• Home
  • »
  • News
  • »
  • entertainment
  • »
  • Actress Ramya: ರಾಣಿ ಲವ್ ಯೂ, ಬೀದಿನಾಯಿ ತಂದು ಸಾಕಿದ ನಟಿ ರಮ್ಯಾ

Actress Ramya: ರಾಣಿ ಲವ್ ಯೂ, ಬೀದಿನಾಯಿ ತಂದು ಸಾಕಿದ ನಟಿ ರಮ್ಯಾ

ನಟಿ ರಮ್ಯಾ ಅವರ ಪ್ರೀತಿಯ ನಾಯಿ ರಾಣಿ

ನಟಿ ರಮ್ಯಾ ಅವರ ಪ್ರೀತಿಯ ನಾಯಿ ರಾಣಿ

ನಟಿ ರಮ್ಯಾ ಅವರು ತಮ್ಮ ಪ್ರೀತಿಯ ಶ್ವಾನದ ಬಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡ ನಟಿ ಏನಂದ್ರು?

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್ ನಟಿ ರಮ್ಯಾ (Ramya) ಕಮ್ ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ  (Swathi Mutthina Malehaniye)ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಜೊತೆ ಪ್ರೇಕ್ಷಕರ ಮುಂದೆ ಬರುತ್ತಾರೆ ಎಂದಿದ್ದ ನಟಿ ಸಡನ್ನಾಗಿ ಸಿನಿಮಾದಲ್ಲಿ  (Cinema) ಹೀರೋಯಿನ್ ಪಾತ್ರದಿಂದ ಹಿಂದೆ ಸರಿದಿದ್ದಾರೆ. ನಂತರದಲ್ಲಿ ನಟಿ ಸ್ವಲ್ಪ ರಾಜಕೀಯದಲ್ಲಿ (Politics) ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಇತ್ತೀಚೆಗೆ ಸ್ವಲ್ಪಮಟ್ಟಿಗೆ ಆ್ಯಕ್ಟಿವ್ ಆಗಿರುವ ನಟಿ ಪೋಸ್ಟ್​ಗಳನ್ನು ಅಭಿಮಾನಿಗಳೊಂದಿಗೆ (Fans) ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ನಟಿ ನಾಯಿಯ ವಿಡಿಯೋ ಒಂದನ್ನು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದರ ಜೊತೆ ಒಂದು ನೋಟ್ ಕೂಡಾ ಬರೆದಿದ್ದಾರೆ. ನಟಿ ಶೇರ್ ಮಾಡಿರುವ ನಾಯಿಯ (Pet Dog) ವಿಡಿಯೋವನ್ನು ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.


ನಾಯಿ ವಿಡಿಯೋ ಶೇರ್ ಮಾಡಿದ ನಟಿ


ರಮ್ಯಾ ಅವರು ರಾಣಿ ಎನ್ನುವ ನಾಯಿಯ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಯಿಯೊಂದು ಆಡುತ್ತಿರುವುದನ್ನು ಕಾಣಬಹುದು.


ವಿಡಿಯೋ ಜೊತೆ ಏನು ಬರೆದಿದ್ದಾರೆ?


ರಾಣಿ ನಮ್ಮ ಜೊತೆಗಿರುವುದು 1 ವರ್ಷವಾಗುತ್ತಾ ಬಂತು. ರಾಣಿ ಮೇಲೆ ಕಾರು ಹರಿದು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಗೋವಾದಲ್ಲಿ ಶೆಲ್ಟರ್ ಹೌಸ್​ ಒಂದರಲ್ಲಿ ಒಂದು ತಿಂಗಳ ಕಾಲ ಶುಶ್ರೂಶೆ ಮಾಡಿದ ನಂತರ ರಾಣಿ ಹುಷಾರಾದಳು. ನಮ್ಮಲ್ಲಿ ವಯಸ್ಸಾಗ ಎರಡು ನಾಯಿಗಳಿದ್ದವು. ಹಾಗಾಗಿ ರಾಣಿಯನ್ನು ಸಾಕಬಹುದು ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ರಾಣಿ ನಮ್ಮನೆಗೆ ಬಂದಳು. ನಾನು ಜೀವನದಲ್ಲಿ ಏನನ್ನೂ ನಿರ್ಧರಿಸಬೇಕಾಗಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ. ಥಾಂಕ್ಯೂ ಮೈ ರಾನು., ಮೈ ಬೇಬಿ ಗರ್ಲ್, ನನ್ನ ಹೃದಯ ತೆರೆದಿದ್ದಕ್ಕೆ ಧನ್ಯವಾದಗಳು. ಐ ಲವ್ ಯೂ ಲವ್ ಯೂ ಲವ್ ಯೂ ಎಂದು ಬರೆದಿದ್ದಾರೆ.


ವೈರಲ್ ಆಯ್ತು ವಿಡಿಯೋ


ವಿಡಿಯೋಗೆ 27 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 140ಕ್ಕೂ ಹೆಚ್ಚು ಕಾಮೆಂಟ್ ಬಂದಿದೆ. ನೆಟ್ಟಿಗರು ವಿಡಿಯೋ ನೋಡಿ ಲೈಕ್ ಕೊಟ್ಟಿದ್ದಾರೆ.
ರಾಗಿಣಿ ದ್ವಿವೇದಿ ಕಾಮೆಂಟ್?


ರಾಗಿಣಿ ದ್ವಿವೇದಿ ಅವರು ಕಾಮೆಂಟ್ ಮಾಡಿ ನಮ್ಮ ಜೀವನದಲ್ಲಿ ನಾವು ಏನನ್ನೂ ನಿರ್ಧರಿಸುವುದಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುವುದು ಮಾತ್ರ ನಿಜವಾದ ಮಾತು ಎಂದು ಹೇಳಿದ್ದಾರೆ.
ರಾಣಿಯ ಮಮ್ಮನನ್ನು ನೋಡಬಹುದೇ?


ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ರಮ್ಯಾ ಅವರ ಮುಖವನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ನಾವು ರಾಣಿಯ ಮಮ್ಮನನ್ನು ನೋಡಬಹುದೇ ಎಂದು ಅವರು ಕಾಮೆಂಟ್ ಮಾಡಿದ್ದಾರೆ.

Published by:Divya D
First published: