• Home
  • »
  • News
  • »
  • entertainment
  • »
  • Ramya Viral Dialogue: ಉತ್ತರಕಾಂಡ ಪಿಚ್ಚರ್​ನ್ಯಾಗ್ ರಮ್ಯಾ ಹೆಂಗ್ ಮಾತಾಡ್ತಾರ ಗೊತ್ತನ? ಡೈರೆಕ್ಟರ್ ರೋಹಿತ್ ಪದಕಿ ಹೇಳ್ತಾರ್ ನೋಡ್ರಿ

Ramya Viral Dialogue: ಉತ್ತರಕಾಂಡ ಪಿಚ್ಚರ್​ನ್ಯಾಗ್ ರಮ್ಯಾ ಹೆಂಗ್ ಮಾತಾಡ್ತಾರ ಗೊತ್ತನ? ಡೈರೆಕ್ಟರ್ ರೋಹಿತ್ ಪದಕಿ ಹೇಳ್ತಾರ್ ನೋಡ್ರಿ

ಹಡ್ಸಿ ಮಕ್ಳ ಕಾಲ ಕಾಲಾಗ ಸಿಗ್ತಾರ-ರಮ್ಯಾ ಡೈಲಾಗ್ ವೈರಲ್​

ಹಡ್ಸಿ ಮಕ್ಳ ಕಾಲ ಕಾಲಾಗ ಸಿಗ್ತಾರ-ರಮ್ಯಾ ಡೈಲಾಗ್ ವೈರಲ್​

ಉತ್ತರ ಕರ್ನಾಟಕ ಭಾಷೆಯನ್ನ ಅಷ್ಟೇ ಅದ್ಭುತವಾಗಿಯೇ ರಮ್ಯಾ ಇಲ್ಲಿ ಹೇಳಿದ್ದಾರೆ. ಅದಕ್ಕಾಗಿ ರಮ್ಯಾ ಅಷ್ಟೇ ತಯಾರಿನೂ ಮಾಡಿಕೊಂಡಿದ್ದಾರೆ. ರಮ್ಯಾ ಹೇಳಿರೋ ರೀತಿಯಲ್ಲಿಯೇ ಆ ತಯಾರಿ ತಿಳಿದು ಬಿಡುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಉತ್ತರ ಕರ್ನಾಟಕದ (Uttara Karntaka) ಭಾಷೆ ಬೇರೆ ಇದೆ. ಇದನ್ನ ಸ್ಯಾಂಡಲ್​​ವುಡ್ ಕ್ವೀನ್ (Sandalwood Queen Ramya) ರಮ್ಯಾ ಹೇಳಿದ್ರೆ ಹೆಂಗೆ​ ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹಾಗೆ ರಮ್ಯಾ ಅಭಿನಯದ ಸಿನಿಮಾದ ಹೆಸರು (Uttarakhand) ಉತ್ತರಕಾಂಡ. ಈ ಸಿನಿಮಾದಲ್ಲಿ ರಮ್ಯಾ ಉತ್ತರ ಕರ್ನಾಟಕ ಭಾಷೆಯನ್ನೆ ಮಾತಾಡಿದ್ದಾರೆ. ಅದಕ್ಕೆ ಬೇಕಾಗೋ ತಯಾರಿನೂ ಮಾಡಿಕೊಂಡಿದ್ದಾರೆ. ಇನ್ನು ಉತ್ತರಕಾಂಡ ಸಿನಿಮಾದ (Director Rohit Padaki) ಡೈರೆಕ್ಟರ್ ಬೇರೆ ಯಾರೊ ಅಲ್ಲ, ಧಾರವಾಡದ ರೋಹಿತ್ ಪದಕಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ರೋಹಿತ್ ಈ ಮುಂಚೆ ರತ್ನನ್ ​ಪ್ರಪಂಚ ಮಾಡಿದ್ದರು. ಅದ್ಕೂ ಮುಂಚೆ ದಯವಿಟ್ಟು ಗಮನಿಸಿ ಪಿಕ್ಚರ್ ಮಾಡಿ ಗಮನ ಸೆಳೆದರು. ಈಗ ಉತ್ತರಕಾಂಡ ಹೆಸರಿನ ಚಿತ್ರ ಡೈರೆಕ್ಷನ್ ಮಾಡುತ್ತಿದ್ದಾರೆ. ಇದಕ್ಕೆ ರಮ್ಯಾ ಹೀರೋಯಿನ್, ಡಾಲಿ ಧನಂಜಯ್ ಹೀರೋ ಆಗಿಯೇ ಆಯ್ಕೆ ಆಗಿದ್ದಾರೆ.


ಇದರ ಬಗ್ಗೆ ನಿರ್ದೆಶಕ ರೋಹಿತ್ ಪದಕಿ ನ್ಯೂಸ್-18 ಕನ್ನಡದ ಜೊತೆಗೆ ಮಾತಾಡಿದ್ದಾರೆ.


ಉತ್ತರ ಕರ್ನಾಟಕದ ಕಥೆಯೊಂದಿಗೆ ರಮ್ಯಾ ಕಮ್​ ಬ್ಯಾಕ್
ಸ್ಯಾಂಡಲ್​ವುಡ್ ರಮ್ಯಾ ಉತ್ತರಕಾಂಡ ಚಿತ್ರದ ಮೂಲಕ ಕಮ್​ ಬ್ಯಾಕ್ ಮಾಡಿದ್ದಾರೆ. ಸಿನಿಮಾ ಪ್ರೇಮಿಗಳಿಗೆ, ರಮ್ಯಾ ಅಭಿಮಾನಿಗಳಿಗೆ ಹೊಸ ಉತ್ಸಾಹವನ್ನೂ ತುಂಬಿದ್ದಾರೆ.


ಹಡ್ಸಿ ಮಕ್ಳ ಕಾಲ ಕಾಲಾಗ ಸಿಗ್ತಾರ-ರಮ್ಯಾ ಖಡಕ್ ಡೈಲಾಗ್​
ರಮ್ಯಾ ನಿರ್ವಹಿಸುತ್ತಿರೊ ಪಾತ್ರ ವಿಶೇಷವಾಗಿಯೆ ಇದೆ. ಉತ್ತರ ಕರ್ನಾಟಕದ ಭಾಷೆಯನ್ನೆ ಈ ಪಾತ್ರ ಮಾತನಾಡುತ್ತದೆ. "ಹಡ್ಸಿ ಮಕ್ಳ ಇಲ್ಲೆ ಕಾಲ ಕಾಲಾಗ , ಕೈ ಕೈಯಾಗ ಸಿಗ್ತಾರ" ಅಂತಲೆ ಖಡಕ್ ಡೈಲಾಗ್​ ಹೊಡೆದಿದ್ದಾರೆ.


Kannada Actress Ramya Special Dialogue Secret Reveal
ಉತ್ತರಕಾಂಡ ಅಂದ್ರೇನು? ಇಲ್ಲಿ ಏನ್ ಕಥೆ?


ಒಂದು ರೀತಿ ಚಿತ್ರದ ಮುಹೂರ್ತದ ವೀಡಿಯೋ ಜೊತೆಗೆ ರಮ್ಯಾ ಪಾತ್ರದ ಪರಿಚಯ ಕೂಡ ಈಗಾಗಲೆ ಆಗಿದೆ. ಇನ್ನೂ ಒಂದು ರೀತಿ ಸ್ವತಃ ರಮ್ಯಾ ತಮ್ಮ ಚಿತ್ರದ ಒಂದಷ್ಟು ಅಸಲಿ ಸತ್ಯಗಳನ್ನು ನಿರೂಪಣೆ ಮೂಲಕ ಹೇಳಿ ಬಿಟ್ಟಿದ್ದಾರೆ.


ಉತ್ತರಕಾಂಡ ಅಂದ್ರೇನು? ಇಲ್ಲಿ ಏನ್ ಕಥೆ?
ಉತ್ತರಕಾಂಡ ಅಂದ್ರೆ, ಉತ್ತರ ಕರ್ನಾಟಕದಲ್ಲಿ ನಡೆದ ಕಾಂಡಗಳು ಅಂತಲೇ ಅರ್ಥ ಅಂತಲೇ ಡೈರೆಕ್ಟರ್ ರೋಹಿತ್ ಪದಕಿ ನ್ಯೂಸ್-18 ಕನ್ನಡ ಡಿಜಿಟಲ್​ಗೆ ಹೇಳಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ಈ ಕಥೆ ಉತ್ತರ ಕರ್ನಾಟಕದ ಭಾಗದಲ್ಲಿಯೇ ಚಿತ್ರೀಕರಣ ಆಗುತ್ತದೆ. ಈಗಾಗಲೇ ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿ ಆಗಿದೆ. ಮುಹೂರ್ತ ಆದ ಮರುದಿನ ಚಿತ್ರೀಕರಣ ಮಾಡಬೇಕು ಅನ್ನೋ ಲೆಕ್ಕದಲ್ಲಿಯೇ ಒಂದು ದಿನ ಚಿತ್ರೀಕರಣ ಆರಂಭವಾಗಿದೆ.


ಇದನ್ನೂ ಓದಿ: Adipurush: ಆದಿಪುರುಷ್ ಸಿನಿಮಾ ರಿಲೀಸ್ ಡೇಟ್​ ಮುಂದಕ್ಕೆ; ನಿರ್ದೇಶಕ ಓಂ ರಾವತ್ ಹೇಳಿದ್ದೇನು?


ಜನವರಿ ತಿಂಗಳಿನಿಂದ ಉತ್ತರಕಾಂಡ ಸಿನಿಮಾ ಶೂಟಿಂಗ್
ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷದಿಂದಲೇ ಶುರು ಆಗುತ್ತದೆ. 80 ರಿಂದ 100 ದಿನಗಳವರೆಗೂ ಚಿತ್ರೀಕರಣ ಪ್ಲಾನ್ ಆಗಿದೆ. ಬೆಳಗಾವಿಯ ಸುತ್ತ-ಮುತ್ತಲ ಪ್ರದೇಶದಲ್ಲಿಯೇ ಉತ್ತರಕಾಂಡ ಚಿತ್ರವನ್ನ ಚಿತ್ರೀಕರಿಸೊ ಯೋಜನೆಯನ್ನ ಡೈರೆಕ್ಟರ್ ರೋಹಿತ್ ಪದಕಿ ಹಾಕಿಕೊಂಡಿದ್ದಾರೆ.


Kannada Actress Ramya Special Dialogue Secret Reveal
ಜನವರಿ ತಿಂಗಳಿನಿಂದ ಉತ್ತರಕಾಂಡ ಸಿನಿಮಾ ಶೂಟಿಂಗ್


ಖಡಕ್ ಡೈಲಾಗ್ ಇರೊ ವೀಡಿಯೋ ಹಂಚಿಕೊಂಡ ರಮ್ಯಾ
ಸ್ಯಾಂಡಲ್​​ವುಡ್ ಕ್ವೀನ್ ರಮ್ಯಾ ತಮ್ಮ ಟ್ವಿಟರ್​ನಲ್ಲಿ ಈಗೊಂದು ವೀಡಿಯೋ ಹಂಚಿಕೊಂಡಿದ್ದಾರೆ. ಇದೇ ವೀಡಿಯೋದಲ್ಲಿಯೇ ಚಿತ್ರದ ಉತ್ತರಕಾಂಡ ಸಿನಿಮಾದ ರಮ್ಯಾ ಖಡಕ್ ಡೈಲಾಗ್​ ಇವೆ.


ರಮ್ಯಾ ಹೇಳಿರೋ ಡೈಲಾಗ್ ಇಡೀ ಚಿತ್ರದ ಒಟ್ಟು ಚಿತ್ರಣ ಕಟ್ಟಿಕೊಡ್ತಿರೋ ಹಾಗೆ ಇದೆ. ಉತ್ತರ ಕರ್ನಾಟಕ ಭಾಷೆಯನ್ನ ಅಷ್ಟೇ ಅದ್ಭುತವಾಗಿಯೇ ರಮ್ಯಾ ಇಲ್ಲಿ ಹೇಳಿದ್ದಾರೆ. ಅದಕ್ಕಾಗಿ ರಮ್ಯಾ ಅಷ್ಟೇ ತಯಾರಿನೂ ಮಾಡಿಕೊಂಡಿದ್ದಾರೆ. ರಮ್ಯಾ ಹೇಳಿರೋ ರೀತಿಯಲ್ಲಿಯೇ ಆ ತಯಾರಿ ತಿಳಿದು ಬಿಡುತ್ತದೆ.ರಮ್ಯಾ-ಧನಂಜಯ್ ಗುದ್ದಾಮ್ ಗುದ್ದಿ ಇನ್ ಮ್ಯಾಲ್ ಶುರು
ರಮ್ಯಾ ಅಲ್ಲದೇ ನಟ ಡಾಲಿ ಧನಂಜಯ್ ಕೂಡ ರಮ್ಯಾ ನಿರೂಪಣೆ ಮಾಡಿರೋ ವೀಡಿಯೊವನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್​ ಮ್ಯಾಲ್​ ಗುದ್ದಾಮ್ ಗುದ್ದಿ ಶುರು ಅಂತಲೇ ಬರೆದುಕೊಂಡು ಹೀಗೆ ತಮ್ಮ ಈ ಚಿತ್ರದ ಖುಷಿಯನ್ನ ಶೇರ್ ಮಾಡಿಕೊಡಿದ್ದಾರೆ.


ಇದನ್ನೂ ಓದಿ: Naveen Krishna Villain: ನಾನು ಫಸ್ಟ್ ಟೈಮ್ ವಿಲನ್ ಪಾತ್ರ ಮಾಡ್ತಿದ್ದೇನೆ ಆದರೆ ಇಲ್ಲಿ ಡೈಲಾಗ್​ಗಳೇ ಇಲ್ಲ- ನಟ ನಿರ್ದೇಶಕ ನವೀನ್ ಕೃಷ್ಣ


ಗುದ್ದಾಮ್ ಗುದ್ದಿ ಅಂದ್ರೇನು? ರೋಹಿತ್ ಪದಕಿ ಏನಂತಾರೆ?
ಗುದ್ದಾಮ್ ಗುದ್ದಿ ಅರ್ಥ ತುಂಬಾ ಸಿಂಪಲ್ ಆಗಿದೆ. ಗುದ್ದಾಮ್ ಗುದ್ದಿ ಅಂದ್ರೆ ಗಲಾಟೆ ಶುರು ಅನ್ನೋದೇ ಅರ್ಥ. ತುಂಬಾ ಜೋಶ್ ನಲ್ಲಿಯೇ ಹೇಳಿ ಬಿಡೋ ಮಾತು ಇದಾಗಿದೆ. ಹೀಗೆ ಗುದ್ದಾಮ್ ಗುದ್ದಿ ಅರ್ಥ ಹೇಳುವ ರೋಹಿತ್ ಪದಕಿ ಉತ್ತರ ಕರ್ನಾಟಕದ ಕಾಂಡಗಳನ್ನ ಈ ಮೂಲಕ ಹೇಳಲಿಕ್ಕೆ ರೆಡಿ ಆಗಿದ್ದಾರೆ.

First published: