Happy Birthday Ramya: ಸ್ಯಾಂಡಲ್​ವುಡ್ ಪದ್ಮಾವತಿಗೆ ವಯಸ್ಸಿನ ಹಂಗಿಲ್ಲ, ಎವರ್​ಗ್ರೀನ್ ಬ್ಯೂಟಿ ರಮ್ಯಾ ಹುಟ್ಟುಹಬ್ಬ ಸಂಭ್ರಮ

Ramya Birth day : ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಅನಭಿಷಕ್ತ ನಾಯಕಿಯಾಗಿ ಆಳಿ ಮೋಹಕತಾರೆಯಾಗಿ ಕನ್ನಡಿಗರ ಮನಸ್ಸು ಗೆದ್ದ ಚೆಲುವೆ ರಮ್ಯ.. ಇಂತಹ ಮುದ್ದುಮುಖದ ಚೆಲುವೆಗೆ ಇಂದು ಹುಟ್ಟುಹಬ್ಬದ ಸಂಭ್ರಮ

ರಮ್ಯಾ

ರಮ್ಯಾ

 • Share this:
  ವಯಸ್ಸು 39 ಆದ್ರೂ ಯಾವ ಟೀನೇಜ್(Teenage) ಹುಡುಗಿಯರಿಗೂ (Girls)ಇಲ್ಲದಷ್ಟು ಸೌಂದರ್ಯ(Beauty).. ಸಿನಿಮಾರಂಗ(Film Industry) ಬಿಟ್ಟು ಹೊರ ಹೋಗಿದ್ದರು ಈಗಲೂ ಅಭಿಮಾನಿಗಳ(Fans) ಹೃದಯದ ಅರಸಿ.. ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಅನಭಿಷಕ್ತ ನಾಯಕಿಯಾಗಿ ಆಳಿ ಮೋಹಕತಾರೆಯಾಗಿ ಕನ್ನಡಿಗರ(Kannadiga) ಮನಸ್ಸು ಗೆದ್ದ ಚೆಲುವೆ ರಮ್ಯ.. ಇಂತಹ ಮುದ್ದುಮುಖದ ಚೆಲುವೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಿ ಬದುಕಿನ ಹೊಸ ತಿರುವಿನಲ್ಲಿ ರಾಜಕೀಯದತ್ತ ಒಲವು ಹರಿದು, ಚೊಚ್ಚಲ ಸ್ಪರ್ಧೆಯಲ್ಲಿಯೇ ಮಂಡ್ಯ ಜನರ ದಿವ್ಯಸ್ಪಂದನೆ ಪಡೆದುಕೊಂಡವರು ರಮ್ಯಾ..

  ಸದ್ಯಕ್ಕೆ ಎಲ್ಲಿದ್ದಾರೆ ಮೋಹಕ ತಾರೆ..?

  ಸಿನಿಮಾಗಳಲ್ಲಿ ಯಶಸ್ಸು ಕಂಡ ರಮ್ಯಾ ರಾಜಕೀಯದಲ್ಲಿ ಅಷ್ಟಾಗಿ ಹೆಸರು ಮಾಡಲಿಲ್ಲ. ಹಾಗಾಗಿ ಅವರು ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಾರಾ ಎಂಬ ಪ್ರಶ್ನೆ ಕಾಡಿತ್ತು. ಇದ್ದಕ್ಕಿದ್ದಂತೆ ರಾಜಕೀಯಕ್ಕೆ ರಮ್ಯಾ ಗುಡ್‌ಬೈ ಹೇಳಿ ಒಂದು ವರ್ಷಗಳ ಕಾಲ ಮರೆಯಾದರು, ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದೇ ಪ್ರೇಕ್ಷಕರಿಗೆ ಪ್ರಶ್ನೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ವರ್ಷಗಳ ಕಾಲ ಕಾಣಿಸಿಕೊಳ್ಳದ ರಮ್ಯಾ ಮತ್ತೆ ಸೋಶಿಯಲ್ ಮೀಡಿಯಾಕ್ಕೆ ಮರಳಿದ್ದಾರೆ.ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳ ಬಗ್ಗೆ ಅಪ್ಡೇಟ್ ನೀಡುತ್ತಿರುವ ರಮ್ಯಾ 39ನೇ ಹುಟ್ಟುಹಬ್ಬದ ದಿನದಂದು ತಮ್ಮ ಇನ್ಸ್ಟಾಗ್ರಾಂ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
  ಚಿತ್ರರಂಗಕ್ಕೆ ಮತ್ತೆ ರಮ್ಯಾ ರೀ ಎಂಟ್ರಿ..?

  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನರಾದ ವೇಳೆಯಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿದ್ದ ನಟಿ ರಮ್ಯಾ, ಪುನೀತ್ ಕುರಿತು ಮಾಧ್ಯಮಗಳಲ್ಲಿ ಮಾತನಾಡುವಾಗ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎಂಬ ಆಸೆ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ರು. ಈ ಹಿಂದೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ
  ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ ಎಂದಿದ್ದ ರಮ್ಯಾ, ಪುನೀತ್ ನಿಧನರಾದ ದಿನ, ಮಾತನಾಡುವಾಗ ಪುನೀತ್ ಜೊತೆಗೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಆಸೆ ಇತ್ತು ಅಂತ ತಮ್ಮ ಮನದ ಆಸೆ ಬಿಚ್ಚಿಟ್ಟಿದ್ರು.

  ಇದನ್ನೂ ಓದಿ :ಅಪ್ಪು ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ: ರಮ್ಯಾ ಭಾವನಾತ್ಮಕ ಪೋಸ್ಟ್

  ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ರಮ್ಯಾ..

  ಪಾಲಿಟಿಕ್ಸ್ ಹಾಗೂ ಸಿನಿಮಾಗೆ ಸಣ್ಣ ವಿದಾಯ ಹೇಳಿರುವ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.. ಹಲವು ವರ್ಷಗಳ ಬಳಿಕ ಮತ್ತೆ ಸೋಶಿಯಲ್ ಮೀಡಿಯಾಗೆ ರೀ ಎಂಟ್ರಿ ಕೊಟ್ಟಿರುವುದರಿಂದ, ಫುಲ್ ಆಕ್ಟಿವ್ ಆಗಿರುವ ರಮ್ಯಾ, ಪ್ರತಿಯೊಂದು ಸಣ್ಣ ವಿಷಯಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಳ್ಳುತ್ತಿದ್ದಾರೆ.. ಅಲ್ಲದೆ ಪ್ರಸ್ತುತ ಚಿತ್ರರಂಗದಲ್ಲಿ ಇರುವ ನಟ-ನಟಿಯರ ಸಿನಿಮಾಗಳನ್ನು ನೋಡಿ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ..

  ಇನ್ನು ಸುದೀಪ್ ಅಭಿನಯದ ಕೋಟಿಗೊಬ್ಬ-3 ಟ್ರೇಲರ್ ಅದ್ಭುತವಾಗಿದೆ. ಕಿಚ್ಚ ಸುದೀಪ್ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ? ಎಂದು ರಮ್ಯಾ ಬರೆದುಕೊಂಡಿದ್ರು.. ಅಲ್ಲದೇ ರಕ್ಷಿತಾ ಬರ್ತಡೇಗೆ ಸೀರೆ ಉಡುಗೊರೆಯನ್ನು ನೀಡಿ, ರಾಧಿಕಾ ಪಂಡಿತ್ ಫೋಟೋಗೆ ಕಮೆಂಟ್ ಮಾಡಿ ನಾನು ಇನ್ನೂ ಸಹ ಸಿನಿಮಾ ರಂಗದವರು ಜೊತೆ ಉತ್ತಮ ಸ್ನೇಹ ಕಾಪಾಡಿಕೊಂಡಿದ್ದೇನೆ ಎಂದು ತೋರಿಸಿದ್ರು..

  ಇದನ್ನೂ ಓದಿ :ನಿಮಗೆ ವಯಸ್ಸೇ ಆಗಲ್ವಾ? ರಮ್ಯಾ ಪ್ರಶ್ನೆಗೆ ಸುದೀಪ್ ನೀಡಿದ ಪ್ರತಿಕ್ರಿಯೆ ಹೀಗಿತ್ತು

  ಶಾರುಖ್ ಪುತ್ರನ ಬಂಧನ ಪ್ರಶ್ನೆ ಮಾಡಿದ್ದ ರಮ್ಯಾ ..

  ಸದ್ಯದ ಮಟ್ಟಿಗೆ ರಾಜಕೀಯಕ್ಕೂ ವಿರಾಮ ಹಾಕಿರುವ ಮೋಹಕ ತಾರೆ, ಈಗಲೂ ರಾಜಕೀಯ ವಿಷಯಗಳ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತುತ್ತಲೇ ಇರುತ್ತಾರೆ.. ಇತ್ತೀಚಿಗೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಖಾನ್ ಬಂಧನದ ಬಗ್ಗೆ ಪೋಸ್ಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು..ಅಲ್ಲದೆ ಪರೋಕ್ಷವಾಗಿ ಈಗಲೂ ಕಾಂಗ್ರೆಸ್ ನಾಯಕರಿಗೆ ರಮ್ಯಾ ಬೆಂಬಲ ನೀಡುತ್ತಿದ್ದಾರೆ..

  ಇನ್ನು 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ,ರಂಗ ಎಸ್ಎಸ್ಎಲ್ಸಿ,ಎಕ್ಸ್ ಕ್ಯೂಸ್ ಮಿ,ಕಂಠಿ ಗೌರಮ್ಮ,ಅಮೃತದಾರೆ, ಜೊತೆ ಜೊತೆಯಲಿ,ಅರಸು,ಕಿಚ್ಚ ಹುಚ್ಚ,ಸಿದ್ಲಿಂಗು ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ
  Published by:ranjumbkgowda1 ranjumbkgowda1
  First published: