ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Sandalwood Queen Ramya) ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜತೆಗೆ 'ಆಪಲ್ ಬಾಕ್ಸ್ ಸ್ಟುಡಿಯೋಸ್' (Apple Box Studios) ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ (New Movie) ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಮ್ಯಾ ಮತ್ತೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಡಾಲಿ ಧನಂಜಯ್ (Dhananjaya) ಅಭಿನಯದ ಉತ್ತರಕಾಂಡ ಸಿನಿಮಾ (Uttarakaanda Movie) ಮೂಲಕ ನಟಿ ರಮ್ಯಾ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ರಮ್ಯಾ ಪಾತ್ರವೇನು? ಈ ಚಿತ್ರದಲ್ಲಿ ಯಾರ್ಯಾರು ಕಾಣಿಸಿಕೊಳ್ತಾರೆ ಎನ್ನುವ ವಿಚಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಆಗಿದೆ.
ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಪಾತ್ರ ರಿವೀಲ್
ಬೆಳ್ಳಿತೆರೆ ಮೇಲೆ ಮತ್ತೆ ರಮ್ಯಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಹಾಸ್ಟೆಲ್ ಹುಡುಗರು ಚಿತ್ರದಲ್ಲೂ ರಮ್ಯಾ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ ಇದೀಗ ಉತ್ತರಕಾಂಡ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಡೈರೆಕ್ಟರ್ ರೋಹಿತ್ ಪದಕಿ ಫುಲ್ ಖುಷ್ ಆಗಿ ಪಾತ್ರದ ಬಗ್ಗೆ ಮಾತಾಡಿದ್ದಾರೆ.
ಮೋಹಕ ತಾರೆಯ ಸುತ್ತ ಸಿನಿಮಾ
ಉತ್ತರಕಾಂಡ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ತಮ್ಮ ಚಿತ್ರದ ನಾಯಕಿಯ ಪಾತ್ರವನ್ನೂ ಈಗ ರಿವೀಲ್ ಮಾಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತಾಡಿದ ರೋಹಿತ್ ಪದಕಿ ರಮ್ಯಾ ಮೇಡಂ ಸುತ್ತವೇ ಚಿತ್ರದ ಕಥೆ ಸುತ್ತುತ್ತದೆ ಎಂದು ಹೇಳಿದ್ದಾರೆ. ಮೋಹಕ ತಾರೆಯೇ ಸಿನಿಮಾದ ಬಿಗ್ ಹೈಲೈಟ್ ಎಂದು ರಮ್ಯಾ ಹೇಳಿದ್ದಾರೆ.
ಉತ್ತರಕಾಂಡ ಸಿನಿಮಾದಲ್ಲಿ ಶಿವಣ್ಣ
ಉತ್ತರಕಾಂಡ ಸಿನಿಮಾದಲ್ಲಿ ನಟ ಧನಂಜಯ್ ನಾಯಕ ನಟನಾಗಿ ಕಾಣಿಸಿಕೊಳ್ತಿದ್ದಾರೆ. ಪೋಸ್ಟರ್ನಲ್ಲಿ ಖಡಕ್ ಪೋಸ್ ಕೊಟ್ಟಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದ ಬಗ್ಗೆ ಮಾತಾಡಿದ ನಿರ್ದೇಶಕ ರೋಹಿತ್, ನಟ ಧನಂಜಯ್ ಜೊತೆ ಶಿವಣ್ಣ ಕೂಡ ಎಂಟ್ರಿ ಕೊಡಲಿದ್ದಾರೆ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ.
ಶಿವರಾಜ್ಕುಮಾರ್ ಪಾತ್ರವೇನು?
ಉತ್ತರಕಾಂಡ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಪಾತ್ರವೇನು ಎನ್ನುವ ಬಗ್ಗೆ ನಿರ್ದೇಶಕರು ಸುಳಿವು ಬಿಟ್ಟು ಕೊಟ್ಟಿಲ್ಲ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಅಥವಾ ಪ್ರಮುಖ ಪಾತ್ರದಲ್ಲಿ ಮಿಂಚುತ್ತಾರಾ? ಎನ್ನುವ ಸುದ್ದಿ ಹೊರಬರಬೇಕಿದೆ. ಇನ್ನು ಉತ್ತರಕಾಂಡ ಸಿನಿಮಾದಲ್ಲಿ ನಟಿ ರಮ್ಯಾ ಧನಂಜಯ್ಗೆ ನಾಯಕಿ ಆಗ್ತಾರಾ ಅಥವಾ ಶಿವಣ್ಣನಿಗೆ ಜೋಡಿ ಆಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಉತ್ತರಕಾಂಡ ಚಿತ್ರದಲ್ಲಿ ರಮ್ಯಾ ಪಾತ್ರ ಹೇಗಿರುತ್ತೆ?
ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಒಂದು ಅದ್ಭುತ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸಿನಿಮಾ ಮುಹೂರ್ತದಲ್ಲಿ ಮಾಡಿದ್ದ ಒಂದು ವಿಡಿಯೋ ನೋಡಿದ್ರೆ ಸಾಕು, ರಮ್ಯಾ ಪಾತ್ರದ ಗತ್ತು ಏನು ಅನ್ನೋದು ತಿಳಿಯುತ್ತದೆ. ವಿಶೇಷವಾಗಿ ಈ ಚಿತ್ರದಲ್ಲಿ ರಮ್ಯಾ ತಮ್ಮ ಧ್ವನಿಯಲ್ಲಿಯೇ ಕಥೆಯನ್ನ ನಿರೂಪಿಸಿದ್ದಾರೆ. ಅದು ಉತ್ತರ ಕರ್ನಾಟಕ ಭಾಷೆಯಲ್ಲಿ ಅನ್ನೋದು ಅಷ್ಟೇ ವಿಶೇಷವೇ ಆಗಿದೆ. ಉತ್ತರ ಕರ್ನಾಟಕದ ಮಂದಿಗೆ ರಮ್ಯಾ ಅಂದ್ರೆ ತುಂಬಾನೇ ಇಷ್ಟವಾಗ್ತಾರೆ.
ಇದನ್ನೂ ಓದಿ: Sanju Weds Geetha: ನಿಂತು ಹೋಗ್ತಿದ್ದ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಮರುಜೀವ ಕೊಟ್ಟ ರಮ್ಯಾ! 60 ಲಕ್ಷ ನೀಡಿದ ಮೋಹಕ ತಾರೆ
ಅಭಿಯ ಭಾನು ಈಗ ಉತ್ತರಕಾಂಡದ ಹೀರೋಯಿನ್!
ರಮ್ಯಾ ಅಭಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಇನ್ನೂ ಒಂದು ವಿಶೇಷ ಏನು ಅಂದ್ರೆ, ಈ ಚಿತ್ರದಲ್ಲೂ ರಮ್ಯಾ ಪಾತ್ರ ಉತ್ತರ ಕರ್ನಾಟಕದ ಭಾಗದ ಹುಡುಗಿಯಾಗಿ ಕಾಣಿಸಿಕೊಂಡಿದ್ರು. ಇಲ್ಲಿಯ ಭಾಷೆಯನ್ನ ರಮ್ಯಾ ಪಾತ್ರ ಮಾತನಾಡಿತ್ತು. ನೆನಪಿರಲಿ ಪ್ರೇಮ್ ಅಭಿನಯದ ಜೊತೆ ಜೊತೆಯಲಿ ಚಿತ್ರದಲ್ಲೂ ರಮ್ಯಾ ರೋಲ್ ಉತ್ತರ ಕರ್ನಾಟಕ ಭಾಗವನ್ನೇ ಪ್ರತಿನಿಧಿಸುತ್ತಿತ್ತು. ಇದೀಗ ಉತ್ತರಕಾಂಡದಲ್ಲೂ ಉತ್ತರ ಕರ್ನಾಟಕದ ಸೊಗಡನ್ನು ಹಂಚಲು ರಮ್ಯಾ ರೆಡಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ