Samyuktha Hegde: ಉದ್ಯಾನದಲ್ಲಿ ಗಲಾಟೆ ವಿಚಾರ: ಸಂಯುಕ್ತಾ ಹೆಗಡೆ ವಿಷಯವಾಗಿ ಟ್ವೀಟ್​ ಮಾಡಿದ ರಮ್ಯಾ..!

Divya Spandana. Ramya: ನಟಿ ರಮ್ಯಾ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದು, ಸ್ಯಾಂಡಲ್​ವುಡ್​ ನಟಿಯರ ಪೋಸ್ಟ್​ಗಳಿಗೆ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಜೊತೆಗೆ ಪ್ರಸಕ್ತ ವಿಷಯಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈಗ ನಟಿ ಸಂಯುಕ್ತಾ ಹೆಗಡೆ ಅವರ ವಿಷಯವಾಗಿಯೂ ರಮ್ಯಾ ಟ್ವೀಟ್​ ಮಾಡಿದ್ದಾರೆ.

ರಮ್ಯಾ ಹಾಗೂ ಸಂಯುಕ್ತಾ ಹೆಗಡೆ

ರಮ್ಯಾ ಹಾಗೂ ಸಂಯುಕ್ತಾ ಹೆಗಡೆ

  • Share this:
ನಟಿ ಸಂಯುಕ್ತಾ ಹೆಗಡೆ ಅವರು ತಮ್ಮ ಸ್ನೇಹಿತೆಯರೊಂದಿಗೆ ಉದ್ಯಾನದಲ್ಲಿ ವರ್ಕೌಟ್​ ಮಾಡುವಾಗ ಕವಿತಾ ರೆಡ್ಡಿ ಎಂಬಾಕೆ ಹಲ್ಲೆಗೆ ಯತ್ನಿಸಿ, ಅಸಭ್ಯ ಭಾಷೆ ಬಳಸಿರುವ ವಿಷಯ ಗೊತ್ತೇ ಇದೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಯಕ್ತಾ ಹೆಗಡೆ ಪರ ನೆಟ್ಟಿಗರು ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ನೈತಿಕ ಪೊಲೀಸ್​ ಗಿರಿ ತೋರಿದ್ದಾರೆ ಎನ್ನಲಾಗುತ್ತಿರುವ ಕವಿತಾ ರೆಡ್ಡಿ ಅವರ ನಡವಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಟ್ರೋಲ್​ ಸಹ ಮಾಡಲಾಗುತ್ತಿದೆ. ನಿನ್ನೆಯಷ್ಟೆ ಸಂಯುಕ್ತಾ, ಕವಿತಾ ರಡ್ಡಿ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ಸಂಯುಕ್ತಾ ಹೆಗಡೆ ಅವರ ವಿಷಯವಾಗಿ ತುಂಬಾ ಟ್ವೀಟ್​ ಮಾಡುತ್ತಾ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈಗ ನಟಿ ರಮ್ಯಾ ಸಹ ಈ ವಿಷಯವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ನಟಿ ರಮ್ಯಾ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದು, ಸ್ಯಾಂಡಲ್​ವುಡ್​ ನಟಿಯರ ಪೋಸ್ಟ್​ಗಳಿಗೆ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಜೊತೆಗೆ ಪ್ರಸಕ್ತ ವಿಷಯಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈಗ ನಟಿ ಸಂಯುಕ್ತಾ ಹೆಗಡೆ ಅವರ ವಿಷಯವಾಗಿಯೂ ರಮ್ಯಾ ಟ್ವೀಟ್​ ಮಾಡಿದ್ದಾರೆ.

ಸಂಯುಕ್ತಾ ಹೆಗಡೆ ಬೆಂಬಲಕ್ಕೆ ನಿಂತ ರಮ್ಯಾ

ರಮ್ಯಾ ಇತ್ತೀಚೆಗೆ ಪಾರ್ಕ್​ನಲ್ಲಿ ನಡೆದ ಗಲಾಟೆ ವಿಷಯವಾಗಿ ಟ್ವೀಟ್​ ಮಾಡಿದ್ದು, ಸಂಯುಕ್ತಾ ಹೆಗಡೆ ಅವರ ಪರವಾಗಿ ನಿಂತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಸಂಯುಕ್ತಾ ಹೆಗಡೆ ಮಾಡಿರುವ ಸಂಪೂರ್ಣ ವಿಡಿಯೋ ನೋಡಿದ್ದೇನೆ. ಸಂಯುಕ್ತಾ ಹಾಗೂ ಅವರ ಸ್ನೇಹಿತೆಯರನ್ನು ನಡೆಸಿಕೊಂಡ ರೀತಿ ಕಂಡು ನನಗೆ ಶಾಕ್​ ಆಗಿದೆ. ಬೇರೆಯವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ. ನೈತಿಕ ಪೊಲೀಸ್​ ಗಿರಿ ತೋರಿಸುವ ಹ್ಕು ಯಾರಿಗೂ ಇಲ್ಲ ಎಂದಿದ್ದಾರೆ ರಮ್ಯಾ.ಇಂತಹ ಘಟನೆಗಳು ನಡೆಯಬಾರದು, ನಾನು ಕವಿತಾ ರೆಡ್ಡಿ ಮಾಡಿರುವ ಪೋಸ್ಟ್ ಅನ್ನು ಓದಿದ್ದೇನೆ. ಈ ಘಟನೆಯಲ್ಲಿ ಒಬ್ಬರಾದರೂ ಸಂಯಮದಿಂದ ಇರಬೇಕಿತ್ತು. ಇಂತಹ ಘಟನೆ ನಡೆಯಬಾರದಿತ್ತು ಹಾಗೂ ಮರುಕಳಿಸಲೂಬಾರದು ಎಂದೂ ಬರೆದುಕೊಂಡಿದ್ದಾರೆ.

ಇನ್ನು ಸಂಯುಕ್ತಾ ಅವರ ಸ್ನೇಹಿತೆಯರ ಮೇಲೆ ಹಲ್ಲೆಗೆ ಯತ್ನಿಸಿದ ಕವಿತಾ ರೆಡ್ಡಿ ಕಾಂಗ್ರೆಸ್​ ಕಾರ್ಯಕರ್ತೆ ಎಂದು ಹೇಳಲಾಗುತ್ತಿದೆ. ಇನ್ನು ಈ ಘಟನೆಯಲ್ಲಿ ಸ್ಟಾರ್ ಹಾಗೂ ಸೆಲೆಬ್ರಿಟಿಗಳು ಸಂಯುಕ್ತಾ ಹೆಗಡೆ ಅವರ ಬೆಂಬಲಕ್ಕೆ ನಿಂತಿದ್ದಾರೆ.
Published by:Anitha E
First published: