ಜೈಲಿನಿಂದ ಹೊರಬಂದ ಬಳಿಕ ರಾಗಿಣಿ ಮೆಲ್ಲನೆ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಗಳಲ್ಲಿ ಒಂದೊಂದೇ ಪೋಸ್ಟ್ ಮಾಡಲಾರಂಭಿಸಿದ್ದಾರೆ. ಜೊತೆಗೆ ಪುಸ್ತ ಓದುವುದು, ಮೊದಲಿನಂತೆ ಮನೆಯಲ್ಲಿ ಅಡುಗೆ ಮಾಡುತ್ತಾ ಅದರ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ ಕುಟುಂಬದವರೊಂದಿಗೆ ಸೇರಿ ದೇವಾಲಯ ಹಾಗೂ ದರ್ಗಾ ಅಂತ ಸುತ್ತಾಡುತ್ತಿದ್ದಾರೆ. ದಿನ ಕಳೆದಂತೆ ಎಲ್ಲ ವಿಷಯಗಳನ್ನೂಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದ ರಾಗಿಣಿ ದ್ವಿವೇದಿ, ಜೈಲಿನಿಂದ ಹೊರ ಬಂದ ನಂತರ ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಲೈವ್ ನಲ್ಲಿ ಅಭಿಮಾನಿಗಳ ಜತೆ ಮಾತನಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿನ್ನೆ ಸಂಜೆ ಲೈವ್ ಬಂದಿದ್ದ ನಟಿ ತುಂಬಾ ಸಮಯ ನೆಟ್ಟಿಗರ ಜೊತೆ ಮಾತನಾಡಿದ್ದಾರೆ. ಅವರು ಮಾಡುತ್ತಿದ್ದ ಕಮೆಂಟ್ಗಳನ್ನೆಲ್ಲ ಓದುತ್ತಾ ತನ್ನ ಜೀವನದಲ್ಲಿ ಎದುರಾದ ಕೆಟ್ಟ ಸಮಯದ ಬಗ್ಗೆಯೂ ಮಾತನಾಡಿದ್ದಾರೆ.
ನಿನ್ನೆ ಸಂಜೆ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ನಟಿ ರಾಗಿಣಿ ದ್ವಿವೇದಿ, ನಿಮ್ಮೆಲ್ಲರ ಜತೆ ಮಾತನಾಡುವ ಸಮಯ, ಶಕ್ತಿ, ಖುಷಿ ಈಗ ಸಿಕ್ಕಿದೆ ಎಂದು ಮಾತು ಆರಂಭಿಸಿದ್ದರು. ನಾನು ಮನೆಗೆ ವಾಪಸ್ ಬಂದು 2 ವಾರಗಳಾಗಿವೆ. ಈಗಿನ್ನೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಈ ಘಟನೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ, ಸಮಯ ಬಂದಾಗ ಎಲ್ಲ ವಿಷಯಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
View this post on Instagram
ಇದನ್ನೂ ಓದಿ: ನಾಳೆ ರಿಲೀಸ್ ಆಗಲಿದೆ ರಾಬರ್ಟ್ ಚಿತ್ರದ ಜೈ ಶ್ರೀರಾಮ್ ತೆಲುಗು ಹಾಡು
ನನ್ನ ಧೈರ್ಯ, ಪಾಸಿಟಿವಿಟಿ ಬಗ್ಗೆ ತುಂಬಾ ಜನ ಕೇಳ್ತಾರೆ, ಅದಕ್ಕೆ ಕಾರಣ ನನ್ನ ತಂದೆ ತಾಯಿ. ಪ್ರತಿಯೊಂದು ಹಂತದಲ್ಲಿಯೂ ನನ್ನ ಜತೆಗಿದ್ದರು. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ ಅಂತ ಧೈರ್ಯ ತುಂಬಿದರು. ಈಗಲೂ ರಾತ್ರಿಯಲ್ಲಿ ನನಗೆ ಸರಿಯಾಗಿ ನಿದ್ದೆ ಬರಲ್ಲ. ನಾನಿನ್ನೂ ಚೇತರಿಸಿಕೊಳ್ಳುತ್ತಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಭಾವುಕರಾದ ನಟಿ ರಾಗಿಣಿ ಕಣ್ಣೀರಿಟ್ಟಿದ್ದಾರೆ.
View this post on Instagram
ಇದನ್ನೂ ಓದಿ: Rashmika Mandanna: ಆರಂಭವಾಯ್ತು ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಚಿತ್ರೀಕರಣ
ರಾಗಣಿ ಕೈಯಲ್ಲಿ ಈಗಾಗಲೇ ಒಂದೆರಡು ಸಿನಿಮಾಗಳಿವೆ. ಅವುಗಳನ್ನು ಪೂರ್ಣಗೊಳಿಸಿದ ನಂತರ ಉಳಿದ ಪ್ರಾಜೆಕ್ಟ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಾಗಿ ರಾಗಿಣಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ