ಕನ್ನಡ ಸ್ಯಾಂಡಲ್ವುಡ್ ಕ್ವೀನ್ ಎಂದೇ ಕರೆಸಿಕೊಂಡ ರಮ್ಯಾ (Kannada Sandalwood Queen Ramya) ಅವರು ಸಾರ್ವಜನಿಕವಾಗಿ ಈಗ ಕಾಣಿಸಿಕೊಳ್ಳುವುದು ತೀರಾ ಅಪರೂಪವಾಗಿದೆ. ಅವರು, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಗೊಂದಲ ಈಗಲೂ ಅವರ ಅಭಿಮಾನಿಗಳಲ್ಲಿ ಇದೆ. ಸಿನಿಮಾ ಸೇರಿದಂತೆ ರಾಜಕೀಯದಿಂದಲೂ ಸಾಕಷ್ಟು ಸಮಯದಿಂದ ಕಣ್ಮರೆ ಆಗಿರುವ ರಮ್ಯಾ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ಹೌದು, ನಟ ಸತೀಶ್ ನೀನಾಸಂ (Satish Ninasam) ಅವರು ಮೊದಲ ಬಾರಿಗೆ ತಮಿಳಿನ "ಪಗೈವುನುಕು ಅರುಳ್ವಾಯ್" (Pagaivanuku Arulvai Tamil Movie) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಅವರ ಪಾತ್ರದ ಪೋಸ್ಟರ್ ಅನ್ನು (First Look Poster) ನಟಿ ರಮ್ಯಾ ಅವರು ಬಿಡುಗಡೆ ಮಾಡಿ, ನಟ ಸತೀಶ್ ನೀನಾಸಂ ಅವರಿಗೆ ಹಾಗೂ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ತಮಿಳಿನ ಪ್ರಖ್ಯಾತ ನಟ ಹಾಗೂ ನಿರ್ದೇಶಕ ಸಮುದ್ರಖಣಿ (Tamil Famous Actor Samudrakhani) ಅವರು ಸಹ ಪೋಸ್ಟರ್ ಬಿಡುಗಡೆ ಮಾಡಿದರು.
![]()
ಪಗೈವುನುಕು ಅರುಳ್ವಾಯ್ ಸಿನಿಮಾದ ಪೋಸ್ಟರ್.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಟ ಸತೀಶ್ ನೀನಾಸಂ ಅವರು, ಸ್ಯಾಂಡಲ್ವುಡ್ನ ಖ್ಯಾತ ನಟಿ ರಮ್ಯಾ ಹಾಗೂ ತಮಿಳಿನ ಪ್ರಖ್ಯಾತ ನಟ, ನಿರ್ದೇಶಕ ಸಮುದ್ರಖಣಿ ಅವರು ನನ್ನ ತಮಿಳಿನ ಮೊದಲ ಸಿನಿಮಾ,"ಪಗೈವುನುಕು ಅರುಳ್ವಾಯ್" ನನ್ನ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಗಡಿ ದಾಟಿದ ನನ್ನ ಮೊದಲ ಸಾಹಸಕ್ಕೆ ನನ್ನ ಜೊತೆ ಮತ್ತೆ ನಿಲ್ಲಬೇಕಾಗಿದೆ ನೀವೆಲ್ಲರೂ... ಎಂದು ಹೇಳಿದ್ದಾರೆ.
ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ ಪಗೈವುನುಕು ಅರುಳ್ವಾಯ್ ತಮಿಳು ಚಿತ್ರದ ಪಾತ್ರದ ಪೋಸ್ಟರ್ ಅನ್ನು ತುಂಬಾ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಸತೀಶ್ ನೀನಾಸಂ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ… ಎಂದು ನಟಿ ರಮ್ಯಾ ಅವರು ಶುಭ ಹಾರೈಸಿದ್ದಾರೆ.
ಅನೀಸ್ ಅಜಾನ್ದಾನ್ ನಿರ್ದೇಶನದ ಪಗೈವುನುಕು ಅರುಳ್ವಾಯ್ ಚಿತ್ರದಲ್ಲಿ ಖ್ಯಾತ ನಟ ಸಸಿಕುಮಾರ್ ಹಾಗೂ ಸತೀಶ್ ನೀನಾಸಂ ಇಬ್ಬರು ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇಂಗ್ಲಿಷ್ ಖ್ಯಾತ ಸಾಹಿತಿ ವಿಲಿಯಂ ಷೇಕ್ಸ್ಪಿಯರ್ ಅವರ ಮ್ಯಾಕ್ ಬೆತ್ ಸಿನಿಮಾದಿಂದ ಸ್ಫೂರ್ತಿ ಪಡೆದ ಕತೆಯೇ ಪಗೈವುನುಕು ಅರುಲ್ವಾಯ್ ಚಿತ್ರ. ಬಹುದೊಡ್ಡ ಬಜೆಟ್ನಲ್ಲಿ ತಯಾರಾಗಿರುವ ಈ ಸಿನಿಮಾದ ಬಹುತೇಕ ಭಾಗ ಜೈಲಿನಲ್ಲಿ ಚಿತ್ರೀಕರಣಗೊಂಡಿದೆ. ಅದಷ್ಟೇ ಅಲ್ಲದೇ ಶಿವಮೊಗ್ಗ ಸೇರಿ ರಾಜ್ಯದ ಇತರೆಡೆಯೂ ಚಿತ್ರೀಕರಣ ಮಾಡಲಾಗಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
![]()
ತಮಿಳಿನ ಪ್ರಖ್ಯಾತ ನಟ, ನಿರ್ದೇಶಕ ಸಮುದ್ರಖಣಿ
ಇದನ್ನು ಓದಿ: Annaatthe ಸಿನಿಮಾದ ಫಸ್ಟ್ ಕಾಪಿ ವೀಕ್ಷಿಸಿದ ಸೂಪರ್ ಸ್ಟಾರ್ Rajinikanth
ನಟ ಸತೀಶ್ ನೀನಾಸಂ ಅವರು ತಮಿಳಿನ ಈ ಚಿತ್ರ ಸೇರಿ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಒಂದರ ಮೇಲೆ ಒಂದರಂತೆ ಅವರ ಸಿನಿಮಾಗಳು ತೆರೆಗೆ ಅಪ್ಪಳಿಸುವ ಸಾಧ್ಯತೆ ಇದೆ. ನಂದೀಶ್ ನಿರ್ದೇಶನದ ಗೋದ್ರಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಲಾಕ್ಡೌನ್, ಚಿತ್ರಮಂದಿರ ಬಂದ್ನಿಂದಾಗಿ ಈ ಚಿತ್ರ ಇನ್ನು ಬಿಡುಗಡೆಯಾಗಿಲ್ಲ. ಚಿತ್ರಮಂದಿರ ಸಂಪೂರ್ಣವಾಗಿ ತೆರೆದ ಮೇಲೆ ಈ ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಪೆಟ್ರೋಮ್ಯಾಕ್ಸ್ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಶರ್ಮಿಳಾ ಮಾಂಡ್ರೆ ಅವರೊಂದಿಗೆ ದಸರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕೆಲಸಗಳು ಬಹುತೇಕ ಪೂರ್ಣವಾಗುವ ಹಂತಕ್ಕೆ ಬಂದಿದೆ. ಹಾಗೆಯೇ ಅಯೋಗ್ಯದಂತಹ ಹಿಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚಿತಾ ರಾಮ್ ಅವರು ಮತ್ತೆ ಸತೀಶ್ ನೀನಾಸಂ ಅವರೊಂದಿಗೆ ಮ್ಯಾಟ್ನಿಯಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಕೆಲಸಗಳು ಸಹ ಆರಂಭವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ