• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Actress Ramya: ಸುಲಭಕ್ಕೆ ಸಿಕ್ಕಿದ್ದಲ್ಲ ಸ್ಯಾಂಡಲ್​ವುಡ್ ಕ್ವೀನ್ ಪಟ್ಟ! 20 ವರ್ಷಗಳ ರಮ್ಯಾ ಸಿನಿ ಜರ್ನಿ

Actress Ramya: ಸುಲಭಕ್ಕೆ ಸಿಕ್ಕಿದ್ದಲ್ಲ ಸ್ಯಾಂಡಲ್​ವುಡ್ ಕ್ವೀನ್ ಪಟ್ಟ! 20 ವರ್ಷಗಳ ರಮ್ಯಾ ಸಿನಿ ಜರ್ನಿ

ರಮ್ಯಾ

ರಮ್ಯಾ

ಸ್ಯಾಂಡಲ್​ವುಡ್​ ಕ್ವೀನ್ ಆಗಿರುವ ಮೋಹಕತಾರೆ ರಮ್ಯಾಗೆ ಈ ಪಟ್ಟ ಸುಲಭವಾಗಿ ಸಿಕ್ಕಿಲ್ಲ. 20 ವರ್ಷಗಳ ತನ್ನ ಸಿನಿ ಕೆರಿಯರ್​ನಲ್ಲಿ ರಮ್ಯಾ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಸಿನಿಮಾ ಸಕ್ಸಸ್ ಜೊತೆ ಫೇಲ್ಯೂರ್​ಗಳು ಕೂಡ ರಮ್ಯಾಗೆ ಪಾಠ ಕಲಿಸಿವೆಯಂತೆ

  • News18 Kannada
  • 2-MIN READ
  • Last Updated :
  • Karnataka, India
  • Share this:

ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Sandalwood Queen Ramya) ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಜತೆಗೆ 'ಆಪಲ್ ಬಾಕ್ಸ್ ಸ್ಟುಡಿಯೋಸ್' ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ (New Movie) ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಮೋಹಕ ತಾರೆ ರಮ್ಯಾ ಜರ್ನಿ ಆರಂಭಿಸಿ 20 ವರ್ಷ ಕಳೆದಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ರಮ್ಯಾ ಈಗಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಮೆರೆಯುತ್ತಿದ್ದಾರೆ.  ವೀಕೆಂಡ್ ವಿತ್​ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿ ಏರಿದ ರಮ್ಯಾ , ತನ್ನ ಮನದಾಳದ ಮಾತು ಹಂಚಿಕೊಂಡಿದ್ದಾರೆ. 


ಸುಲಭಕ್ಕೆ ಸಿಕ್ಕಿದ್ದಲ್ಲ ಸ್ಯಾಂಡಲ್​ವುಡ್ ಕ್ವೀನ್ ಪಟ್ಟ


ಸ್ಯಾಂಡಲ್​ವುಡ್​ ಕ್ವೀನ್ ಆಗಿರುವ ಮೋಹಕತಾರೆ ರಮ್ಯಾಗೆ ಈ ಪಟ್ಟ ಸುಲಭವಾಗಿ ಸಿಕ್ಕಿಲ್ಲ. 20 ವರ್ಷಗಳ ತನ್ನ ಸಿನಿ ಕೆರಿಯರ್​ನಲ್ಲಿ ರಮ್ಯಾ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಸಿನಿಮಾ ಸಕ್ಸಸ್ ಜೊತೆ ಫೇಲ್ಯೂರ್​ಗಳು ಕೂಡ ರಮ್ಯಾಗೆ ಪಾಠ ಕಲಿಸಿವೆಯಂತೆ. ಕನ್ನಡದ ಸೂಪರ್​ ಸ್ಟಾರ್​ಗಳ ಜೊತೆ ತೆರೆ ಮೇಲೆ ಮಿಂಚಿದ ರಮ್ಯಾ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.


ರಮ್ಯಾ


ಚಂದನವನದಲ್ಲಿ ರಮ್ಯ ಚೈತ್ರ ಕಾಲ


2003 ರಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಂಡಿತ್ತು. ಬಳಿಕ  ರಮ್ಯಾ ಮಾಡಿ ಎಕ್ಸ್​​ಕ್ಯೂಸ್​ ಮಿ ಸಿನಿಮಾ ಕೂಡ ಸೂಪರ್ ಹಿಟ್​ ಆಗ್ತಿದ್ದಂತೆ ಚಂದನವನದಲ್ಲಿ ಚೆಂದುಳ್ಳಿ ಚೆಲುವೆಗೆ ಡಿಮ್ಯಾಂಡ್​ ಹೆಚ್ಚಾಯ್ತು. ಸ್ಯಾಂಡಲ್​ವುಡ್​ನಲ್ಲಿ ರಮ್ಯ ಚೈತ್ರಕಾಲ ಶುರುವಾಯ್ತು.


ಸೂಪರ್ ಹಿಟ್ ಸಿನಿಮಾ ಕೊಟ್ಟ ರಮ್ಯಾ


ಆಕಾಶ್, ಅಮೃತಧಾರೆ, ಆದಿ, ಸೇವಂತಿ ಸೇವಂತಿ, ಲಕ್ಕಿ, ಮುಸ್ಸಂಜೆ ಮಾತು, ಜೊತೆ ಜೊತೆಯಲಿ, ಸಂಜು ವೆಡ್ಸ್​ ಗೀತಾ ಸೇರಿದಂತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿ ರಮ್ಯಾ ನಟಿಸಿದ್ದಾರೆ. ಎರಡು ದಶಕಗಳಿಂದ ಸ್ಯಾಂಡಲ್​ವುಡ್​ ಕ್ವೀನ್​ ಆಗಿದ್ದಾರೆ. ಬಣ್ಣದ ಲೋಕಕ್ಕೆ ಬ್ರೇಕ್​ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿರುವ ರಮ್ಯಾಗೆ ಈಗಲೂ ಅಪಾರ ಅಭಿಮಾನಿ ಬಳಗವಿದೆ.


ನಟಿ ರಮ್ಯಾ ಭಾವುಕ


ವೀಕೆಂಡ್​ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ತನ್ನ ಸಿನಿ ಜರ್ನಿ ನೆನೆದು ಕಣ್ಣೀರು ಹಾಕಿದ್ದಾರೆ.  ನನ್ನ ಹಾರ್ಟ್ ಫುಲ್ ಆಗಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ. ಪ್ರತಿ ಸಿನಿಮಾ ಕೂಡ ಸ್ಪೆಷಲ್ ಎಂದು ರಮ್ಯಾ ಹೇಳಿದ್ದಾರೆ. ಎಲ್ಲಾ ನಿರ್ದೇಶಕರು, ನಟರ ಬಗ್ಗೆ ಒಳ್ಳೆಯ ಮಾತುಗಳನ್ನು ಹಾಡಿದ್ದಾರೆ.


Kannada Actress Ramya Film Journey Untold Story Uttara Karnataka


ರಮ್ಯಾ ಮುಡಿಗೇರಿದ ಪ್ರಶಸ್ತಿಗಳು


ಉದಯ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2005 (ಅಮೃತಧಾರೆ)


ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2006 (ತನನಂ ತನನಂ)


ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2008 (ಮಸ್ಸಂಜೆ ಮಾತು)


ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2010 ( ಜಸ್ಟ್ ಮಾತ್ ಮಾತಲ್ಲಿ)


ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ತ್ಯುತ್ತಮ ನಟಿ - 2011 (ಸಂಜು ವೇಡ್ಸ್ ಗೀತಾ)


ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2011 (ಸಂಜು ವೇಡ್ಸ್ ಗೀತಾ)


ಫಿಲ್ಮ್ ಫೇರ್ ಪ್ರಶಸ್ತಿ - ಅತ್ತ್ಯುತ್ತಮ ನಟಿ- 2012(ಸಿದ್ಲಿಂಗು)


ಇದನ್ನೂ ಓದಿ: Mahesh Babu: ಮಹೇಶ್ ಬಾಬು SSMB 28 ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಹಬ್ಬ ಆಚರಿಸಲು ಸಜ್ಜಾದ ಪ್ರಿನ್ಸ್ ಫ್ಯಾನ್ಸ್


ರಾಜಕೀಯ ಕ್ಷೇತ್ರದಲ್ಲಿ ರಮ್ಯಾ  

top videos


    ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.

    First published: