• Home
 • »
 • News
 • »
 • entertainment
 • »
 • Rashmika-Vijay Deverakonda: ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ? ಫೋಟೋ ಅಸಲಿಯತ್ತು ಏನು?

Rashmika-Vijay Deverakonda: ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ? ಫೋಟೋ ಅಸಲಿಯತ್ತು ಏನು?

ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ?

ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡ್ತಿದೆ. ಫೋಟೋವೊಂದು ವೈರಲ್ ಆಗಿದ್ದು, ಅದು ನಿಜನಾ? ಸುಳ್ಳಾ ಎಂಬ ಚರ್ಚೆ ಎದ್ದಿದೆ.

 • News18 Kannada
 • Last Updated :
 • Hyderabad, India
 • Share this:

  ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ (Marriage) ಆಗ್ತಾರೆ ಎನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಾನೆ ಇತ್ತು. ರಹಸ್ಯವಾಗಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಹ ಇದೆ. ಈ ಬಗ್ಗೆ ಇಬ್ಬರೂ ಎಲ್ಲೂ ಮಾತನಾಡಿಲ್ಲ. ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ತಾ ಇದ್ರು. ಅಲ್ಲದೇ ಮೊನ್ನೆ ಮೊನ್ನೆ ಇನ್‍ಸ್ಟಾಗ್ರಾಂಗೆ ಇಬ್ಬರು ಒಟ್ಟಿಗೆ ವಾಪಸ್ ಬಂದಿದ್ದರು. ಇದು ಹಲವು ಅನುಮಾನಗಳಿಗೆ ಡೆ ಮಾಡಿಕೊಟ್ಟಿತ್ತು. ಈಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡ್ತಿದೆ. ಫೋಟೋವೊಂದು (Photo) ವೈರಲ್  (Viral) ಆಗಿದ್ದು, ಅದು ನಿಜನಾ? ಸುಳ್ಳಾ ಎಂಬ ಚರ್ಚೆ ಎದ್ದಿದೆ. ಆದ್ರೆ ಫೋಟೋ ಮಾತ್ರ ತಲ್ಲಣ ಸೃಷ್ಟಿಸಿರೋದು ನಿಜ.


  ಸುಳ್ಳು ಫೋಟೋ ವೈರಲ್
  ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹಾರ ಬದಲಿಸಿಕೊಂಡು ನಿಂತ ರೀತಿ ಎಲ್ಲೆಡೆ ಫೋಟೋ ವೈರಲ್ ಆಗ್ತಾ ಇದೆ. ಆದ್ರೆ ಇದು ನಿಜವಾದ ಫೋಟೋ ಅಲ್ಲ. ಅಭಿಮಾನಿಗಳು ಎಡಿಟ್ ಮಾಡಿರುವುದು ಎಂದು ಹೇಳಲಾಗ್ತಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಹಸ್ಯವಾಗಿ ಮದುವೆಯಾಗಿಲ್ಲ.


  ಇಬ್ಬರು ಒಟ್ಟಿಗೆ ನಟನೆ
  ವಿಜಯ್ ಮತ್ತು ರಶ್ಮಿಕಾ 2018 ರ ಚಲನಚಿತ್ರ ಗೀತ ಗೋವಿಂದಂ ಮತ್ತು 2019 ರ ಚಲನಚಿತ್ರ ಡಿಯರ್ ಕಾಮ್ರೇಡ್‍ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ವಿಜಯ್ ಮತ್ತು ರಶ್ಮಿಕಾ ಅವರ ಸಂಬಂಧದ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇಬ್ಬರು ಪ್ರೀತಿ ಮಾಡ್ತಾ ಇದ್ದಾರಾ ಎಂದು ಹಲವರು ಕೇಳಿದ್ದಾರೆ. ಇವರಿಬ್ಬರ ಬಗ್ಗೆ ವದಂತಿ ಹಬ್ಬುತ್ತಿರುವುದು ಇದೇ ಮೊದಲಲ್ಲ ಬಿಡಿ.


  ಇದನ್ನೂ ಓದಿ: Ramachari: ಚಾರು ಕೊಲ್ಲಲು ಹೋದ ರಾಮಾಚಾರಿ ಅಣ್ಣ ಕೋದಂಡ! ತನ್ನ ಹೆಂಡ್ತಿ ಸಾವಿಗೆ ಕಾರಣ ಎಂದು ಕೋಪ 


  ಅವಳೆಂದ್ರೆ ನನಗೆ ಇಷ್ಟ
  ಕಾಫಿ ವಿತ್ ಕರಣ್ 7 ನಲ್ಲಿನ ವಿಜಯ್ ದೇವರ ಕೊಂಡ ಈ ರೀತಿ ಹೇಳಿದ್ದರು. 'ನಾವು ಒಟ್ಟಿಗೆ 2 ಚಿತ್ರಗಳನ್ನು ಮಾಡಿದ್ದೇವೆ. ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ. ಅವಳು ನನಗೆ ತುಂಬಾ ಒಳ್ಳೆಯ ಸ್ನೇಹಿತೆ. ಚಲಚಿತ್ರಗಳ ಬಗ್ಗೆ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೇವೆ' ಎಂದು ಹೇಳಿದ್ದರು.  ರಶ್ಮಿಕಾ ಬಾಲಿವುಡ್‍ಗೆ ಎಂಟ್ರಿ
  ನಟಿ ರಶ್ಮಿಕಾ ಮಂದಣ್ಣ ಅವರು ಅಮಿತಾಬ್ ಬಚ್ಚನ್ ಅಭಿನಯದ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ರಶ್ಮಿಕಾ ಶೀಘ್ರದಲ್ಲೇ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ 'ಪುಷ್ಪಾ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.


  actress rashmika mandanna, actor vijay devarkond, actress rashmika mandanna actor vijay devarkond marriage, photo viral in social media, ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ? ಫೋಟೋ ಅಸಲಿಯತ್ತು ಏನು?, ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ ಚಲನಚಿತ್ರಗಳು, kannada news, karnataka news,
  ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ?


  ಅಂತೆಯೇ, ಅನನ್ಯ ಪಾಂಡೆ ಜೊತೆಯಲ್ಲಿ ಲೈಗರ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ವಿಜಯ್ ದೇವರಕೊಂಡ, ಅವರ ಮುಂದಿನ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಚಿತ್ರ 'ಜನ ಗಣ ಮನ'ಗಾಗಿ ಕಾಯುತ್ತಿದ್ದಾರೆ. ವರದಿಯ ಪ್ರಕಾರ, 'ಅರ್ಜುನ್ ರೆಡ್ಡಿ' ನಟ ಶೀಘ್ರದಲ್ಲೇ ನಿರ್ದೇಶಕ ಪೂರಿ ಜಗ್ಗನ್ನಾಧ್ ಅವರೊಂದಿಗೆ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.


  ಇದನ್ನೂ ಓದಿ: Bigg Boss Kannada: ಗೊತ್ತಿದ್ದು ತಪ್ಪು ಮಾಡಿದ್ರಾ ಗುರೂಜಿ, ಸೌಕರ್ಯ ಇಲ್ಲದೇ ಮನೆ ಮಂದಿಗೆ ಬೇಸರ! 


  ಆದ್ರೂ ಈ ಫೋಟೋ ನೋಡಿ ಹಲವು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ನಿಜವಾಗ್ಲೂ ಮದುವೆ ಆದ್ರೆ ಚೆನ್ನಾಗಿರುತ್ತೆ ಎಂದು ಹೇಳಿದ್ದಾರೆ. ಆದ್ರೂ ಈ ರೀತಿಯ ಸುಳ್ಳು ಫೋಟೋ ಯಾಕೆ ವೈರಲ್ ಮಾಡಿದ್ದಾರೆ ಎಂದು ಗೊತ್ತಿಲ್ಲ. ಆದ್ರೂ ಇಬ್ಬರ ಹೆಸರಲ್ಲಿ ಇರೋ ವದಂತಿಗೂ, ಈ ಫೋಟೋಗೂ ಮ್ಯಾಚ್ ಆಗ್ತಿದೆ.

  Published by:Savitha Savitha
  First published: