಎಂದರೆ ಅವರಿಗೆ ತುಂಬಾ ಇಷ್ಟವಂತೆ. ಅವರ ಇತ್ತೀಚೆಗಿನ ಹೊಸ ಬೋಲ್ಡ್​ ಪೋಟೋಶೂಟ್​ನ ಚಿತ್ರಗಳು ವೈರಲ್​ ಆಗುತ್ತಿವೆ.

ಹೌದು, 'ಕಿರಿಕ್​ ಪಾರ್ಟಿ' ಸಿನಿಮಾಗೂ ಮುನ್ನವೇ ರಶ್ಮಿಕಾ ರೂಪದರ್ಶಿಯಾಗಿ ಗುರುತಿಸಿಕೊಂಡವರು. ಹೀಗಾಗಿ ರಶ್ಮಿಕಾ ಸಿನಿಮಾಗಳ ಜತೆಗೆ ಫೋಟೋಶೂಟ್​ಗಳಿಗೂ ಅವರು ಪ್ರಾಮುಖ್ಯತೆ ಕೊಡುತ್ತಾರೆ. ರಶ್ಮಿಕಾ ಯಾವುದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೂ ಅದು ವೈರಲ್​ ಆಗುತ್ತದೆ. ಈ ಹಿಂದೆ ಅವರ ಬೋಲ್ಡ್​ ಚಿತ್ರಗಳು ಟ್ರಾಲ್​ ಆಗಿದ್ದೂ ಇದೆ.

 
 View this post on Instagram
 

💛


A post shared by Rashmika Mandanna (@rashmika_mandanna) on
 
View this post on Instagram
 

🐽


A post shared by Rashmika Mandanna (@rashmika_mandanna) on


ಕೆಲವರು ಅವರ ಚಿತ್ರಗಳನ್ನು ಟ್ರಾಲ್​ ಮಾಡಿದರೂ ಈ ನಟಿ ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗಷ್ಟೆ ಅವರು ತಮ್ಮ ತಂಗಿಯೊಂದಿಗೆ ಬೀಚ್​​ನಲ್ಲಿ ಆಡುತ್ತಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿತ್ತು.

ಇದನ್ನೂ ಓದಿ: Rashmika mandanna: ವೈರಲ್​ ಆಗುತ್ತಿದೆ ರಶ್ಮಿಕಾರ ಬೀಚ್​ ಸೈಡ್​ ಫೋಟೋ..!

ಮೂರು ದಿನಗಳ ಹಿಂದೆ ರಶ್ಮಿಕಾ ಹಂಚಿಕೊಂಡಿರುವ ಅವರ ಹೊಸ ಫೋಟೋಶೂಟ್​ನ ಚಿತ್ರಗಳು ಈಗ ವೈರಲ್​ ಆಗುತ್ತಿವೆ. ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದು, ಇದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಹಾಗೂ ಹಾಟ್​ ಆಗಿ ಕಾಣಿಸುತ್ತಿದ್ದಾರೆ.

  
View this post on Instagram
 

Decide every morning that you are in a good mood. You’ll be surprised on how your day turns out to be. 😉🐒


A post shared by Rashmika Mandanna (@rashmika_mandanna) on

ಈ ಚಿತ್ರಕ್ಕೆ ರಶ್ಮಿಕಾ ಕೊಟ್ಟಿರುವ ಶೀರ್ಷಿಕೆ ಕೊಂಚ ಆಸಕ್ತಿಕರವಾಗಿದೆ. 'ನೀವು ನಿಮ್ಮ ಜೀವನದ ಸಾರಥಿಯಾಗಿರಬೇಕು. ಪ್ರಯಾಣಿಕರಾಗಬಾರದು. ನಿಮ್ಮ ಜೀವನದಲ್ಲಿ ಏನು ಮಾಡಬೇಕು, ಎಲ್ಲಿರಬೇಕು ಎಂದು ನೀವೇ ನಿರ್ಧರಿಸಿ' ಎಂದು ಬರೆದುಕೊಂಡಿದ್ದಾರೆ ಲಿಲ್ಲಿ.

ಇದನ್ನೂ ಓದಿ: ಬಾಲಿವುಡ್​ ಅಂಗಳಕ್ಕೆ ಕಾಲಿಡಲಿದ್ದಾರೆ ಲಿಲ್ಲಿ ರಶ್ಮಿಕಾ ಮಂದಣ್ಣ..!

ಸದ್ಯ ರಶ್ಮಿಕಾ ತಮ್ಮ ವೃತ್ತಿ ಜೀವನದತ್ತ ಗಮನ ಹರಿಸುತ್ತಿದ್ದು, ಅವರು ಐದು ಸಿನಿಮಾಗಳಲ್ಲಿ ಬ್ಯಾಕ್​ ಟು ಬ್ಯಾಕ್ ಅಭಿನಯಿಸುತ್ತಿದ್ದಾರೆ. ಜತೆಗೆ ಬಾಲಿವುಡ್​ಗೂ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ದಟ್ಟವಾಗಿದೆ.

Rashmi Gautham: ಕಣ್ಣೋಟದಿಂದಲೇ ಪಡ್ಡೆಗಳ ನಿದ್ದೆ ಕದ್ದಿರುವ ರಶ್ಮಿ ಗೌತಮ್​..!

First published: September 5, 2019, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading