Ragini Arrested: ಸ್ಯಾಂಡಲ್​​ವುಡ್​​ ಡ್ರಗ್ಸ್​ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ಬಂಧನ

ಜಯನಗರ ಆರ್​​ಟಿಒ ಕಚೇರಿಯ ಸಹಾಯಕ ಕ್ಲರ್ಕ್ ರವಿಶಂಕರ್ ಹಾಗೂ ಇಂಟಿರಿಯರ್ ಡಿಸೈನರ್ ರಾಹುಲ್​​ ಬೆನ್ನಲ್ಲೀಗ ನಟಿ ರಾಗಿಣಿಯನ್ನು ಬಂಧಿಸಲಾಗಿದೆ.

ನಟಿ ರಾಗಿಣಿ ಬಂಧನ

ನಟಿ ರಾಗಿಣಿ ಬಂಧನ

  • Share this:
    ಬೆಂಗಳೂರು(ಸೆ.04): ಸ್ಯಾಂಡಲ್​​ವುಡ್ ಡ್ರಗ್ಸ್ ಜಾಲದ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಕುರಿತು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು ಈಗ ಬಂಧಿಸಿದ್ದಾರೆ. ಜಯನಗರ ಆರ್​​ಟಿಒ ಕಚೇರಿಯ ಸಹಾಯಕ ಕ್ಲರ್ಕ್ ರವಿಶಂಕರ್ ಹಾಗೂ ಇಂಟಿರಿಯರ್ ಡಿಸೈನರ್ ರಾಹುಲ್​​ ಬೆನ್ನಲ್ಲೀಗ ನಟಿ ರಾಗಿಣಿಯನ್ನು ಬಂಧಿಸಿರುವುದಾಗಿ ನ್ಯೂಸ್​​-18 ಕನ್ನಡಕ್ಕೆ ಸಿಸಿಬಿ ಪೊಲೀಸ್​​ ಮೂಲಗಳು ತಿಳಿಸಿವೆ.

    ಇನ್ನು, ಡ್ರಗ್ಸ್ ಜಾಲದ ಪ್ರಕರಣದಲ್ಲಿ ಬಂಧನವಾಗಿರುವ ಸ್ಯಾಂಡಲ್​​ವುಡ್ ನಟಿ ರಾಗಿಣಿ ದ್ವಿವೇದಿಯವರಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲರ ತಂಡವೊಂದು ಸಂಜೆ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿತ್ತು. ಇವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಸೆಪ್ಟೆಂಬರ್​​ 7ಕ್ಕೆ ಮುಂದೂಡಿದೆ.

    ಸ್ಯಾಂಡಲ್​​​ವುಡ್​ಗೆ ಡ್ರಗ್ಸ್ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆದರು. ಇಂದು ಬೆಳಗ್ಗೆಯೇ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ರಾಗಿಣಿಯವರ ಯಲಹಂಕದ ಜ್ಯುಡಿಷಿನಲ್​​ ಲೇಔಟ್​​​​ನಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಶೋಧ ಕಾರ್ಯ ನಡೆಸಿದ್ದರು.

    ಇದನ್ನೂ ಓದಿ: DK Shivakumar: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ಗೆ ತೀವ್ರ ಜ್ವರ - ಖಾಸಗಿ ಆಸ್ಪತ್ರೆಗೆ ದಾಖಲು

    ಸತತ 3 ಗಂಟೆ ಶೋಧ ಕಾರ್ಯ ಬಳಿಕ ಮನೆ ಕೀ, ಕಾರು ಕೀ, ಮೊಬೈಲ್ ಅನ್ನು ವಶಕ್ಕೆ ಪಡೆದು ರಾಗಿಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಸಿಸಿಬಿ ಪೊಲೀಸರು ರಾಗಿಣಿಯವರನ್ನು 7 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದರು. ಆದರೀಗ, ಮಾದಕ ವಸ್ತು ಮಾರಾಟ ದಂಧೆ ಪ್ರಕರಣದಲ್ಲಿ ರಾಗಿಣಿ ಬಂಧನವಾಗಿದೆ.
    Published by:Ganesh Nachikethu
    First published: