• Home
  • »
  • News
  • »
  • entertainment
  • »
  • Ramya-Rashmika Mandanna: ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ರಮ್ಯಾ! ಟ್ರೋಲರ್ಸ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

Ramya-Rashmika Mandanna: ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತ ರಮ್ಯಾ! ಟ್ರೋಲರ್ಸ್‌ಗೆ ಸ್ಯಾಂಡಲ್‌ವುಡ್ ಕ್ವೀನ್ ಹೇಳಿದ್ದೇನು?

ರಮ್ಯಾ-ರಶ್ಮಿಕಾ (ಸಂಗ್ರಹ ಚಿತ್ರ)

ರಮ್ಯಾ-ರಶ್ಮಿಕಾ (ಸಂಗ್ರಹ ಚಿತ್ರ)

ರಶ್ಮಿಕಾ ಮಂದಣ್ಣ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ. ಅದನ್ನು ಬಹಿರಂವಾಗಿ ಇನ್‍ಸ್ಟಾಗ್ರಾಂನಲ್ಲಿ ರಶ್ಮಿಕಾ ಹಂಚಿಕೊಂಡಿದ್ದರು. ಇದೀಗ ರಶ್ಮಿಕಾ ಬೆಂಬಲಕ್ಕೆ ನಟಿ ರಮ್ಯಾ ನಿಂತಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ನ್ಯಾಷನಲ್ ಕ್ರಶ್ (National Crush), ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬೆಂಬಲಕ್ಕೆ ಮತ್ತೋರ್ವ ನಟಿ, ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Sandalwood Queen Ramya) ನಿಂತಿದ್ದಾರೆ. ರಶ್ಮಿಕಾ ಮಂದಣ್ಣ ಮನಸ್ಸಿಗೆ ಕೆಲ ದಿನಗಳಿಂದ ನೋವಾಗ್ತಿದೆಯಂತೆ. ಅದನ್ನು ಬಹಿರಂವಾಗಿ ಇನ್‍ಸ್ಟಾಗ್ರಾಂನಲ್ಲಿ ರಶ್ಮಿಕಾ ಹಂಚಿಕೊಂಡಿದ್ದರು. “ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದಲೂ ನನ್ನನ್ನು ಬಹಳಷ್ಟು ಮಂದಿ ದ್ವೇಷಿಸಿದ್ದಾರೆ. ಸಾಕಷ್ಟು ಟ್ರೋಲ್‍ಗಳು ಆಗಿವೆ. ನೆಗೆಟಿವ್ ಕಾಮೆಂಟ್ ಹೆಚ್ಚು ಬಂದಿವೆ. ಖಂಡಿತವಾಗಿಯೂ ಪ್ರತಿಯೊಬ್ಬ ವ್ಯಕ್ತಿಯಿಂದ ಪ್ರೀತಿಸಲ್ಪಡಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ನನ್ನ ಬಗ್ಗೆ ನಿಮಗೆ ಒಪ್ಪಿಗೆ ಇಲ್ಲ ಎಂದಾಕ್ಷಣ, ನನ್ನ ಬಗ್ಗೆ ನೆಗೆಟಿವಿಟಿ ಹಬ್ಬಿಸಬಹುದು ಎಂದು ಅರ್ಥವಲ್ಲ” ಅಂತ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಇದೀಗ ರಶ್ಮಿಕಾ ಬೆಂಬಲಕ್ಕೆ ನಟಿ ರಮ್ಯಾ ನಿಂತಿದ್ದಾರೆ.


ರಶ್ಮಿಕಾ ಬೆಂಬಲಕ್ಕೆ ನಿಂತ ನಟಿ ರಮ್ಯಾ


ಟ್ರೋಲರ್‌ಗಳಿಗೆ ಬಹಿರಂಗ ಪತ್ರ ಬರೆದಿರುವ ರಶ್ಮಿಕಾ ಮಂದಣ್ಣ ಪರ ನಟಿ ರಮ್ಯಾ ಬ್ಯಾಟ್ ಬೀಸಿದ್ದಾರೆ. ಈ ಕುರಿತಂತೆ ರಮ್ಯಾ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


ರಶ್ಮಿಕಾಗೆ ರಮ್ಯಾ ಬೆಂಬಲ


ರಮ್ಯಾ ಹೇಳಿದ್ದೇನು?


ರಶ್ಮಿಕಾ ಅವರ ಪೋಸ್ಟನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ರಮ್ಯಾ, ''ಈ ಟ್ರೋಲ್‌ ಸಮಸ್ಯೆ ಎಂದಿಗೂ ನಿಲ್ಲುವುದಿಲ್ಲ. ಮತ್ತೊಬ್ಬರ ಜೀವನದ ಬಗ್ಗೆ ಕಮೆಂಟ್‌ ಮಾಡುವುದು ತಪ್ಪು. ಅದರಿಂದ ಎಷ್ಟು ನೋವಾಗುತ್ತದೆ ಎನ್ನುವುದು ಅವರಿಗಷ್ಟೇ ಗೊತ್ತು. ಅವರ ಪಾಡಿಗೆ ಇರಲು ಬಿಟ್ಟು ಬಿಡಿ'' ಎಂದು ಮನವಿ ಮಾಡಿದ್ದಾರೆ.


ಇದನ್ನೂ ಓದಿ: Rashmika Mandanna: ಮನಸು ನೋಯಿಸಿದವರಿಗೆ ರಶ್ಮಿಕಾ ಬಹಿರಂಗ ಪತ್ರ! ಕೊಡಗಿನ ಕುವರಿ ಏನ್ ಹೇಳಿದ್ದಾರೆ?


ರಶ್ಮಿಕಾ ಬರೆದು ಕೊಂಡಿದ್ದು ಏನು?


ರಶ್ಮಿಕಾ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಟೀಕಾಕಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ''ನೀವು ನನ್ನ ಬಗ್ಗೆ ಮತ್ತಷ್ಟು ಹೆಮ್ಮೆ ಪಡಬೇಕು ಎಂದು ಮತ್ತಷ್ಟು ಕಷ್ಟ ಪಡುತ್ತಿದ್ದೇನೆ. ಕೆಲವೊಂದು ಸಂದರ್ಶನಗಳಲ್ಲಿ ನಾನು ಮಾತನಾಡುವ ವಿಚಾರಗಳ ಬಗ್ಗೆ ನೀವು ಸಾಮಾಜಿಕ ಜಾಲತಾಣದಲ್ಲಿ ಬೇರೆ ರೂಪ ನೀಡಿ, ಅಥವಾ ನಾನು ಮಾತನಾಡಿರದ ವಿಚಾರವನ್ನು ಸೇರಿಸಿ ಟ್ರೋಲ್‌ ಮಾಡಿದಾಗ ನನಗೆ ಬಹಳ ನೋವಾಗುತ್ತದೆ. ನನ್ನ ಬಗ್ಗೆ ನೀವು ಯಾವ ರಚನಾತ್ಮಕ ಟೀಕೆಗಳನ್ನು ಮಾಡಿದರೂ ನಾನು ಅದನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನನ್ನು ಸಂಪೂರ್ಣ ವೈಯಕ್ತಿಕವಾಗಿ ದ್ವೇಷಿಸುತ್ತಾ, ನಕಾರಾತ್ಮಕ ಮಾತುಗಳನ್ನು ಆಡಿದರೆ ಅದರಿಂದ ಯಾರಿಗೂ ಲಾಭವಿಲ್ಲ ಅಂತ ಬರೆದಿದ್ದರು.


ನನ್ನನ್ನು ಪ್ರೀತಿಸುವ, ಗೌರವಿಸುವ ಜನರೂ ಇದ್ದಾರೆ”


ಮುಂದುವರೆದ ರಶ್ಮಿಕಾ, “ನಕಾರಾತ್ಮಕ ಅಭಿಪ್ರಾಯಗಳೊಂದಿಗೆ ನನ್ನನ್ನು ಪ್ರಿತಿಸುವ, ಗೌರವಿಸುವ ಜನರೂ ಇದ್ದಾರೆ. ಅವರಿಗೆಲ್ಲಾ ನಾನು ಆಭಾರಿ, ನಿಮ್ಮ ಪ್ರೀತಿಯಿಂದಲೇ ನಾನು ಇಷ್ಟು ದೂರ ಬಂದಿದ್ದೇನೆ. ದಯವಿಟ್ಟು ಬೇರೆಯವರ ಭಾವನೆಗಳಿಗೆ ಬೆಲೆ ಕೊಡಿ'' ಎಂದು ಬರೆದುಕೊಂಡಿದ್ದರು.


ಕೊನೆಯಲ್ಲಿ ಧನ್ಯವಾದ ಅರ್ಪಿಸಿದ್ದ ರಶ್ಮಿಕಾ


“ನನ್ನ ಸುತ್ತಲಿರುವ ಎಲ್ಲರಿಗೂ ಪ್ರೀತಿ ಮಾತ್ರ ನೀಡಲು ಬಯಸುತ್ತೇನೆ. ನಾನು ಇಲ್ಲಿಯವರೆಗೆ ಕೆಲಸ ಮಾಡಿದ ವ್ಯಕ್ತಿಗಳನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೇನೆ. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ನಿಮಗಾಗಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುತ್ತೇನೆ. ಏಕೆಂದರೆ ನಾನು ಹೇಳಿದಂತೆ, ನಿಮ್ಮನ್ನು ರಂಜಿಸುವುದು ನನಗೆ ಸಂತೋಷವನ್ನು ನೀಡುತ್ತದೆ ಎಂದು ನಟಿ ಬರೆದಿದ್ದಾರೆ. ಕೊನೆಯಲ್ಲಿ ಧನ್ಯವಾದಗಳು, ರಶ್ಮಿಕಾ ಎಂದು ಬರೆದಿದ್ದರು.


ಇದನ್ನೂ ಓದಿ: Ramya-Dhananjay: ಡಾಲಿಗೆ ಜೋಡಿಯಾಗ್ತಿದ್ದಾರೆ ಕ್ವೀನ್ ರಮ್ಯಾ!


ದಾಖಲೆ ಬರೆದ ಸಾಮಿ ಸಾಮಿ ಸಾಂಗ್! 


ಅಲ್ಲು ಅರ್ಜುನ್ ಅವರ ಪುಷ್ಪ ಸಿನಿಮಾ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರ ದೇಶಾದ್ಯಂತ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯವು ದಕ್ಷಿಣ ಮತ್ತು ಉತ್ತರದ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಸಿನಿಮಾದಲ್ಲಿ ಬರುವ ಸಾಮಿ ಸಾಮಿ ಸಾಂಗ್ ಈಗ ಹೊಸ ದಾಖಲೆ ಬರೆದಿದೆ.

Published by:Annappa Achari
First published: