Ragini Dwivedi: ತುಪ್ಪದ ಬೆಡಗಿ ಸಿನಿ ಲೈಫ್​ನಲ್ಲಿ​ ಏನ್ ಆಗ್ತಿದೆ? ಏನ್ ಹೇಳಿದ್ರು ರಾಗಿಣಿ?

ತಮಿಳು ಚಿತ್ರದ ಬಳಿಕ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗೋ ಶೀಲಾ ಚಿತ್ರವನ್ನೂ ರಾಗಿಣಿ ಒಪ್ಪಿಕೊಂಡಿದ್ದಾರೆ. ಹೀಗೆ ರಾಗಿಣಿ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಾನೇ ಇದ್ದಾರೆ.

ರಾಗಿಣಿ ಹೊಸ ರೂಪ ಹೊಸ ಉತ್ಸಾಹ

ರಾಗಿಣಿ ಹೊಸ ರೂಪ ಹೊಸ ಉತ್ಸಾಹ

  • Share this:
    ರಾಗಿಣಿ ದ್ವಿವೇದಿ (Ragini DwivediI)ಸದ್ಯ ಏನ್ ಮಾಡುತ್ತಿದ್ದಾರೆ. ಫ್ಯಾಷನ್  ಶೋಗಳನ್ನ ಮಾಡ್ತಾನೇ ಸಿನಿಮಾ ದಿಂದ ದೂರವೇ ಉಳಿದು ಬಿಟ್ಟರೇ, ಏನ್ ಆಗುತ್ತಿದೆ ತುಪ್ಪದ ಬೆಡಗಿ ರಾಗಿಣಿಯ (Cini Life)ಸಿನಿ ಲೈಫ್​ ಅಲ್ಲಿ. ಈ ಎಲ್ಲ ಪ್ರಶ್ನೆಗಳಿಗೆ ಇಂಟ್ರಸ್ಟಿಂಗ್ ಆಗಿಯೇ ರಾಗಿಣಿ ಉತ್ತರ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಇದ್ದೇನೆ. ಸಿನಿಮಾಗಳು ಇವೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದೇನೆ. ಪರ ಭಾಷೆಯಲ್ಲಿ ಮೂರು ಸಿನಿಮಾ ಇವೆ. ಅದರಲ್ಲಿ ಒಂದು ಕಂಪ್ಲೀಟ್ ಆಗಿದೆ. ಮಲೆಯಾಳಂನ ಶೀಲಾ ಕನ್ನಡದಲ್ಲೂ ರೆಡಿ ಆಗುತ್ತಿದೆ. ಹೀಗೆ ರಾಗಿಣಿ (Ragini Dwivedi Film Journey) ಸಿನಿಮಾದ ತಮ್ಮ ಈಗಿನ ಜರ್ನಿಯ ಚಿತ್ರಣ ಕೊಡ್ತಾ ಹೋದ್ರು.

    ತುಪ್ಪದ ಬೆಡಗಿ ಕನ್ನಡದವ್ರೇ ಆಗಿ ರಾಗಿಣಿ ಕೆಲಸ ಮಾಡ್ತಾನೇ ಹೋಗುತ್ತಿದ್ದಾರೆ. ಜರ್ನಿಯಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿವೆ. ಅದು ಎಲ್ಲರಿಗೂ ತಿಳಿದಿರೋ ವಿಷಯವೇ. ಆದರೆ, ಅದರಿಂದ ಏನೂ ಎಫೆಕ್ಟ್ ಆದಂತಿಲ್ಲ. ರಾಗಿಣಿ ಮೊದಲು ಹೇಗಿದ್ದರೋ ಅದೇ ಮನಸ್ಥಿತಿಯಲ್ಲಿಯೇ ಬಿಂದಾಸ್ ಆಗಿಯೇ ಲವಲವಿಕೆಯಿಂದಲೇ ಇದ್ದಾರೆ. ತಲೆ ಮೇಲೆ ಏನೋ ಬಿದ್ದು ಹೋಗಿದೆ ಅನ್ನೋ ಹಾಗೆ ರಾಗಿಣಿ ಏನೂ ಇಲ್ಲ. ಏನ್ ಕೇಳಿದರೂ ಅಷ್ಟೇ, ಖುಷಿಯಾಗಿಯೇ ರಿಯಾಕ್ಟ್ ಮಾಡ್ತಾರೆ.

    ರಾಗಿಣಿ ಹೇಗಿದ್ದೀರಾ ಅಂತ ಕೇಳಿದ್ರೆ ಏನ್ ಹೇಳ್ತಾರೆ ಗೊತ್ತೇ ?
    ರಾಗಿಣಿಯನ್ನ ಹೇಗಿದ್ದೀರಿ ? ತುಂಬಾ ಬಿಜಿ ಅನಿಸುತ್ತದೆ ? ಕನ್ನಡದಲ್ಲಿ ಎಷ್ಟು ಪ್ರೋಜೆಕ್ಟ್ ಮಾಡ್ತಾ ಇದ್ದೀರಾ ? ಹೀಗೆ ಪ್ರಶ್ನೆ ಕೇಳಿದ್ರೆ ? ಪಟ..ಪಟನೆ ಸಿನಿಮಾಗಳ ಲಿಸ್ಟ್ ಹೇಳ್ತಾರೆ. ಹೊಸ ಹೊಸ ಫ್ಯಾಷನ್ ಶೋಗಳ ಕಲಫುಲ್ ಚಿತ್ರಣವನ್ನೆ ಕಟ್ಟಿಕೊಡುತ್ತಾರೆ.

    ತಮಿಳಿನಲ್ಲಿ ಮೂರು ಸಿನಿಮಾ ಒಂದು ಈಗ ಕಂಪ್ಲೀಟ್
    ನಿಜ, ರಾಗಿಣಿ ಸಿನಿಮಾಗಳನ್ನ ಮಾಡ್ತಾನೇ ಇದ್ದಾರೆ. ಕನ್ನಡವಷ್ಟೇ ಅಲ್ಲ, ತಮಿಳಿನಲ್ಲೂ ಎರಡು ಮತ್ತು ಒಂದು ಅಂತ ಮೂರು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಸಂತಾನಂ ಅಭಿನಯದ ಕಿಕ್ ಕೂಡ ಒಂದು. ಅದರ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ.

    ಇದರ ಹೊರತಾಗಿ ಸುಂದರ್ ಸಿ ಅವರ ಒಂದು ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಇದು ಇವರ ಮೊದಲ ಸಿನಿಮಾ. ಇದಾದ ಬಳಿಕ ಇಡೀ ಕಥೆ ತಮ್ಮ ಮೇಲೆ ಇರೋ ಮತ್ತೊಂದು ಪ್ರಾಜೆಕ್ಟ್ ಅನ್ನ ಕೂಡ ರಾಗಿಣಿ ಒಪ್ಪಿಕೊಂಡಿದ್ದಾರೆ. ಹೀಗೆ ಓಕೆ ಅಂತಲೇ ಹೇಳಿದ ಚಿತ್ರಗಳಲ್ಲಿ ಸಂತಾನಂ ಜೊತೆಗೆ ಅಭಿನಯಿಸಿರೋ ಕಿಕ್ ಮೊದಲು ರಿಲೀಸ್ ಆಗುತ್ತದೆ.

    ಮಲೆಯಾಳಂ ಶೀಲಾ ಸಿನಿಮಾ ಎಷ್ಟು ಭಾಷೆಯಲ್ಲಿ ಬರ್ತದೆ
    ತಮಿಳು ಚಿತ್ರದ ಬಳಿಕ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗೋ ಶೀಲಾ ಚಿತ್ರವನ್ನೂ ರಾಗಿಣಿ ಒಪ್ಪಿಕೊಂಡಿದ್ದಾರೆ. ಹೀಗೆ ರಾಗಿಣಿ ಸಿನಿಮಾಗಳ ಮೇಲೆ ಸಿನಿಮಾ ಮಾಡ್ತಾನೇ ಇದ್ದಾರೆ. ಕನ್ನಡದಲ್ಲೂ ಒಂದೆರಡು ಸಿನಿಮಾ ಮಾಡ್ತಿದ್ದಾರೆ. ಒಂದು ಚಿತ್ರದಲ್ಲಂತೂ ಭಾರೀ ಭರ್ಜರಿ ಆಕ್ಷನ್ ಕೂಡ ಮಾಡ್ತಿದ್ದಾರೆ.

    ಸಿನಿಮಾ ಜತೆಗೆ ಫ್ಯಾಷನ್ ಲೋಕದಲ್ಲೂ ಟಾಪರ್
    ಇದರ ಮಧ್ಯೆ ಟಾಪ್ ಡಿಸೈನರ್​ಗಳ ಫ್ಯಾಷನ್ ಶೋದಲ್ಲೂ ರಾಂಪ್ ವಾಕ್ ಮಾಡ್ತಾನೇ ಇದ್ದಾರೆ. ಹೀಗೆ ಹೆಚ್ಚು ಹೇಳದೇ ಕಡಿಮೇನೂ ಅನಿಸದ ರೀತಿಯಲ್ಲಿ ತಮ್ಮ ಚಿತ್ರಗಳ ಪುಟ್ಟ ಚಿತ್ರಣವನ್ನ ಕೊಡೋ ರಾಗಿಣಿ ಯೋಗ ಮಾಡಿ ಸೂಪರ್ ಆಗಿಯೇ ಇರಿ ಅಂತಲೂ ಹೆಲ್ತ್ ಟಿಪ್ಸ್ ಕೊಡ್ತಾರೆ.
    First published: