ಗರ್ಭಿಣಿ ಆನೆ ಹತ್ಯೆಗೆ ನ್ಯಾಯ ಕೊಡಿಸೋಕೆ ಕೈ ಜೋಡಿಸಿದ ನಟಿ ರಮ್ಯಾ; ಫೇಸ್​ಬುಕ್​ಗೆ ಕಂಬ್ಯಾಕ್​​

2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಮ್ಯಾ ಅಜ್ಞಾತ ವಾಸಕ್ಕೆ ತೆರಳಿದ್ದರು. ಅವರು ಫೇಸ್​ಬುಕ್​ ಖಾತೆ, ಟ್ವಿಟ್ಟರ್​ ಖಾತೆ ಕೂಡ ಡಿ-ಆ್ಯಕ್ಟಿವೇಟ್​ ಆಗಿತ್ತು. ಈಗ ಅವರು ಮತ್ತೆ ಕಂಬ್ಯಾಕ್​ ಮಾಡಿದ್ದಾರೆ.

ರಮ್ಯಾ

ರಮ್ಯಾ

 • Share this:
  ನಟಿ ಹಾಗೂ ರಾಜಕಾರಣಿ ರಮ್ಯಾ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್​ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಇವರೇ ಹೊತ್ತಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲಿನ ನಂತರ ರಮ್ಯಾ ಎಲ್ಲ ಸೋಷಿಯಲ್​ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು. ಈಗ ರಮ್ಯಾ ಫೇಸ್​ಬುಕ್​ಗೆ ಕಂಬ್ಯಾಕ್​ ಮಾಡಿದ್ದಾರೆ.

  ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಾಣಿ ಪ್ರಿಯರು ಈ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಂಡ ಕಾರಿದ್ದಾರೆ. ಇದಕ್ಕೆ ರಮ್ಯಾ ಮನಸ್ಸು ಕೂಡ ಮರುಗಿದೆ. ಹೀಗಾಗಿ, ಅವರು ಫೇಸ್​ಬುಕ್​ಗೆ ಕಂಬ್ಯಾಕ್​ ಮಾಡಿದ್ದು ಆನೆ ಕುರಿತ ಪೋಸ್ಟ್​ ಮೂಲಕ.

  ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದವರ ವಿರುದ್ಧ  ಅಪರಾಧ ಪ್ರಕರಣ ಹೊರಿಸಬೇಕು ಎನ್ನುವ ಕುರಿತು ಆನ್​ಲೈನ್​ನಲ್ಲಿ ಆಂದೋಲನ ನಡೆಯುತ್ತಿದೆ. ಈ ಆಂದೋಲನಕ್ಕೆ ಸಹಿ ಹಾಕುವಂತೆ ರಮ್ಯಾ ಕೋರಿದ್ದಾರೆ. ರಮ್ಯಾ ಪೋಸ್ಟ್​ ನೋಡಿ ಅವರ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ಅನೇಕರು ಅಭಿಮಾನಿಗಳು ಇಷ್ಟು ದಿನ ಎಲ್ಲಿದ್ದಿರಿ ಎಂದು ಪ್ರಶ್ನೆ ಮಾಡಿದ್ದಾರೆ.  2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಮ್ಯಾ ಅಜ್ಞಾತ ವಾಸಕ್ಕೆ ತೆರಳಿದ್ದರು. ಅವರು ಫೇಸ್​ಬುಕ್​ ಖಾತೆ, ಟ್ವಿಟ್ಟರ್​ ಖಾತೆ ಕೂಡ ಡಿ ಆಕ್ಟಿವೇಟ್​ ಆಗಿತ್ತು. ಮೇ 29ರಂದು ರಮ್ಯಾ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದೇ ಕೊನೆ. ನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಮಧ್ಯೆ ಅವರ ಮದುವೆ ವಿಚಾರ ಕೂಡ ಭಾರೀ ಸುದ್ದಿಯಾಗಿತ್ತು.
  First published: