Actress Ramya: ಹಬ್ಬದ ದಿನ ಸಿಹಿ ಸುದ್ದಿ ಕೊಟ್ಟೇ ಬಿಟ್ರು ರಮ್ಯಾ! ಚಿತ್ರರಂಗಕ್ಕೆ ಕಂ ಬ್ಯಾಕ್

Actress Ramya: ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ನಟಿ ತಮ್ಮ ಸಿಹಿ ಸುದ್ದಿಯನ್ನು ಗಣೇಶ ಹಬ್ಬದ ದಿನ ಎನೌನ್ಸ್ ಮಾಡಿದ್ದಾರೆ.

ರಮ್ಯಾ

ರಮ್ಯಾ

  • Share this:
ಸ್ಯಾಂಡಲ್​ವುಡ್ ನಟಿ ರಮ್ಯಾ (Ramya) ಗಣೇಶನ ಹಬ್ಬದ (Ganesha Chathurthi) ದಿನ ಸಿಹಿಸುದ್ದಿ (Good News) ಕೊಡುವುದಾಗಿ ಹೇಳಿದ್ದರು. ಅವರ ಅಭಿಮಾನಿಗಳೂ ಈ ಬಗ್ಗೆ ಸಿಕ್ಕಾಪಟ್ಟೆ ಕುತೂಹಲದಲ್ಲಿದ್ದರು (Curiosity). ಸ್ಯಾಂಡಲ್​ವುಡ್​ನ (Sandalwood) ಟಾಪ್, ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ ಅವರು ನಂತರದಲ್ಲಿ ರಾಜಕೀಯದತ್ತ ಹೊರಳಿದ್ದರು. ನಂತರ ರಾಜಕೀಯದಿಂದಲೂ  (Politics) ದೂರವಿದ್ದು, ಸಿನಿಮಾದಿಂದಲೂ ದೂರವಿದ್ದು ತಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ಕೇಂದ್ರೀಕರಿಸಿದ್ದರು. ಈಗ ಮತ್ತೆ ನಟಿ ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ (Industry) ಬರುತ್ತಿದ್ದಾರೆ. ಆದರೆ ಈ ಬಾರಿ ಹೀರೋಯಿನ್ ಆಗಿ ಅಲ್ಲ. ಇಲ್ಲೊಂದು ವಿಶೇಷವಿದೆ.

ನಿರ್ಮಾಪಕಿಯಾಗುತ್ತಿದ್ದಾರೆ ರಮ್ಯಾ

ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಆದ ನಟಿ ರಮ್ಯಾ ರಾಜಕೀಯದಲ್ಲಿ ಅಂತಹ ಯಶಸ್ಸೇನೂ ಕಾಣಲಿಲ್ಲ. ಆದರೆ ಈಗ ನಿರ್ಮಾಪಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಹೊಸ ಪ್ರೊಡಕ್ಷನ್ ಸ್ಟುಡಿಯೋಸ್ ಮೂಲಕ ನಟಿ ಸಿನಿಮಾಗೆ ಬಂಡವಾಳ ಹೂಡಲು ಸಿದ್ಧರಾಗಿದ್ದಾರೆ.

ಆ್ಯಪಲ್ ಬಾಕ್ಸ್ ಸ್ಟುಡಿಯೋಸ್

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ದುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂತಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ನಿರ್ಮಾಂಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯಫಸ್​ನ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ.





ಏನಿದು ಆಪಲ್ ಬಾಕ್ಸ್? ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕತವಾದ ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲಗ್ ಬಾಕ್ಸ್ ಜೊತೆಗಿದೆ. ಸೆಟ್​​ನಲ್ಲಿ ಕೂಡಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾದ ಅಥವಾ ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸಾದಾ ಸ್ಫೂರ್ಥಿಯಾಗಿ ನನ್ನನ್ನು ಪ್ರೇರೇಪಿಸಿದೆ ಎಂದಿದ್ದಾರೆ.
Published by:Divya D
First published: