ಮತ್ತೆ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಿರುವ ಮೋಹಕತಾರೆ ರಮ್ಯಾ (Sandalwood Queen Ramya) ಇನ್ನೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ ಯಾಕೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಮದುವೆ (Marriage) ಬಗ್ಗೆ ಮಾತ್ರ ನಟಿ ರಮ್ಯಾ (Ramya) ಇದುವರೆಗೂ ಎಲ್ಲೂ ಮಾತಾಡಿರಲಿಲ್ಲ. ರಮ್ಯಾಗೆ 40 ವರ್ಷವಾಗಿದ್ರೂ ಮದುವೆ ಆಗಿಲ್ಲ ಬ್ಯಾಚುಲರ್ ಆಗಿಯೇ ಬದುಕು ನಡೆಸುತ್ತಿದ್ದಾರೆ. ತಾಯಿ ಜೊತೆ ಇರುವ ರಮ್ಯಾ ತನ್ನ ಮದುವೆ ಬಗ್ಗೆ ಯಾಕೆ ಯೋಚಿಸಿಲ್ಲ , ಮೋಹಕ ತಾರೆ ಒಂಟಿಯಾಗಿರಲು ನಿರ್ಧರಿಸಿ ಬಿಟ್ಟಿದ್ದಾರಾ? ಅಥವಾ ಮದುವೆ ಆಗ್ತಾರಾ ಎನ್ನುವ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ.
ಮೇಡಂ ಮದುವೆ ಯಾವಾಗ?
ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದ ರಮ್ಯಾ ಮಂಡ್ಯ ಜನರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮೇಡಂ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ನಗು ನಗುತ್ತಾ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಉತ್ತರ ಕೊಟ್ಟಿದ್ದಾರೆ.
ಗೌಡರ ಹುಡುಗ ಸಿಕ್ತಾನೆ ಅಂದ್ರೆ ಹುಡುಕಿ
ಮೊದಲು ನನಗೆ ಹುಡುಗನನ್ನು ಹುಡುಕಿ, ನನಗೆ ಗೌಡರ ಹುಡುಗ ಸಿಕ್ತಾನೆ ಅಂದ್ರೆ ಹುಡುಕಿ, ನನಗೂ ನೋಡಿ ನೋಡಿ ಸಾಕಾಗಿದೆ. ಬೇಕಿದ್ದರೆ ನೀವೇ ಸ್ವಯಂವರ ಏರ್ಪಾಟು ಮಾಡಿ ಮದುವೆ ಆಗ್ತಿನಿ ಎಂದು ನಟಿ ರಮ್ಯ ಹೇಳಿದ್ದಾರೆ.
ನಾನು ಯಾವಾಗಲೂ ಗೌಡ್ತಿನೆ
ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಖಾಲಿ ಮಾಡಿದ್ರು ಎನ್ನುವ ಆರೋಪಕ್ಕೂ ಕೂಡ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಹಿಂದೆ ಮಂಡ್ಯ ಜನಕ್ಕೆ ತೊಟ್ಟಿ ಮನೆ ಮಾಡಿ ಇಲ್ಲೆ ಇರ್ತಿನಿ ಎಂಬ ಭರವಸೆ ನೀಡಿದ್ದೆ. ಮಂಡ್ಯದ ಗೋಪಾಲಪುರದಲ್ಲಿ ನಮ್ಮ ತಾತನ ತೊಟ್ಟಿ ಮನೆ ಇದೆ. ನಾನೊಂದು ತೊಟ್ಟಿ ಮನೆ ಮಾಡಬೇಕು ಎಂಬ ಆಸೆ ಈಗಲೂ ಇದೆ, ಆದ್ರೆ ಅದು ಯಾವಾಗ ಈಡೇರುತ್ತೆ ಗೊತ್ತಿಲ್ಲ. ನಾನು ಯಾವಾಗಲೂ ಗೌಡ್ತಿನೆ ಇದನ್ನೂ ಯಾರಿಂದಲೂ ಕಿತ್ತುಕೊಳ್ಳಲು ಆಗಲ್ಲ ಎಂದಿದ್ದಾರೆ.
ಈ ಜನರ ಜೊತೆ ಫ್ಯಾಮಿಲಿ ಸಂಬಂಧವಿದೆ
ನಮ್ಮ ತಾಯಿ ಊರು ಕೂಡ ಮಂಡ್ಯ, ನಾನು ಕಷ್ಟದಲ್ಲಿದ್ದಾಗ ಮಂಡ್ಯ ಜನರು ನನ್ನ ಜೊತೆ ಇದ್ದು ಸಪೋರ್ಟ್ ಮಾಡಿದ್ದಾರೆ. ಅವ್ರ ಮೇಲೆ ಇರೋ ಗೌರವ ಯಾವತ್ತು ಕಡಿಮೆ ಆಗಲ್ಲ. ಬರೀ ರಾಜಕೀಯ ಅಲ್ಲ ಈ ಊರಿನಲ್ಲಿ ನನಗೆ ಫ್ಯಾಮಿಲಿಯ ಸಂಬಂಧವಿದೆ. ಇದನ್ನ ರಾಜಕೀಯ ಮಾಡೋದು ಬೇಡ. ಮಂಡ್ಯ ಜನರು ತುಂಬ ಬುದ್ದಿವಂತರು, ಯಾರು ಏನು ಅನ್ನೋದು ಅವ್ರಿಗೆ ಗೊತ್ತಿದೆ ಎಂದು ರಮ್ಯಾ ಹೇಳಿದ್ದಾರೆ.
ರಫೇಲ್ ಜೊತೆ ಹಸೆಮಣೆ ಏರಲಿಲ್ಲ ರಮ್ಯಾ
ಪೋರ್ಚುಗಲ್ ಉದ್ಯಮಿ ರಫೇಲ್ ಜೊತೆ ರಮ್ಯಾ ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ರಮ್ಯಾ ಕೂಡ ರಫೇಲ್ ಜೊತೆ ಅನೇಕ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿತ್ತು. ರಮ್ಯಾ ತಾಯಿ ಕೂಡ ಮಗಳ ಮದುವೆ ಬಗ್ಗೆ ಸುಳಿವು ಕೊಟ್ಟಿದ್ರು ಕೆಲ ದಿನಗಳ ಬಳಿಕ ರಫೇಲ್ ಹಾಗೂ ರಮ್ಯಾ ಮದುವೆ ಸುದ್ದಿ ಮರೆಯಾಗಿ ಹೋಯ್ತು.
ಇದನ್ನೂ ಓದಿ: Ramya: ಅಂಬಿ ಅಂತ್ಯಸಂಸ್ಕಾರಕ್ಕೆ ರಮ್ಯಾ ಏಕೆ ಬಂದಿರಲಿಲ್ಲ? ಮಂಡ್ಯ ಜನರಿಗೆ ಅಸಲಿ ಸತ್ಯ ಹೇಳಿದ ಪದ್ಮಾವತಿ!
ನನ್ನ ಸೋಲ್ ಮೇಟ್ ಸತ್ತು ಹೋಗಿರಬಹುದು
ನಟಿ ಮದುವೆ ಬಗ್ಗೆ ಇತ್ತೀಚೆಗೆ ಮಾಡಿರುವ ಪೋಸ್ಟ್ನಲ್ಲಿ ನನ್ನ ಸೋಲ್ ಮೇಟ್ ಸತ್ತು ಹೋಗಿರಬಹುದು ಎಂದು ಹೇಳಿದ್ದಾರೆ. ಅರೆ ಮದುವೆ ಮಾತಾಡಿದ್ರೆ ಸಾಯುವ ಮಾತಾಡುತ್ತಾರಲ್ಲಾ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ