ಕಿರಿಕ್​ ಹುಡುಗಿ ರಶ್ಮಿಕಾ ಫೋಟೋಗೆ ಫಿದಾ ಆದ್ರಾ ಮೋಹಕ ತಾರೆ ರಮ್ಯಾ..?

Ramya-Rashmika Mandanna: ನಟಿ ರಮ್ಯಾ, ಕಿರಿಕ್​ ಹುಡುಗಿ ರಶ್ಮಿಕಾ ಅವರ ಟ್ವೀಟ್​ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಲಿಲ್ಲಿ ತಮ್ಮ ಲೆಟೆಸ್ಟ್ ಫೋಟೋ ಒಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅದನ್ನು ರಮ್ಯಾ ಮೆಚ್ಚಿಕೊಂಡಿದ್ದಾರೆ.

ರಶ್ಮಿಕಾ ಹಾಗೂ ರಮ್ಯಾ

ರಶ್ಮಿಕಾ ಹಾಗೂ ರಮ್ಯಾ

  • Share this:
ಮೋಹಕ ತಾರೆ ರಮ್ಯಾ ಇದ್ದಕ್ಕಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಸ್ಯಾಂಡಲ್​ವುಡ್​ನ ತಾರೆಯರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗುವ ಸೂಚನೆ ನೀಡುತ್ತಿದ್ದಾರೆ.

ರಮ್ಯಾ ಇತ್ತೀಚೆಗಷ್ಟೆ ರಾಧಿಕಾ ಪಂಡಿತ್ ಅವರ ಇನ್​ಸ್ಟಾಗ್ರಾಂ ಪೋಸ್ಟ್ ನೋಡಿ ಮೆಚ್ಚುಗೆ ಸೂಚಿಸಿದ್ದರು. ಅದನ್ನು ನೋಡಿದ ಸಿಂಡ್ರೆಲಾ ಸದಾ ನಿಮ್ಮನ್ನೇ ಆರಾಧಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಈ ನಟಿಯರ ಕಮೆಂಟ್​ಗಳನ್ನು ನೋಡಿದ ಅಭಿಮಾನಿಗಳೂ ಖುಷಿಯಾಗಿದ್ದರು.

Sandalwood actress Divya Spandana commented on Radhika Pandits photo
ರಾಧಿಕಾ ಪಂಡಿತ್​ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ರಮ್ಯಾ


ಈಗ ರಮ್ಯಾ ಕಿರಿಕ್​ ಹುಡುಗಿ ರಶ್ಮಿಕಾ ಅವರ ಟ್ವೀಟ್​ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಲಿಲ್ಲಿ ತಮ್ಮ ಲೆಟೆಸ್ಟ್ ಫೋಟೋ ಒಂದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅದನ್ನು ರಮ್ಯಾ ಮೆಚ್ಚಿಕೊಂಡಿದ್ದಾರೆ. ಆ ಫೋಟೋಗೆ ಕೆಂಪು ಬಣ್ಣದ ಹಾರ್ಟ್​ ಸಿಂಬಲ್​ ಇಮೋಜಿ ಪೋಸ್ಟ್​ ಮಾಡಿದ್ದಾರೆ.

Actress Ramya Posted heart symbol to Rashmika Mandannas latest photo in twitter    
ರಶ್ಮಿಕಾ ಫೋಟೋಗೆ ಕಮೆಂಟ್​ ಮಾಡಿದರುವ ರಮ್ಯಾ
ರಮ್ಯಾ ಮಾಡಿರುವ ಕಮೆಂಟ್ ನೋಡಿದ ರಶ್ಮಿಕಾ ಸಹ ಸಖತ್ ಪ್ರತಿಕ್ರಿಯೆ ನೀಡಿದ್ದಾರೆ ಮ್ಯಾಮ್​ ಅಂತ ರಾಗ ಎಳೆಯುತ್ತಾ ಅವರೂ ಹಾರ್ಟ್​ ಸಿಂಬಲ್​ ಅನ್ನೇ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Chandan Shetty: ಕೋಲುಮಂಡೆ ರೀಮಿಕ್ಸ್ ವಿವಾದ; ಕ್ಷಮೆಯಾಚಿಸಿ ವಿಡಿಯೋ ಡಿಲೀಟ್ ಮಾಡಿದ ರ‍್ಯಾಪರ್ ಚಂದನ್ ಶೆಟ್ಟಿ

ಇನ್ನು ಈ ಹಿಂದೆ ನಟ ಜಗ್ಗೇಶ್​ ಸಹ ರಮ್ಯಾ ಅವರ ಕುರಿತಾಗಿ ಟ್ವೀಟ್​ ಮಾಡಿದ್ದರು. ಕನ್ನಡ ಸಿನಿಮಾರಂಗದಲ್ಲಿನ ಪ್ರತಿಭಾವಂತ ನಟಿ. ಬೇಗ ಮತ್ತೆ ಸಿನಿಮಾಗಳಿಗೆ ಮರಳಲಿ ಎಂದಿದ್ದರು. ಇನ್ನು ರಮ್ಯಾ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದನ್ನು ಕಂಡ ಅಭಿಮಾನಿಗಳು ಯಾವಾಗ ಮೋಹಕ ತಾರೆ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂದು ಕಾಯುತ್ತಿದ್ದಾರೆ. ಸಿನಿಮಾ ಮಾಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ಒತ್ತಾಯಿಸುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ರಮ್ಯಾ ಅವರು ರಾಜಕೀಯಕ್ಕೆ ಪ್ರವೇಶ ಕೊಟ್ಟು ಮಂಡ್ಯ ಕ್ಷೇತ್ರದ ಸಂಸೆಯೂ ಆಗಿದ್ದರು. ನಂತರದ ಚುನಾವಣೆಯಲ್ಲಿ ಸೋತರೂ 2019ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಉಸ್ತುವಾರಿ ಹೊಣೆ ಹೊತ್ತಿದ್ದರು. ನಂತರ ದಿಢೀರ್ ಆಗಿ ನೇಪಥ್ಯಕ್ಕೆ ಸರಿದಿದ್ದರು. ರಾಜಕೀಯದಿಂದ ದೂರವಾಗಿದ್ದೂ ಅಲ್ಲದೆ ಟ್ವಿಟ್ಟರ್​ನಿಂದ ಹೊರ ಬಂದರು.

ಇದನ್ನೂ ಓದಿ: ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಅಪ್ಪ-ಅಮ್ಮನ ಬಳಿ ಬಂದ ದೀಪಿಕಾ ಪಡುಕೋಣೆ

ಫೇಸ್​ಬುಕ್​ನಲ್ಲಿ ಸಕ್ರಿಯವಾಗಿದ್ದ ಅವರು, ರಾಜಕೀಯದಿಂದ ಅಂತರ ಉಳಿಸಿಕೊಂಡಿದ್ದರು. ಆದರೆ, ಕೆಲ ದಿನಗಳ ಹಿಂದೆ ರಮ್ಯಾ ಮತ್ತೆ ರಾಜಕೀಯ ಪಥಕ್ಕೆ ಬಂದಿದ್ದಾರೆ. ಮತ್ತೆ ಟ್ವಿಟ್ಟರ್ ಪ್ರವೇಶ ಮಾಡಿದ್ದಾರೆ. ಅದೇ ನೇರ ರಾಜಕೀಯ ಮೊನಚಿನ ವಾಗ್ದಾಳಿ ಮಾಡಲು ಪ್ರಾರಂಭಿಸಿದ್ದಾರೆ. ಇದರ ಜೊತೆಜೊತೆಗೆ ಚಿತ್ರರಂಗದ ನಂಟನ್ನೂ ಉಳಿಸಿಕೊಂಡು ರಾಜಕಾರಣ ಮತ್ತು ಚಿತ್ರರಂಗ ಎರಡರಲ್ಲೂ ರಮ್ಯಾ ಬ್ಯಾಲೆನ್ಸ್ ಮಾಡುತ್ತಿರುವಂತಿದೆ.
Published by:Anitha E
First published: