ರಮ್ಯಾ ದಿವ್ಯ ಸ್ಪಂದನ (Ramya Divya Spandana).. ಈ ಹೆಸರು ಕೇಳಿದ ತಕ್ಷಣ ಕನ್ನಡ (Kannada) ಸಿನಿ ರಸಿಕರ ಮನಸ್ಸು ಕುಣಿಯುತ್ತದೆ. ತಮ್ಮ ಮೋಹಕ ರೂಪ, ಮನಮೋಹಕ ಅಭಿನಯದಿಂದ (Acting) ಕನ್ನಡ ಕಲಾ ರಸಿಕರ ಮನಸೂರೆಗೊಂಡ ಮೋಹಕ ತಾರೆ ರಮ್ಯಾ ಎಲ್ಲಿ ಹೋದ್ರು ಅಂತ ಮನಸ್ಸು ಹುಡುಕುತ್ತದೆ. ಸಿನಿಮಾ (Cinema) ಬಿಟ್ಟು ರಾಜಕೀಯದಲ್ಲಿ (Politics) ಬ್ಯುಸಿ ಆಗಿದ್ದ ರಮ್ಯಾ, ಸಂಸದೆಯಾಗಿ (MP) ಸಂಸತ್ಗೆ (Parliament) ಹೋಗಿ ಬಂದವರು. ಕಾಂಗ್ರೆಸ್ ಪಕ್ಷದ (Congress Party) ಸಾಮಾಜಿಕ ಜಾಲತಾಣಗಳ (Social Media) ಮುಖ್ಯಸ್ಥೆಯಾಗಿ, ಕಾಂಗ್ರೆಸ್ ಪಕ್ಷದ ಯುವ ನಾಯಕಿಯಾಗಿ (Youth Leader) ದೇಶದ ಗಮನ ಸೆಳೆದವರು. ರಾಜಕೀಯದಲ್ಲಿ ರಮ್ಯಾ ವಿರೋಧಿಸುವವರು ಸಾಕಷ್ಟು ಮಂದಿಯಿದ್ದಾರೆ. ಆದರೆ ಸಿನಿಮಾದಲ್ಲಿ ಎಲ್ಲರೂ ರಮ್ಯಾ ಅಭಿಮಾನಿಗಳೇ (Fans). ರಮ್ಯಾ ಎಲ್ಲೇ ಪ್ರತ್ಯಕ್ಷವಾಗಲಿ, ಸೋಶಿಯಲ್ ಮೀಡಿಯಾಗಳಲ್ಲಿ ಲೈವ್ (Live) ಬರಲಿ ಅಭಿಮಾನಿಗಳು ಕೇಳೋದು ಯಾವಾಗ ಸಿನಿಮಾಕ್ಕೆ ವಾಪಸ್ ಆಗ್ತೀರಾ? ಯಾವಾಗ ನಿಮ್ಮ ಹೊಸ ಸಿನಿಮಾ ಬರುತ್ತೆ? ಸಿನಿಮಾದಲ್ಲಿ ನಿಮ್ಮ ಅಭಿನಯ ನೋಡಿ ಕಣ್ತು ತುಂಬಿಕೊಳ್ಳೋದು ಯಾವಾಗ? ಅಂತ ಹತ್ತು ಹಲವು ಪ್ರಶ್ನೆ. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಸ್ಯಾಂಡಲ್ವುಡ್ ಕ್ವೀನ್ (Sandalwood Queen) ರಮ್ಯಾ ಅವರೇ ಖುದ್ದಾಗಿ ಉತ್ತರ ನೀಡಿದ್ದಾರೆ. ಈ ಬಗ್ಗೆ ಎಕ್ಸ್ಕ್ಲೂಸಿವ್ (Exclusive) ಮಾಹಿತಿ ಇಲ್ಲಿದೆ ಓದಿ…
ರಮ್ಯಾಗೆ ಪ್ರಶಸ್ತಿ ನೀಡಿ ಗೌರವಿಸಿದ ಚಿತ್ತಾರ
ಚಿತ್ತಾರ ಸಿನಿಮಾ ಮಾಸಪತ್ರಿಕೆ 13 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಆಯೋಜಿಸಿತ್ತು. ಚಿತ್ರರಂಗದ ಹಿರಿ ಕಿರಿಯ ನಟ, ನಟಿಯರು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ಕಥೆಗಾರರು ಸೇರಿದಂತೆ ವಿವಿಧ ವಿಭಾಗದಲ್ಲಿ ಸಾಧಕರನ್ನು ಗುರುತಿಸಿ, ಸನ್ಮಾನಿಸಿದೆ. ಇದೇ ಕಾರ್ಯಕ್ರಮದಲ್ಲಿ ರಮ್ಯಾ ಅವರನ್ನು ಸನ್ಮಾನಿಸಿದ ಚಿತ್ತಾರ, ‘ಚಿತ್ತಾರ ಸ್ಟಾರ್ ಅಚೀವರ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ: Rakshit Shetty: ಸ್ಯಾಂಡಲ್ವುಡ್ ಕ್ವೀನ್ ಬಗ್ಗೆ ಶೆಟ್ರು ಹಿಂಗ್ಯಾಕ್ ಅಂದ್ರು! ಏನಿಲ್ಲ ಏನಿಲ್ಲ ಅಂತಾನೇ ಚಮಕ್ ಕೊಟ್ರಾ?
ಚಿತ್ರರಂಗಕ್ಕೆ ಶೀಘ್ರವೇ ಕಮ್ ಬ್ಯಾಕ್ ಮಾಡ್ತಾರಂತೆ ರಮ್ಯಾ!
ಹೌದು, ಚಿತ್ತಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಮ್ಯಾ ಈ ಬಗ್ಗೆ ಖುದ್ದಾಗಿ ತಾವೇ ಮಾತನಾಡಿದ್ದಾರೆ. ನನ್ನ ಅಭಿಮಾನಿಗಳು ಎಲ್ಲರೂ ನೀವು ಸಿನಿಮಾಕ್ಕೆ ಮತ್ತೆ ಯಾವಾಗ ಬರ್ತೀರಿ ಅಂತ ಕೇಳುತ್ತಿದ್ದಾರೆ. ನಾನು ಶೀಘ್ರವೇ ಸಿನಿಮಾಕ್ಕೆ ಬರ್ತೀನಿ ಎಂಬ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳಂತೂ ಸಂತಸಗೊಂಡಿದ್ದಾರೆ.
ಪುನೀತ್ ಜೊತೆ ಸಿನಿಮಾ ಮಾಡಬೇಕಿತ್ತು ರಮ್ಯಾ
ಸ್ಯಾಂಡಲ್ವುಡ್ನ ಹಿಟ್ ಜೋಡಿಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ನಟಿ ರಮ್ಯಾ ಅವರ ಜೋಡಿಯೂ ಒಂದು. ತಮ್ಮ ಮೊದಲ ಚಿತ್ರ ಅಭಿಯಲ್ಲಿ ರಮ್ಯಾ ಪುನೀತ್ ಜೊತೆ ನಟಿಸಿದ್ದರು. ಅದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಬಳಿಕ ಹಿಟ್ ಎನಿಸಿಕೊಂಡ ಆ ಜೋಡಿ, ಆಕಾಶ್, ಅರಸು ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. ಅದಾದ ಮೇಲೆ ರಮ್ಯಾ ಹಾಗೂ ಪುನೀತ್ ತೆರೆ ಮೇಲೆ ಒಂದಾಗಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜ್ಕುಮಾರ್ ಜೊತೆ ರಮ್ಯಾ ಸಿನಿಮಾದಲ್ಲಿ ನಟಿಸಬೇಕಿತ್ತು.
ಪುನೀತ್ ಜೊತೆಗಿನ ಚಿತ್ರದ ಬಗ್ಗೆ ಹೇಳಿದ್ದ ರಮ್ಯಾ
ಹೌದು, ಈ ಬಗ್ಗೆ ಖುದ್ದು ನಟಿ ರಮ್ಯಾ ಅವರೇ ಹೇಳಿದ್ದಾರೆ. ಪುನೀತ್ ನಿಧನರಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು. ಅಷ್ಟರಲ್ಲೇ ಅವರ ಅಕಾಲಿಕ ಮರಣ ನನಗೆ ಆಘಾತ ತಂದಿದೆ ಅಂತ ರಮ್ಯಾ ಭಾವುಕರಾಗಿ ನುಡಿದಿದ್ದರು.
ಇದನ್ನೂ ಓದಿ: Ramya: ಮೋಹಕ ತಾರೆ ರಮ್ಯಾ ಜೊತೆ ಪೋಸ್ ಕೊಟ್ಟ ಯುವಕನ್ಯಾರು? ಸ್ಯಾಂಡಲ್ವುಡ್ನಲ್ಲಿ ಬೇರೆಯದ್ದೇ ಗುಸಗುಸು!
ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಾ ರಮ್ಯಾ?
ಹೀಗೊಂದು ಸುದ್ದಿ ಗಾಂಧಿನಗರದ ಗಲ್ಲಿಯೊಳಗಿಂದ ಕೇಳಿ ಬರ್ತಿದೆ. ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಪ್ರೀತಿ ಇದ್ಯಂತೆ, ಅವರಿಬ್ಬರು ಮದುವೆ ಆಗ್ತಾರಂತೆ ಅಂತ ಗಾಸಿಪ್ಗಳು ಓಡಾಡುತ್ತಿದ್ದವು. ಆದ್ರೀಗ ರಮ್ಯಾ ಕಮ್ ಬ್ಯಾಕ್ ಮಾಡೋದು ರಕ್ಷಿತ್ ಶೆಟ್ಟಿ ಸಿನಿಮಾದಲ್ಲೇ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಇದು ಸತ್ಯವೋ, ಸುಳ್ಳೋ ಅನ್ನೋದು ಗೊತ್ತಿಲ್ಲ. ಆದ್ರೆ ಖುದ್ದು ಅವರೇ ಹೇಳ್ತಿರೋದ್ರಿಂದ ರಮ್ಯಾ ಶೀಘ್ರವೇ ಸಿನಿಮಾಕ್ಕೆ ಬರ್ತಾರೆ ಅನ್ನೋದಂತೂ ಕನ್ಫರ್ಮ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ