Kotigobba-3 Trailer: ಕೋಟಿಗೊಬ್ಬ-3 ಟ್ರೈಲರ್ ಕಂಡು ಕಿಚ್ಚ ಸುದೀಪ್ ಬಗ್ಗೆ ಹೀಗಂದಿದ್ದೇಕೆ ನಟಿ ರಮ್ಯಾ ?

ಕಿಚ್ಚ ಸುದೀಪ್​ ಬಗ್ಗೆ ಸದ್ಯ  ರಮ್ಯಾ ಪ್ರತಿಕ್ರಿಯೆ ಗಾಂಧಿನಗರದ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ರಮ್ಯಾ ಈ ಹಿಂದೆ ತಮಗಿಷ್ಟವಾದ ಚಿತ್ರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಈಗಿನ ಕಮೆಂಟ್​ ವೈರಲ್​ ಆಗಿದೆ.

ರಮ್ಯಾ-ಸುದೀಪ್​

ರಮ್ಯಾ-ಸುದೀಪ್​

 • Share this:
  ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ (Sandalwood Actress Ramya) ಸದ್ಯದ ಸಿನಿಮಾರಂಗದಿಂದ ದೂರ ಉಳಿಸಿದ್ದಾರೆ. ರಾಜಕೀಯದಿಂದಲೂ ದೂರವಾಗಿರುವ ರಮ್ಯಾ ಸೋಷಿಯಲ್​ ಮೀಡಿಯಾದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮತ್ತು ಸಿನಿಮಾಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಭಿನಯ ಚಕ್ರವರ್ತಿ ಸುದೀಪ್ (Sudeep) ಅಭಿನಯದ ಕೋಟಿಗೊಬ್ಬ-3 (Kotigobba 3) ಬಗ್ಗೆ ರಮ್ಯಾ ತಮ್ಮ ಅಭಿಪ್ರಾಯವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸುದೀಪ್ ಅವರನ್ನ ವಿಶೇಷ ಪಾತ್ರಕ್ಕೆ ಹೋಲಿಸಿ ರನ್ನನ ಗುಣಗಾನ ಮಾಡಿದ್ದಾರೆ.

  ಹಾಲಿವುಡ್ ಬೆಂಜ್‍ಮಿನ್ ಪಾತ್ರಕ್ಕೆ ಹೋಲಿಕೆ

  ಕೋಟಿಗೊಬ್ಬ-3 ಟ್ರೈಲರ್ ನೋಡಿರುವ ಸ್ಯಾಂಡಲ್‍ವುಡ ಕ್ವೀನ್ ರಮ್ಯಾ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಟ ಸುದೀಪ್ ಅವರನ್ನು ಹಾಲಿವುಡ್ ನಲ್ಲಿ ಬರುವ ಬೆಂಜ್‍ಮಿನ್ ಪಾತ್ರಕ್ಕೆ ಹೋಲಿಸಿದ್ದಾರೆ. ಬೆಂಜ್‍ಮಿನ್ ಪಾತ್ರದಲ್ಲಿ ವೃದ್ಧನೋರ್ವ ಮಗುವಾಗಿ ಅಂತ್ಯವಾಗುತ್ತಾನೆ. ಅದರಂತೆ ಸುದೀಪ್ ಟ್ರೈಲರ್ ನಲ್ಲಿ ಯಂಗ್ ಸ್ಟಾರ್ ಆಗಿ ಮಿಂಚಿದ್ದು, ವಯಸ್ಸು ಆದಂತೆ ಕಾಣಿಸಲ್ಲ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಗೆ ವಯಸ್ಸು ಆಗೋದೇ ಇಲ್ಲವಾ ಎಂದು ಬರೆದು ಫೈರ್ ಎಮೋಜಿ ಚಪ್ಪಾಳೆ ತಟ್ಟುತ್ತಿರುವ  ಜಿಐಎಫ್ ಹಾಕಿ, ಟ್ರೈಲರ್ ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. ಶುಕ್ರವಾರ ಕೋಟಿಗೊಬ್ಬ-3 ಟ್ರೈಲರ್ ರಿಲೀಸ್ ಆಗಿದ್ದು, 38 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 2 ಲಕ್ಷ ಲೈಕ್ಸ್ ಪಡೆದುಕೊಂಡಿದೆ.

  ಇನ್​ಸ್ಟಾಗ್ರಾಮ್​​ ನಲ್ಲಿ ರಮ್ಯಾ ಕಮೆಂಟ್​


  ಸದ್ಯ  ರಮ್ಯಾ ಪ್ರತಿಕ್ರಿಯೆ ಗಾಂಧಿನಗರದ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ರಮ್ಯಾ ಈ ಹಿಂದೆ ತಮಗಿಷ್ಟವಾದ ಚಿತ್ರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಸಿನಿಮಾಗಳಿಂದ ದೂರವಾದರೂ ಚಿತ್ರರಂಗದಲ್ಲಾಗುತ್ತಿರುವ ಬೆಳವಣಿಗೆ ಹೊಸ ಚಿತ್ರಗಳ ಅಪ್‍ಡೇಟ್ ಪಡೆದುಕೊಳ್ಳುತ್ತಿರುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಲೈವ್ ಬಂದಿದ್ದ ರಮ್ಯಾರನ್ನು ಕಂಡು ಅಭಿಮಾನಿಗಳು ಉಘೇ ಉಘೇ ಅಂದಿದ್ದರು. ಲೋಕಸಭಾ ಚುನಾವಣೆ ಬಳಿಕ ರಮ್ಯಾ ಅಜ್ಞಾತವಾಸದಲ್ಲಿದ್ದಾರೆ. ವಿದೇಶದಲ್ಲಿ ರಮ್ಯಾ ಮದುವೆ ಆಗಿದ್ದರೆಂಬ ಗಾಳಿಸುದ್ದಿಯೂ ಹರಿದಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ರಮ್ಯಾ, ಸಿನಿಮಾದಿಂದ ದೂರ ಬಂದಿದ್ದಾಯತ್ತು, ರಾಜಕೀಯ ಮುಗಿದ ಅಧ್ಯಾಯ ಎಂದು ವೈರಾಗ್ಯದ ಮಾತುಗಳನ್ನಾಡಿದ್ದರು. ಆಗಾಗ ಇನ್‍ಸ್ಟಾಗ್ರಾಂನಲ್ಲಿ ಅಧ್ಯಾತ್ಮಿಕ ಜೀವನದ ಕುರಿತ ಪೋಸ್ಟ್ ಮಾಡುತ್ತಿರುತ್ತಾರೆ.

  ಇದನ್ನೂ ಓದಿ: Kichcha Sudeep: ಸಾವಿರ ಪರದೆಗಳಲ್ಲಿ Kotigobba 3 ಸಿನಿಮಾ ರಿಲೀಸ್​: ಸೋಮವಾರದಿಂದ ಅಡ್ವಾನ್ಸ್​ ಬುಕಿಂಗ್ ಆರಂಭ..!

  ಟ್ರೈಲರ್ ನಲ್ಲಿ ಶಿವ ಪಾತ್ರದ ಮಾಸ್ ಲುಕ್ ಮತ್ತು ಸತ್ಯನ ಸಾಧು ಗುಣ ಅಭಿಮಾನಿಗಳಿಗೆ ಇಷ್ಟವಾಗಿದೆ. ಮಾಸ್ ಜೊತೆ ರೊಮ್ಯಾಂಟಿಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸುದೀಪ್ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ರವಿಶಂಕರ್ ಡೈಲಾಗ್ ಊಟದಲ್ಲಿ ಉಪ್ಪಿನಕಾಯಿ ಎಂಬಂತೆ ಹದವಾಗಿದೆ. ನಟಿ ಮಡೋನ ಕಣ್ಣೋಟ ಸಂಚಲನ ಮೂಡಿಸುತ್ತಿದೆ. ಕೋಟಿಗೊಬ್ಬ ಮೊದಲ ಮತ್ತು ಎರಡನೇ ಭಾಗದಲ್ಲಿ ಸುದೀಪ್ ಸತ್ಯ ಹಾಗೂ ಶಿವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮನರಂಜನೆ ನೀಡಿದ್ದರು. ಈಗ ಮೂರನೇ ಭಾಗದಲ್ಲಿ ಇದೇ ಎರಡು ಪಾತ್ರದಲ್ಲಿ ಬರುತ್ತಿರುವ ಸುದೀಪ್ ಕಣ್ತುಂಬಿಕೊಳ್ಳಲು ಅಭಿಮಾನಿ ಗಣ ಕಾತುರದಿಂದ ಕಾಯುತ್ತಿದೆ.

  ಬಹುತಾರಾಗಣದ ಕೋಟಿಗೊಬ್ಬ 3 

  ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳಿರುವ ಕೋಟಿಗೊಬ್ಬ-3 ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ ನಟಿಸಿದ್ದಾರೆ. ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ರವಿ ಶಂಕರ್, ಆಶಿಕಾ ರಂಗನಾಥ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ. ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ. ಶಿವದಾಸನಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದೆ.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: