• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Ramya: ಎಲೆಕ್ಷನ್ ಜೊತೆಗೆ ಎಲ್ಲೆಲ್ಲೂ ರಮ್ಯಾ ಮದುವೆ ಚರ್ಚೆ; ಗೌಡ್ರ ಹುಡುಗನೇ ಬೇಕು ಅಂತಿಲ್ಲ ಒಳ್ಳೆ ಹುಡುಗ ಸಾಕು ಎಂದ ಪದ್ಮಾವತಿ!

Ramya: ಎಲೆಕ್ಷನ್ ಜೊತೆಗೆ ಎಲ್ಲೆಲ್ಲೂ ರಮ್ಯಾ ಮದುವೆ ಚರ್ಚೆ; ಗೌಡ್ರ ಹುಡುಗನೇ ಬೇಕು ಅಂತಿಲ್ಲ ಒಳ್ಳೆ ಹುಡುಗ ಸಾಕು ಎಂದ ಪದ್ಮಾವತಿ!

ಸ್ಯಾಂಡಲ್​​ವುಡ್ ನಟಿ ರಮ್ಯಾ

ಸ್ಯಾಂಡಲ್​​ವುಡ್ ನಟಿ ರಮ್ಯಾ

ಗೌಡರ ಹುಡುಗನೇ ಬೇಕು ಅಂತಿಲ್ಲ. ಒಬ್ಬ ಒಳ್ಳೆ ಹುಡುಗ ಸಿಕ್ಕರೆ ನಾನು ಮದುವೆ ಆಗ್ತೀನಿ‌‌ ಎಂದು ರಮ್ಯಾ ಹೇಳಿದ್ದಾರೆ. 

 • News18 Kannada
 • 4-MIN READ
 • Last Updated :
 • Karnataka, India
 • Share this:

ವಿಧಾನಸಭೆ ಚುನಾವಣೆಗೆ (Assembly Election) ಕೆಲವೇ ದಿನಗಳು ಬಾಕಿ ಇದ್ದು, ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ರಾಜ್ಯ ರಾಜಧಾನಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಘಟಾನುಘಟಿಗಳಷ್ಟೇ ಅಲ್ಲ ಕಾಂಗ್ರೆಸ್ ನಾಯಕರೂ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ ಸ್ಟಾರ್ ಪ್ರಚಾರಕರಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (Ramya) ವಿಜಯಪುರದಲ್ಲಿ ಭರ್ಜರಿ ಪ್ರಚಾರ (Campaign) ಮಾಡಿದ್ರು. ನಟಿ ರಮ್ಯಾಗೆ ಹೋದಲೆಲ್ಲಾ ಮದುವೆ ಪ್ರಶ್ನೆ ಎದುರಾಗ್ತಿದೆ. ಮದುವೆಯಾಗಲು ನೀವೇ ಒಳ್ಳೆಯ ಹುಡುಗನನ್ನು ಹುಡುಕಿ ಎಂದು ರಮ್ಯಾ ಹೇಳ್ತಿದ್ದಾರೆ.


ಒಬ್ಬ ಒಳ್ಳೆ ಹುಡುಗ ಸಿಕ್ಕರೆ ಸಾಕು ಎಂದ ರಮ್ಯಾ


ರಮ್ಯಾ ಮದುವೆ ಯಾವಾಗ ಅನ್ನೋ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಹೋದಲೆಲ್ಲಾ ರಮ್ಯಾಗೆ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಒಬ್ಬ ಒಳ್ಳೆ ಹುಡುಗ ಸಿಕ್ಕರೆ ನಾನು ಮದುವೆ ಆಗ್ತೀನಿ‌‌ ಎಂದು ರಮ್ಯಾ ಹೇಳಿದ್ದಾರೆ. ಗೌಡ್ರ ಹುಡುಗನೇ ಬೇಕಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಟಿ, ಒಳ್ಳೆ ಹುಡುಗ ಇದ್ರೆ ಸಾಕು. ನೀವೇ ಒಳ್ಳೆ ಹುಡುಗನನ್ನು ಹುಡುಕಿ ಎಂದು ಮಾಧ್ಯಮದವರಿಗೆ ರಮ್ಯಾ ಹೇಳಿದ್ರು. ಮೊನ್ನೆ ಗೌಡ್ರ ಹುಡುಗ ಹುಡುಕಿ ಎಂದಿದ್ದ ರಮ್ಯಾ ಈಗ ಒಳ್ಳೆ ಹುಡುಗ ಇದ್ರೆ ಸಾಕು ಅಂತಿದ್ದಾರೆ.
ಕಾಂಗ್ರೆಸ್​ನಿಂದ ದೂರ ಉಳಿಯಲು ಕಾರಣ ಏನು?


ವಿಜಯಪುರದ ಎಂ.ಬಿ ಪಾಟೀಲ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಟಿ ರಮ್ಯಾ, ಕಾಂಗ್ರೆಸ್​ನಿಂದ ದೂರ ಉಳಿಯಲು ಕಾರಣ ತಿಳಿಸಿದ್ದಾರೆ. 2017ರಲ್ಲಿ ಎಐಸಿಸಿ ಸೋಷಿಯಲ್ ಮೀಡಿಯಾದ ನೇತೃತ್ವ ವಹಿಸಿದ್ದೆ. ನಂತರ ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದೆ. ಆರೋಗ್ಯ ಸುಧಾರಣೆಯಾದ ಬಳಿಕ ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯವಾಗಿರುವೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದ್ರು.


ಸುಮಲತಾ ಬಗ್ಗೆ ನೋ ಕಮೆಂಟ್ಸ್​


ಇತ್ತೀಚಿಗಷ್ಟೇ ರಮ್ಯಾ, ಮಂಡ್ಯ ಕ್ಷೇತ್ರಕ್ಕೆ ಕಾಲಿಟ್ಟ ವೇಳೆ ಅಂಬಿ ಅಭಿಮಾನಿಗಳು ನಟಿ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಅಂಬರೀಶ್ ನಿಧನರಾದಾಗ ಯಾಕೆ ಬರಲಿಲ್ಲ ಎಂದು ಕಿಡಿಕಾರಿದ್ರು. ಇದೀಗ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ಸುಮಲತಾ ಅವರು ಬಿಜೆಪಿ ಬೆಂಬಲಿಸಿರುವ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡಲ್ಲ ಎಂದಿದ್ದಾರೆ.


ಇದನ್ನೂ ಓದಿ: Ramya: ಹಸೆಮಣೆ ಏರಲು ರೆಡಿಯಾಗಿದ್ದಾರಂತೆ ರಮ್ಯಾ! ಗೌಡ್ರ ಹುಡುಗನನ್ನೇ ಮದ್ವೆಯಾಗ್ತೀನಿ ಎಂದ ಪದ್ಮಾವತಿ!


ಮೋದಿ ರಾಜಧಾನಿಗೆ ಬಂದಿದ್ದು ಸ್ವಾಗತಾರ್ಹ


ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೇಂದ್ರ ನಾಯಕರೆಲ್ಲಾ ರಾಜ್ಯಕ್ಕೆ ಆಗಮಿಸಿದ್ದಾರೆ. ನರೇಂದ್ರ ಮೋದಿ ಇಂದು ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ರೋಡ್​ ಶೋ ನಡೆಸಿದ್ರು. ಈ ಬಗ್ಗೆ ಮಾತಾಡಿದ ರಮ್ಯಾ, ನರೇಂದ್ರ ಮೋದಿ ರಾಜಧಾನಿಗೆ ಬಂದಿದ್ದು ಸ್ವಾಗತಾರ್ಹ ಎಂದ್ರು. ಅವರಿಗೂ ಬೆಂಗಳೂರು ಸ್ಥಿತಿ ಗೊತ್ತಾಗಲಿ‌. ಇಲ್ಲಿನ ಸಮಸ್ಯೆ ಬಗ್ಗೆ ಅರಿತುಕೊಳ್ಳಲಿ ಎಂದ ನಟಿ ರಮ್ಯಾ ಹೇಳಿದ್ದಾರೆ.


ಮಂಡ್ಯ ಜೊತೆ ಸಂಪರ್ಕ ಕಳೆದುಕೊಂಡಿಲ್ಲ


ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತಾಡಿದ್ದ ರಮ್ಯಾ, ಮಂಡ್ಯ ಜನರ ಪ್ರಶ್ನೆಗಳಿಗೆ ಕೊನೆಗೂ ಉತ್ತರ ನೀಡಿದ್ದಾರೆ. ಮಂಡ್ಯದ ಜನರ ಜೊತೆ ಸಂಪರ್ಕ ಕಳೆದುಕೊಂಡಿಲ್ಲ. ನಾನು ಮಂಡ್ಯಕ್ಕೆ ಆಗಾಗ ಬಂದು ಹೋಗ್ತಿದ್ದೆ. ಮೊನ್ನೆಯಷ್ಟೇ ನಿಮಿಷಾಂಭ ದೇಗುಲಕ್ಕೆ ಬಂದಿದ್ದೆ. ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ ಅಷ್ಟೇ, ಚುನಾವಣೆಗೆ ನಿಲ್ಲುವ ಯಾವುದೇ ನಿರ್ಧಾರ ನಾನು ಮಾಡಿಲ್ಲ. ಇವತ್ತು ನಾನು ಸ್ಟಾರ್ ಕ್ಯಾಂಪೇನರ್ ಆಗಿ ನಮ್ಮ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ರು.

top videos
  First published: