HOME » NEWS » Entertainment » ACTRESS RAGINI DWIVEDI HAD A DISCUSSION WITH BBMP POURAKARMIKA ZP

ಪೌರ ಕಾರ್ಮಿಕರೊಂದಿಗೆ ನಟಿ ರಾಗಿಣಿ ಚಾಯ್ ಪೇ ಚರ್ಚಾ: ವಿಡಿಯೋ ವೈರಲ್

ಬದಲಾಗಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕೊರೋನಾ ವೈರಸ್ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸದ್ಯ ಚಿತ್ರರಂಗ ಬಂದ್ ಆಗಿರುವುದರಿಂದ ರಾಗಿಣಿ ಕೂಡ ಫುಲ್ ಫ್ರಿಯಾಗಿದ್ದಾರೆ.

news18-kannada
Updated:March 29, 2020, 4:21 PM IST
ಪೌರ ಕಾರ್ಮಿಕರೊಂದಿಗೆ ನಟಿ ರಾಗಿಣಿ ಚಾಯ್ ಪೇ ಚರ್ಚಾ: ವಿಡಿಯೋ ವೈರಲ್
ರಾಗಿಣಿ ದ್ವಿವೇದಿ
  • Share this:
ಸ್ಯಾಂಡಲ್​ವುಡ್ ನೀಳಕಾಲ ಸುಂದರಿ ರಾಗಿಣಿ ದ್ವಿವೇದಿ ಅಭಿಮಾನಿಗಳಿಗಾಗಿ ಸಾಕಷ್ಟು ಸಮಯ ವ್ಯಯಿಸುತ್ತಾರೆ ಎಂಬ ಮಾತುಗಳು ಗಾಂಧಿನಗರಲ್ಲಿದೆ. ಆದರೆ ಇದೀಗ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ತುಪ್ಪದ ಬೆಡಗಿ ಯಾವುದೇ ಫ್ಯಾನ್ಸ್​ನ್ನು ಭೇಟಿಯಾಗುತ್ತಿಲ್ಲ.

ಬದಲಾಗಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕೊರೋನಾ ವೈರಸ್ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸದ್ಯ ಚಿತ್ರರಂಗ ಬಂದ್ ಆಗಿರುವುದರಿಂದ ರಾಗಿಣಿ ಕೂಡ ಫುಲ್ ಫ್ರಿಯಾಗಿದ್ದಾರೆ.

ಆದರೆ ವೈರಾಣುವಿನ ಭೀತಿ ನಡುವೆ ಫ್ರಿಯಾಗದಿರುವುದು ಬೆಂಗಳೂರಿನ ಪೌರಕಾರ್ಮಿಕರು. ಹೀಗಾಗಿಯೇ ಇಂದು ನಟಿ ರಾಗಿಣಿ ಇವರನ್ನು ಗುರುತಿಸಿ ಮಾತನಾಡಿಸಿ ಸ್ಥೈರ್ಯ ತುಂಬಿದ್ದಾರೆ. ಒಂದು ನಗರವನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಕೆಲಸ ಮಾಡುವ ಕಾರ್ಮಿಕರೊಂದಿಗೆ ರಾಗಿಣಿ ಮಾತನಾಡುತ್ತಿರುವ ವಿಡಿಯೋ ಚಿತ್ರೀಕರಿಸಿದ್ದಾರೆ.

ಅವರಿಗೆ ಚಾಯ್ ನೀಡಿ ಅವರ ದಿನನಿತ್ಯದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಗಿಣಿ ಇವರ ನಿಸ್ವಾರ್ಥ ಸೇವೆಯಿಂದ ನಾವು ತುಂಬಾ ಕಲಿಯಬೇಕಿದೆ ಎಂದು ಬರೆದುಕೊಂಡಿದ್ದಾರೆ.

First published: March 29, 2020, 4:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories